Deepti Sharma: ನೀತು ಡೇವಿಡ್ ದಾಖಲೆ ಮುರಿದ ದೀಪ್ತಿ ಶರ್ಮ
ದೀಪ್ತಿ, ಶ್ರೀಲಂಕಾ ನಾಯಕಿ ಚಾಮರಿ ಅಥಪಟ್ಟು ಮತ್ತು ಕವೀಶಾ ದಿಲ್ಹಾರಿ ವಿಕೆಟ್ ಕೀಳುವ ಮೂಲಕ ಈ ಮೈಲುಗಲ್ಲು ನೆಟ್ಟರು. ಒಟ್ಟಾರೆ ಮೂರು ವಿಕೆಟ್ ಇತ್ತ ದೀಪ್ತಿ ತಮ್ಮ ವಿಕೆಟ್ ಸಂಖ್ಯೆಯನ್ನು 143 ಕ್ಕೆ ಏರಿಸಿದರು. ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಜೂಲನ್ ಗೋಸ್ವಾಮಿ ಹೆಸರಿನಲ್ಲಿದೆ. ಜೂಲನ್ 255 ವಿಕೆಟ್ ಪಡೆದಿದ್ದಾರೆ.

-

ಗುವಾಹಟಿ: ಶ್ರೀಲಂಕಾ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್(ICC Womens World Cup) ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ತೋರುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ದೀಪ್ತಿ ಶರ್ಮ(Deepti Sharma) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಹಾದಿಯಲ್ಲಿಅವರು ಮಾಜಿ ಅಂತಾರಾಷ್ಟ್ರೀಯ ಆಟಗಾರ್ತಿ ನೀತು ಡೇವಿಡ್ ಅವರನ್ನು ಹಿಂದಿಕ್ಕಿದರು.
ದೀಪ್ತಿ, ಶ್ರೀಲಂಕಾ ನಾಯಕಿ ಚಾಮರಿ ಅಥಪಟ್ಟು ಮತ್ತು ಕವೀಶಾ ದಿಲ್ಹಾರಿ ವಿಕೆಟ್ ಕೀಳುವ ಮೂಲಕ ಈ ಮೈಲುಗಲ್ಲು ನೆಟ್ಟರು. ಒಟ್ಟಾರೆ ಮೂರು ವಿಕೆಟ್ ಇತ್ತ ದೀಪ್ತಿ ತಮ್ಮ ವಿಕೆಟ್ ಸಂಖ್ಯೆಯನ್ನು 143 ಕ್ಕೆ ಏರಿಸಿದರು. ಅತ್ಯಧಿಕ ವಿಕೆಟ್ ಕಿತ್ತ ದಾಖಲೆ ಜೂಲನ್ ಗೋಸ್ವಾಮಿ ಹೆಸರಿನಲ್ಲಿದೆ. ಜೂಲನ್ 255 ವಿಕೆಟ್ ಪಡೆದಿದ್ದಾರೆ.
ಇಲ್ಲಿನ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆಯಿತು. ಆದರೆ 10 ಓವರ್ ಆಡುವಷ್ಟರಲ್ಲಿ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಮಳೆ ಸುರಿಯಲಾರಂಭಿಸಿತು. ಸರಿ ಸುಮಾರು ಎರಡು ಗಂಟೆ ಅಡಚಣೆ ಉಂಟಾಯಿತು. ಡಕ್‌ವರ್ತ್ ಲೂಯಿಸ್ ನಿಯಮದ ಅನುಸಾರ ಭಾರತ 47 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 269 ರನ್ ಬಾರಿಸಿತು. ಆದರೆ ಮತ್ತೆ ಮಳೆ ಅಡ್ಡಿಪಡಿಸಿದ ಕಾರಣ, ಪರಿಷ್ಕೃತ ಡಿಎಲ್‌ಎಸ್ ನಿಯಮದ ಪ್ರಕಾರ ಲಂಕಾಗೆ 47 ಓವರ್‌ಗೆ 271 ಗೆಲುವಿನ ಗುರಿ ನೀಡಲಾಯಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 211ರನ್‌ಗೆ ಸರ್ವಪನ ಕಂಡು ಶರಣಾಯಿತು.
ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ದೀಪ್ತಿ, 53 ರನ್ ಬಾರಿಸಿ ಅರ್ಧಶತಕ ಗಳಿಸಿದರು. ಅಮನ್‌ಜೋತ್ ಕೌರ್ 8ನೇ ಕ್ರಮಾಂಕದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 56 ಎಸೆತ ಎದುರಿಸಿದ ಅಮನ್‌ಜೋತ್, 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 57 ರನ್ ಬಾರಿಸಿದರು.
ಇದನ್ನೂ ಓದಿ INDW vs SLW: ದೀಪ್ತಿ ಆಲ್‌ರೌಂಡರ್ ಪ್ರದರ್ಶನ; ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗೆಲುವಿನ ಶುಭಾರಂಭ