ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪೃಥ್ವಿ ಶಾಗೆ ಎದುರಾಯ್ತು ಸಂಕಷ್ಟ, ತನಿಖೆ ಕೈಗೆತ್ತಿಕೊಂಡ ದಿಲೀಪ್‌ ವೆಂಗ್ಸರ್ಕಾರ್‌!

ಮಹಾರಾಷ್ಟ್ರ ಹಾಗೂ ಮುಂಬೈ ತಂಡಗಳ ನಡುವಣ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾ ಹಾಗೂ ಮುಶೀರ್‌ ಖಾನ್‌ ಅವರ ನಡುವೆ ನಡೆದಿದ್ದ ಜಗಳದ ಪ್ರಕರಣದ ತನಿಖೆಯನ್ನು ದಿಲೀಪ್‌ ವೆಂಗ್ಸರ್ಕಾರ್‌ ಕೈಗೆತ್ತಿಕೊಳ್ಳಲಿದ್ದಾರೆ. ಆ ಮೂಲಕ ಮುಂಬೈ ತೊರೆದು ಮಹಾರಾಷ್ಟ್ರ ಪರ ರಣಜಿ ಟ್ರೋಫಿ ಆಡಲು ಎದುರು ನೋಡುತ್ತಿರುವ ಪೃಥ್ವಿ ಶಾಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

ರಣಜಿ ಟ್ರೋಫಿಗೂ ಮುನ್ನ ಪೃಥ್ವಿ ಶಾಗೆ ಎದುರಾಯ್ತು ಸಂಕಷ್ಟ!

ಪೃಥ್ವಿ ಶಾ-ಮುಶೀರ್‌ ಖಾನ್‌ ಜಗಳದ ಘಟನೆ ತನಿಖೆ ನಡೆಯಲಿದೆ. -

Profile Ramesh Kote Oct 9, 2025 10:59 PM

ನವದೆಹಲಿ: ಮಹಾರಾಷ್ಟ್ರ ಪರ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಆಡಲು ಎದುರು ನೋಡುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರಿಗೆ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವಣ ಅಭ್ಯಾಸ ಪಂದ್ಯದ ಮೊದಲನೇ ದಿನ ಪೃಥ್ವಿ ಶಾ ಹಾಗೂ ಮುಶೀರ್‌ ಖಾನ್‌ ಅವರ ನಡುವೆ ಜಗಳ ನಡೆದಿತ್ತು. ಇವರ ಜಗಳದಿಂದ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್‌ ದಿಗ್ಗಜ ದಿಲೀಪ್‌ ವೆಂಗ್ಸರ್ಕಾರ್‌ ಅವರು ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದಾರೆಂದು ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ತಿಳಿಸಿದೆ.

ಅಭ್ಯಾಸ ಪಂದ್ಯದ ಮೊದಲನೇ ದಿನ ಮೊದಲು ಬ್ಯಾಟ್‌ ಮಾಡಿದ್ದ ಮಹಾರಾಷ್ಟ್ರ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಪೃಥ್ವಿ ಶಾ, ಅದ್ಭುತವಾಗಿ ಬ್ಯಾಟ್‌ ಮಾಡಿ ಶತಕವನ್ನು ಸಿಡಿಸಿದ್ದರು. ಆ ಮೂಲಕ ತಮ್ಮ ಮಾಜಿ ತಂಡ ಮುಂಬೈಗೆ ತಿರುಗೇಟು ನೀಡಿದ್ದರು. ನಂತರ ತಮ್ಮ ಅತ್ಯುತ್ತಮ ಬ್ಯಾಟಿಂಗ್‌ ಮುಂದುವರಿಸಿದ್ದ ಅವರು, 180ಕ್ಕೂ ಅಧಿಕ ರನ್‌ ಗಳಿಸಿದ್ದರು. ಆದರರ, ಮುಶೀರ್‌ ಖಾನ್‌ ಅವರ ಎಸೆತದಲ್ಲಿ ಸ್ವೀಪ್‌ ಶಾಟ್‌ ಆಡಲು ಹೋಗಿ ಡೀಪ್‌ ಫೈನ್‌ ಲೆಗ್‌ನಲ್ಲಿ ಕ್ಯಾಚ್‌ ಕೊಟ್ಟರು. ಈ ವೇಳೆ ಪೆವಿಲಿಯನ್‌ಗೆ ಹೋಗುತ್ತಿದ್ದಾಗ ಪೃಥ್ವಿ ಶಾ ಹಾಗೂ ಮುಶೀರ್‌ ಖಾನ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ದೊಡ್ಡ ರಂಪಾಟ ನಡೆದಿತ್ತು. ಅಂಪೈರ್‌ಗಳು ಮಧ್ಯೆ ಪ್ರವೇಶಿಸಿ ಇಬ್ಬರೂ ಆಟಗಾರರನ್ನು ನಿಯಂತ್ರಿಸಿದ್ದರು.

ಶತಕ ಬಾರಿಸಿದ ಬಳಿಕ ಮುಂಬೈ ತಂಡದ ಮಾಜಿ ಸಹ ಆಟಗಾರರ ಜೊತೆ ಪೃಥ್ವಿ ಶಾ ಕಿರಿಕ್‌! ವಿಡಿಯೊ

ಈ ಘಟನೆಯ ನಂತರ, ಮುಂಬೈ ರಣಜಿ ತಂಡದ ಆಯ್ಕೆ ಸಮಿತಿಯ ಸಂದರ್ಭದಲ್ಲಿ ದಿಲೀಪ್ ವೆಂಗ್ಸರ್ಕಾರ್ ಇಬ್ಬರೂ ಆಟಗಾರರೊಂದಿಗೆ ಮಾತನಾಡುತ್ತಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಕಾರ್ಯದರ್ಶಿ ಅಭಯ್ ಹಡಪ್ ಬಹಿರಂಗಪಡಿಸಿದ್ದಾರೆ.

"ಗುರುವಾರ (ಮುಂಬೈ ರಣಜಿ ತಂಡದ) ಆಯ್ಕೆ ಸಮಿತಿ ಸಭೆ ನಡೆಯಲಿದೆ, ಆದ್ದರಿಂದ ಮೈದಾನದಲ್ಲಿ ಏನಾಯಿತು ಎಂದು ನಾವು ಮುಂಬೈ ನಾಯಕ, ತರಬೇತುದಾರ ಮತ್ತು ಆಟಗಾರನನ್ನು ಕೇಳುತ್ತೇವೆ. ನಮ್ಮ ಆಯ್ಕೆ ಸಮಿತಿ ಸಭೆಯಲ್ಲಿ ಈ ಘಟನೆಯ ವರದಿಯನ್ನು ನಾವು ಪಡೆಯುತ್ತೇವೆ ಮತ್ತು ನಮ್ಮ ಸಲಹೆಗಾರರಾಗಿರುವ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕಾರ್ ಆಟಗಾರರೊಂದಿಗೆ ಮಾತನಾಡುತ್ತಾರೆ," ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಕಾರ್ಯದರ್ಶಿ ಅಭಯ್ ಹಡಪ್ ಮಿಡ್‌-ಡೇಗೆ ತಿಳಿಸಿದ್ದಾರೆ.



ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಪ್ರತಿಕ್ರಿಯೆ

ಇದಲ್ಲದೆ, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಕಮಲೇಶ್ ಪಿಸಾಲ್ ಕೂಡ ಆಟಗಾರರಲ್ಲಿ ಶಿಸ್ತಿನ ಮಹತ್ವವನ್ನು ಒತ್ತಿ ಹೇಳಿ ಈ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

"ಘಟನೆಯ ವರದಿಗಾಗಿ ನಾನು ಇನ್ನೂ ಕಾಯುತ್ತಿದ್ದೇನೆ. ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನಾನು ಪಡೆಯುತ್ತೇನೆ ಮತ್ತು ಏನಾದರೂ ಕಂಡುಬಂದರೆ, ಪರಿಸ್ಥಿತಿಯ ಗಂಭೀರತೆಯನ್ನು ಅವಲಂಬಿಸಿ ಮತ್ತು ಶಿಸ್ತಿನ ಮಹತ್ವವನ್ನು ಪರಿಗಣಿಸಿ, ನಾವು ಇಬ್ಬರೂ ಆಟಗಾರರೊಂದಿಗೆ (ಪೃಥ್ವಿ ಶಾ ಮತ್ತು ಮುಶೀರ್) ಮಾತನಾಡುತ್ತೇವೆ. ಆಟಗಾರರಲ್ಲಿ ಶಿಸ್ತು ಬಹಳ ಮುಖ್ಯವಾದ ಅಂಶವಾಗಿದೆ," ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ನ ಕಾರ್ಯದರ್ಶಿ ಅಡ್ವ. ಕಮಲೇಶ್ ಪಿಸಾಲ್ ಮಿಡ್‌ಡೇಗೆ ತಿಳಿಸಿದ್ದಾರೆ.