ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

FIDE Chess World Cup 2025: ನಾಳೆಯಿಂದ ಫಿಡೆ ಚೆಸ್ ವಿಶ್ವಕಪ್; ಪಂದ್ಯದ ಮಾದರಿ, ವೇಳಾಪಟ್ಟಿ ಹೀಗಿದೆ

ಪ್ರತಿಯೊಂದು ಸುತ್ತು ಮೂರು ದಿನ ನಡೆಯಲಿದ್ದು, ಎರಡು ದಿನ ಒಂದೊಂದು ಕ್ಲಾಸಿಕಲ್ ಮಾದರಿಯ ಪಂದ್ಯಗಳು ನಡೆಯಲಿವೆ. ಸ್ಕೋರ್ ಸಮನಾದ ಪಕ್ಷದಲ್ಲಿ ಮೂರನೇ ದಿನವನ್ನು ಟೈಬ್ರೇಕ್‌ ಪಂದ್ಯಗಳಿಗೆ ಮೀಸಲಿಡಲಾಗಿದೆ. ಅಗ್ರ 50 ಮಂದಿ ಆಟಗಾರರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

R Praggnanandhaa

ಪಣಜಿ: ಬಹುನಿರೀಕ್ಷಿತ ಫಿಡೆ ಚೆಸ್ ವಿಶ್ವಕಪ್(FIDE Chess World Cup 2025) ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ. ಶುಕ್ರವಾರ (ಅಕ್ಟೋಬರ್ 31) ಕೂಟಕ್ಕೆ ಗೋವಾದಲ್ಲಿ ಚಾಲನೆ ಸಿಗಲಿದೆ. ನವೆಂಬರ್ 27 ರವರೆಗೆ ಪಂದ್ಯಾವಳಿ ನಡೆಯಲಿದೆ. 2ನೇ ಬಾರಿಗೆ ಭಾರತ ಟೂರ್ನಿಗೆ ಆತಿಥ್ಯವಹಿಸುತ್ತಿದೆ. 2002ರಲ್ಲಿ ಕೊನೆಯ ಬಾರಿ ಚೆಸ್‌ ವಿಶ್ವಕಪ್‌ನ ಆತಿಥ್ಯ ವಹಿಸಿದ್ದಾಗ ಹೈದರಾಬಾದಿನಲ್ಲಿ ಟೂರ್ನಿ ನಡೆದಿತ್ತು. ವಿಶ್ವನಾಥನ್ ಆನಂದ್ ಆ ವರ್ಷ ಪ್ರಶಸ್ತಿ ಗೆದ್ದುಕೊಂಡಿದ್ದರು.

24 ಭಾರತೀಯರು ಸೇರಿದಂತೆ ಈ ಟೂರ್ನಿಯಲ್ಲಿ 206 ಆಟಗಾರರು ಭಾಗವಹಿಸುತ್ತಿದ್ದು, ಪ್ರಶಸ್ತಿಯ ಜೊತೆಗೆ ಮೊದಲ ಮೂರು ಸ್ಥಾನ ಪಡೆದವರು 2026ರ ಫಿಡೆ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ. ವರ್ಷದ ಅತಿದೊಡ್ಡ ಚೆಸ್ ಈವೆಂಟ್‌ಗಳಲ್ಲಿ ಒಂದಾದ FIDE ಚೆಸ್ ವಿಶ್ವಕಪ್ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.

FIDE ಚೆಸ್ ವಿಶ್ವಕಪ್ ವೇಳಾಪಟ್ಟಿ

ಸುತ್ತು 1- ನವೆಂಬರ್ 1-3

ಸುತ್ತು 2 - ನವೆಂಬರ್ 4-6

ಸುತ್ತು 3 - ನವೆಂಬರ್ 7-9

ಸುತ್ತು 4 - ನವೆಂಬರ್ 11-13

ಸುತ್ತು 5 - ನವೆಂಬರ್ 14-16

ಕ್ವಾರ್ಟರ್ ಫೈನಲ್ಸ್ - ನವೆಂಬರ್ 17-19

ಸೆಮಿಫೈನಲ್ - ನವೆಂಬರ್ 21-23

ಫೈನಲ್ಸ್ - ನವೆಂಬರ್ 24-26

FIDE ಚೆಸ್ ವಿಶ್ವಕಪ್‌ನಲ್ಲಿ ಭಾಗವಹಿಸುವ ದೊಡ್ಡ ಹೆಸರುಗಳು ಯಾವುವು?

ನಕಮುರಾ ಮತ್ತು ಕಾರ್ಲ್‌ಸೆನ್‌ರಂತಹ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸದಿದ್ದರೂ, ಇನ್ನೂ ಅನೇಕ ದೊಡ್ಡ ಹೆಸರುಗಳು ಕಾಣಿಸಿಕೊಂಡಿದೆ. ಅಗ್ರ ಶ್ರೇಯಾಂಕದ ಡಿ ಗುಕೇಶ್ ಎಲ್ಲಾ ಹಂತಗಳಲ್ಲಿಯೂ ಅತ್ಯಂತ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಲಿದ್ದಾರೆ, ಅರ್ಜುನ್ ಎರಿಗೈಸಿ, ಆರ್ ಪ್ರಜ್ಞಾನಂದ, ಅನೀಶ್ ಗಿರಿ, ವೆಸ್ಲಿ ಸೋ ಮತ್ತು ವಿನ್ಸೆಂಟ್ ಕೀಮರ್ ಮಧ್ಯೆ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ Divya Deshmukh: ಚೆಸ್‌ ವಿಶ್ವಕಪ್‌ ವಿಜೇತೆ ದಿವ್ಯಾ ದೇಶ್‌ಮುಖ್‌ಗೆ 3 ಕೋಟಿ ಬಹುಮಾನ

FIDE ಚೆಸ್ ವಿಶ್ವಕಪ್ ನೇರಪ್ರಸಾರ

ಈ ಟೂರ್ನಿಯನ್ನು ಭಾರತದ ದೂರದರ್ಶನದಲ್ಲಿ ಪ್ರಸಾರ ಮಾಡಲಾಗುವುದಿಲ್ಲ, ಆದರೆ ಸಂಪೂರ್ಣ ಸ್ಪರ್ಧೆಯನ್ನು FIDEಯ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿವೆ.