Dewald Brevis: ಮೊದಲನೇ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದ ಬೇಬಿ ಎಬಿಡಿ!
ದಕ್ಷಿಣ ಆಫ್ರಿಕಾ ತಂಡದ ಯುವ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅವರು ಆಸ್ಟ್ರೇಲಿಯಾ ವಿರುದ್ದದ ಮೊದಲನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಏಕದಿನ ಪದಾರ್ಪಣೆ ಪಂದ್ಯದಲ್ಲಿ ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿ ಡೆವಾಲ್ಡ್ ಬ್ರೆವಿಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಮೊದಲನೇ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದ ಡೆವಾಲ್ಡ್ ಬ್ರೆವಿಸ್.

ನವದೆಹಲಿ: ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ (AUS vs SA) ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಾದಾಟ ನಡೆಸುತ್ತಿದೆ. ಮೊದಲನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 98 ರನ್‌ಗಳ ಗೆಲುವು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆಯುವ ಮೂಲಕ ಶುಭಾರಂಭ ಕಂಡಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೇವಿಸ್ (Dewald Brevis) ಸದ್ದಿಲ್ಲದೆ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಕಳೆದ ಟಿ20ಐ ಸರಣಿಯಲ್ಲಿ ಡೆವಾಲ್ಡ್ ಬ್ರೆವಿಸ್ ದಕ್ಷಿಣ ಆಫ್ರಿಕಾ ಪರ ಸ್ಟಾರ್ ಪ್ರದರ್ಶನವನ್ನು ತೋರಿದ್ದರು. ಇದರ ಫಲವಾಗಿ ಡೆವಾಲ್ಡ್ ಬ್ರೆವಿಸ್‌ಗೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶವನ್ನು ನೀಡಲಾಗಿದೆ. ಇವರು ಈ ಹಿಂದೆ ಟೆಸ್ಟ್ ಕ್ರಿಕೆಟ್‌ಗೂ ಪದಾರ್ಪಣ ಮಾಡಿದ್ದರು. ಅಂದ ಹಾಗೆ ತಮ್ಮ ಪದಾರ್ಪಣೆ ಏಕದಿನ ಪಂದ್ಯದಲ್ಲಿ ಟ್ರಿಸ್ಟನ್ ಸ್ಟಬ್ಸ್ ವಿಕೆಟ್ ಒಪ್ಪಿಸಿದ ಬಳಿಕ ಡವಾಲ್ಡ್ ಬ್ರೆವಿಸ್ 41ನೇ ಓವರ್‌ನಲ್ಲಿ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ತೆರಳಿದ್ದರು.
AUS vs SA: ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರ, ಟಿ20ಐ ಸರಣಿ ಗೆದ್ದ ಆಸ್ಟ್ರೇಲಿಯಾ!
ಇತಿಹಾಸ ಬರೆದ ಡೆವಾಲ್ಡ್ ಬ್ರೆವಿಸ್
ತಮ್ಮ ಏಕದಿನ ಪದಾರ್ಪಣೆ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ ಅವರು ತಾನು ಎದುರಿಸಿದ ಮೊದಲನೇ ಎಸೆತದಲ್ಲಿ ಟ್ರಾವಿಸ್ ಹೆಡ್‌ಗೆ ಸಿಕ್ಸರ್ ಬಾರಿಸಿದ್ದರು. ಆ ಮೂಲಕ 50 ಓವರ್‌ಗಳ ಸ್ವರೂಪದ ಪದಾರ್ಪಣೆ ಪಂದ್ಯದ ತಮ್ಮ ಮೊದಲ ಎಸೆತದಲ್ಲಿಯೇ ಸಿಕ್ಸರ್ ಬಾರಿಸಿದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಮೊದಲನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
Dewald Brevis: ವಿರಾಟ್ ಕೊಹ್ಲಿಯ ದೊಡ್ಡ ದಾಖಲೆಯನ್ನು ಮುರಿದ ಬೇಬಿ ಎಬಿಡಿ!
ಓಡಿಐ ವೃತ್ತಿ ಜೀವನದ ಮೊದಲನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ಜೊನನ್ ಲೌ (ದಕ್ಷಿಣ ಆಫ್ರಿಕಾ): 2008
ಜಾವದ್ ದಾವೂದ್ (ಕೆನಡಾ): 2010
ಕ್ರೈಗ್ ವಾಲೆಸ್ (ಜಿಂಬಾಬ್ವೆ): 2016
ಆರ್ ಎನ್‌ಗರವಾ (ಜಿಂಬಾಬ್ವೆ): 2017
ಇಶಾನ್ ಕಿಶನ್ (ಭಾರತ): 2021
ಎಸ್ ಹುಸೇನ್ (ಪಾಕಿಸ್ತಾನ): 2023
DEWALD BREVIS ON ODI DEBUT:
— Mufaddal Vohra (@mufaddal_vohra) August 19, 2025
First ball - SIX. 🤯
Second ball - OUT. 🥲pic.twitter.com/1OHrp2ixv8
ಡೆವಾಲ್ಡ್ ಬ್ರೆವಿಸ್ ಅವರು ತಮ್ಮ ಒಡಿಐ ಪದಾರ್ಪಣೆ ಪಂದ್ಯದಲ್ಲಿ ಕೇವಲ ಎರಡು ಎಸೆತಗಳಲ್ಲಿ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರು ಮೊದಲನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ನಂತರ ಎರಡನೇ ಎಸೆತದಲ್ಲಿಯೂ ಅದೇ ಹೊಡೆತಕ್ಕೆ ಕೈ ಹಾಕಿದರು. ಆದರೆ, ಅಲೆಕ್ಸ್ ಕೇರಿ ಅವರು ಬೌಂಡರಿ ಲೈನ್ ಬಳಿ ಕ್ಯಾಚ್ ಪಡೆದರು. ಒಡಿಐ ಪದಾರ್ಪಣೆ ಪಂದ್ಯದ ಮೊದಲನೇ ಎಸೆತದಲ್ಲಿ ಸಿಕ್ಸರ್ ಹಾಗೂ ಎರಡನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.