ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿನೋದ್‌ ಕಾಂಬ್ಳಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಸಹೋದರ ವೀರೇಂದ್ರ ಕಾಂಬ್ಳಿ!

ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯದ ಬಗ್ಗೆ ಅವರ ಕಿರಿಯ ಸಹೋದರ ವೀರೇಂದ್ರ ಕಾಂಬ್ಳಿ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ವಿನೋದ್ ಕಾಂಬ್ಳಿ ಅವರು ಇನ್ನೂ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರ ಸಹೋದರ ಹೇಳಿದ್ದಾರೆ.

ವಿನೋದ್‌ ಕಾಂಬ್ಳಿಯ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ!

ವಿನೋದ್‌ ಕಾಂಬ್ಳಿ ಆರೋಗ್ಯದ ಬಗ್ಗೆ ವೀರೇಂದ್ರ ಕಾಂಬ್ಳಿ ಮಾಹಿತಿ ನೀಡಿದ್ದಾರೆ.

Profile Ramesh Kote Aug 20, 2025 10:05 PM

ನವದೆಹಲಿ: ಭಾರತ ಕ್ರಿಕೆಟ್ ತಂಡದ (Indian Cricket Team) ಮಾಜಿ ಆಟಗಾರ ವಿನೋದ್ ಕಾಂಬ್ಳಿಯ (Vinod Kambli) ಆರೋಗ್ಯದ ಬಗ್ಗೆ ಅವರ ಕಿರಿಯ ಸಹೋದರ ವೀರೇಂದ್ರ ಕಾಂಬ್ಳಿ (Virender kambli) ದೊಡ್ಡ ಮಾಹಿತಿ ನೀಡಿದ್ದಾರೆ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಕಾಂಬ್ಳಿ ಇನ್ನೂ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರು ಮಾತನಾಡುವಲ್ಲಿ ಇನ್ನೂ ತೊಂದರೆ ಅನುಭವಿಸುತ್ತಿದ್ದಾರೆ, ಆದರೆ ಅವರ ಆರೋಗ್ಯ ಕ್ರಮೇಣ ಸುಧಾರಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮೂತ್ರ ಸೋಂಕಿನ ಸಮಸ್ಯೆಯ ಕಾರಣ ಕಾಂಬ್ಳಿ ಅವರನ್ನು ಕಳೆದ ವರ್ಷ ಥಾಣೆಯ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆಯ ಸಮಯದಲ್ಲಿ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿತ್ತು. ಇದರಿಂದಾಗಿ ಅವರು 2025ರ ಜನವರಿ ಒಂದರಂದು ಆಸ್ಪತ್ರೆಯಲ್ಲಿಯೇ ಇದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಕಾಂಬ್ಳಿ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ವಿನೋದ್ ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ದೀರ್ಘಕಾಲದವರೆಗೆ ಯಾವುದೇ ಮಾಹಿತಿ ಇರಲಿಲ್ಲ. ಅದೇ ಸಮಯದಲ್ಲಿ ಇದೀ ಅವರ ಸಹೋದರ ವೀರೇಂದ್ರ ಕಾಂಬ್ಳಿ, ವಿನೋದ್ ಕಾಂಬ್ಳಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

Vinod Kambli Health Updates: ವಿನೋದ್‌ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ!

ವಿನೋದ್ ಕಾಂಬ್ಳಿ ಅವರ ಸಹೋದರ ವೀರೇಂದ್ರ ಕಾಂಬ್ಳಿ ಇತ್ತೀಚೆಗೆ 'ದಿ ವಿಕಿ ಲಾಲ್ವಾನಿ ಶೋ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿ, ಅವರು (ವಿನೋದ್‌ ಕಾಂಬ್ಳಿ) ಇದೀಗ ಮನೆಯಲ್ಲಿದ್ದಾರೆ, ಆದರೆ ಅವರಿಗೆ ಮಾತನಾಡಲು ಇನ್ನೂ ತೊಂದರೆಯಾಗುತ್ತಿದೆ. ನನ್ನ ಸಹೋದರ ಬೇಗ ಗುಣಮುಖರಾಗಲು ನಿಮ್ಮೆಲ್ಲರನ್ನೂ ಪ್ರಾರ್ಥಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

"ಅವರು ಈಗ ಮನೆಯಲ್ಲಿದ್ದಾರೆ, ಆದರೆ ಅವರ ಚಿಕಿತ್ಸೆ ನಡೆಯುತ್ತಿದೆ. ಅವರಿಗೆ ಮಾತನಾಡಲು ತೊಂದರೆಯಾಗುತ್ತಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅವರು ಒಬ್ಬ ಚಾಂಪಿಯನ್ ಮತ್ತು ಅವರು ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ. ಅವರು ನಡೆಯಲು ಮತ್ತು ಓಡಲು ಪ್ರಾರಂಭಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರು ಶೀಘ್ರದಲ್ಲೇ ಮೈದಾನಕ್ಕೆ ಮರಳುತ್ತಾರೆ ಎಂದು ನನಗೆ ಖಚಿತವಾಗಿದೆ," ಎಂದು ವೀರೇಂದ್ರ ಕಾಂಬ್ಳಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್‌ ಭಾರತ ತಂಡದಲ್ಲಿ ನಾಲ್ವರು ಮುಂಬೈ ಇಂಡಿಯನ್ಸ್‌ ಸ್ಟಾರ್‌ಗಳು!

ವಿನೋದ್‌ ಕಾಂಬ್ಳಿ ಅವರ ಅಂಕಿಅಂಶ

ಸಚಿನ್‌ ತೆಂಡೂಲ್ಕರ್‌ ಬಾಲ್ಯದ ಗೆಳೆಯ ವಿನೋದ್‌ ಕಾಂಬ್ಳಿ ಅವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ರನ್‌ ಹೊಳೆ ಹರಿಸುವ ಮೂಲಕ ಭರ್ಜರಿ ಆರಂಭವನ್ನು ಪಡೆದುಕೊಂಡಿದ್ದರು. ಅವರು ಆಡಿದ 17 ಟೆಸ್ಟ್‌ ಪಂದ್ಯಗಳಲ್ಲಿ ನಾಲ್ಕು ಶತಕಗಳ ಮೂಲಕ 1084 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರ ಜೊತೆಗೆ ಏಕದಿನ ವೃತ್ತಿ ಜೀವನದಲ್ಲಿ ಆಡಿದ 104 ಪಂದ್ಯಗಳಿಂದ ಎರಡು ಶತಕಗಳು ಹಾಗೂ 14 ಅರ್ಧಶತಕಗಳ ಮೂಲಕ 2477 ರನ್‌ಗಳನ್ನು ಬಾರಿಸಿದ್ದಾರೆ.