IND vs ENG 5th Test: ಗಾಯಗೊಂಡ ಕ್ರಿಸ್ ವೋಕ್ಸ್ ಆಡುವುದು ಅನುಮಾನ
ಮೊದಲ ದಿನದಾಟದಲ್ಲಿ ಪದೇಪದೆ ಮಳೆ ಅಡಚಣೆ ಉಂಡು ಮಾಡಿದ ಕಾರಣದಿಂದ. ಮೊದಲ ಅವಧಿಯಲ್ಲಿ 23 ಓವರ್ ಆಡಿಸಿದರೂ, 2ನೇ ಅವಧಿಯಲ್ಲಿ ಕೇವಲ 6 ಓವರ್ ಆಟ ನಡೆಯಿತು. 3ನೇ ಅವಧಿ ಕೂಡಾ ತಡವಾಗಿ ಆರಂಭಗೊಂಡಿತು. ಸದ್ಯ ಭಾರತ 6 ವಿಕೆಟ್‌ಗೆ 204 ರನ್ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಎರಡನೇ ದಿನವೂ ಮಳೆ ಭೀತಿ ಎದುರಾಗಿದೆ.


ಲಂಡನ್: ಭಾರತ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್(IND vs ENG 5th Test) ಪಂದ್ಯದ ಮೊದಲ ದಿನದಾಟದಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್(Chris Woakes) ಪಂದ್ಯದಲ್ಲಿ ಮುಂದುವರಿಯುವುದು ಅನುಮಾನ ಎನ್ನಲಾಗಿದೆ. ಬೆನ್ ಸ್ಟೋಕ್ಸ್, ಜೋಫ್ರ ಆರ್ಚರ್ ಅನುಪಸ್ಥಿತಿಯಲ್ಲಿ ಆಡಲಿಳಿದ್ದ ಇಂಗ್ಲೆಂಡ್‌ಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
57ನೇ ಓವರ್‌ನ ಐದನೇ ಎಸೆತದಲ್ಲಿ ಕರುಣ್ ನಾಯರ್ ಬಾರಿಸಿದ ಚೆಂಡನ್ನು ಬೌಂಡರಿ ಲೈನ್ ಬಳಿ ತಡೆಯಲು ಯತ್ನಿಸಿದ ವೇಳೆ ಎಡ ಭುಜಕ್ಕೆ ಗಾಯ ಮಾಡಿಕೊಂಡರು. ನೋವಿನಿಂದ ನರಳಿದ ಅವರು ಮೈದಾನ ತೊರೆದರು. ಅವರ ಬದಲಿಗೆ ಬದಲಿ ಫೀಲ್ಡರ್ ಆಗಿ ಲಿಯಾಮ್ ಡಾಸನ್ ಆಯ್ಕೆಯಾದರು. ವೋಕ್ಸ್ ಗಾಯದ ಬಗ್ಗೆ ಮಾಹಿತಿ ನೀಡಿರುವ ತಂಡದ ವೇಗಿ ಗಸ್ ಅಟ್ಕಿನ್ಸನ್ ಶೀಘ್ರವಾಗಿ ಚೇತರಿಸಿಕೊಳ್ಳುವ ಭರವಸೆ ಎಂದಿದ್ದಾರೆ.
ವೋಕ್ಸ್ ಪಂದ್ಯದಿಂದ ಹೊರಗುಳಿದರೆ ಅವರ ಸ್ಥಾನಕ್ಕೆ ಬದಲಿ ಆಟಗಾರರನ್ನು ಕಣಕ್ಕಿಳಿಸಲು ಇಂಗ್ಲೆಂಡ್‌ಗೆ ಅನುಮತಿ ನೀಡುವ ಸಾಧ್ಯತೆ ಕಡಿಮೆ. ನಿಯಮಗಳ ಪ್ರಕಾರ, ಒಂದು ತಂಡವು ಆಘಾತಕಾರಿ ಗಾಯದ ಸಂದರ್ಭದಲ್ಲಿ ಮಾತ್ರ ಆಟಗಾರನನ್ನು ಬದಲಾಯಿಸಬಹುದು. ಆದ್ದರಿಂದ ಈ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಮಾಡಬಲ್ಲ ಬದಲಿ ಆಟಗಾರನನ್ನು ಕರೆತರಲು ಇಂಗ್ಲೆಂಡ್‌ಗೆ ಅನುಮತಿ ಅಸಾಧ್ಯ.
ಮೊದಲ ದಿನದಾಟದಲ್ಲಿ ಪದೇಪದೆ ಮಳೆ ಅಡಚಣೆ ಉಂಡು ಮಾಡಿದ ಕಾರಣದಿಂದ. ಮೊದಲ ಅವಧಿಯಲ್ಲಿ 23 ಓವರ್ ಆಡಿಸಿದರೂ, 2ನೇ ಅವಧಿಯಲ್ಲಿ ಕೇವಲ 6 ಓವರ್ ಆಟ ನಡೆಯಿತು. 3ನೇ ಅವಧಿ ಕೂಡಾ ತಡವಾಗಿ ಆರಂಭಗೊಂಡಿತು. ಸದ್ಯ ಭಾರತ 6 ವಿಕೆಟ್‌ಗೆ 204 ರನ್ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಎರಡನೇ ದಿನವೂ ಮಳೆ ಭೀತಿ ಎದುರಾಗಿದೆ.
ಕರುಣ್ ಆಸರೆ
101 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಭಾರತ ತಂಡಕ್ಕೆ ಕರುಣ್ ನಾಯರ್ ಆಸರೆಯಾದರು. ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಲು ವಿಫಲವಾಗಿದ್ದ ಕರುಣ್ ನಾಯರ್, ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಕರುಣ್ ನಾಯರ್ 98 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ ಅಜೇಯ 52 ರನ್ ಸಿಡಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ IND vs ENG 5th Test: ಇಂಗ್ಲೆಂಡ್ ಮಾರಕ ದಾಳಿಯಿಂದ 6 ವಿಕೆಟ್ ಕಳೆದುಕೊಂಡ ಭಾರತಕ್ಕೆ ಕರುಣ್ ನಾಯರ್ ಆಸರೆ!