ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 2nd T20I: ದ್ವಿತೀಯ ಟಿ20ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ

ಕ್ಯಾನ್‌ಬೆರಾದಲ್ಲಿ ಮೂವರು ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರೊಂದಿಗೆ ಆಡಿತು, ಜೊತೆಗೆ ವೇಗಿಗಳಾದ ಬುಮ್ರಾ ಮತ್ತು ಹರ್ಷಿತ್ ರಾಣಾ, ಶಿವಂ ದುಬೆ ಆಯ್ಕೆಯಾಗಿದ್ದರು. ಆದಾಗ್ಯೂ, ಎಂಸಿಜಿಯ ಪಿಚ್ ಪರಿಸ್ಥಿತಿಗಳು ಹೆಚ್ಚುವರಿ ವೇಗಿ ಬೇಡಿಕೆಯಿಡಬಹುದು, ಇದು ಅರ್ಶ್‌ದೀಪ್‌ಗೆ ಬಾಗಿಲು ತೆರೆಯಬಹುದು.

ಅರ್ಶ್‌ದೀಪ್‌ ಸಿಂಗ್‌

ಮೆಲ್ಬರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ(IND vs AUS 2nd T20I) ನಡುವಣ ದ್ವಿತೀಯ ಟಿ20 ಪಂದ್ಯ ಇಂದು(ಶುಕ್ರವಾರ) ಮೆಲ್ಬರ್ನ್‌ ಅಂಗಳದಲ್ಲಿ ನಡೆಯಲಿದೆ. ಮೊದಲ ಪಂದ್ಯದಂತೆ ಈ ಪಂದ್ಯಕ್ಕೂ ಭಾರೀ ಮಳೆಯ(Melbourne weather) ಮುನ್ಸೂಚನೆ ಇದೆ. ಹೀಗಾಗಿ ಈ ಪಂದ್ಯ ಕೂಡ ರದ್ದಾಗುವ ಸಾಧ್ಯತೆಯೊಂಡು ಕಂಡುಬಂದಿದೆ. ಶುಕ್ರವಾರ ಮೆಲ್ಬೋರ್ನ್​ನಲ್ಲಿ ಶೇ. 87 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೊದಲ ಟಿ20ಯಲ್ಲಿ ಅರ್ಷ್‌ದೀಪ್ ಅವರನ್ನು ಹೊರಗಿಡುವ ಭಾರತದ ನಿರ್ಧಾರವು ಹುಬ್ಬೇರುವಂತೆ ಮಾಡಿತ್ತು. ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಅರ್ಷ್‌ದೀಪ್ ಹೊಸ ಚೆಂಡನ್ನು ಸ್ವಿಂಗ್ ಮಾಡುವ ಮತ್ತು ಡೆತ್‌ನಲ್ಲಿ ಯಾರ್ಕರ್‌ಗಳನ್ನು ಮಾಡುವ ಸಾಮರ್ಥ್ಯವು ಬಿಗಿಯಾದ ಪಂದ್ಯಗಳಲ್ಲಿ ಅವರು ತಂಡಕ್ಕೆ ನೆರವಾಗುತ್ತಿದ್ದರು.

ಕ್ಯಾನ್‌ಬೆರಾದಲ್ಲಿ ಮೂವರು ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಅವರೊಂದಿಗೆ ಆಡಿತು, ಜೊತೆಗೆ ವೇಗಿಗಳಾದ ಬುಮ್ರಾ ಮತ್ತು ಹರ್ಷಿತ್ ರಾಣಾ, ಶಿವಂ ದುಬೆ ಆಯ್ಕೆಯಾಗಿದ್ದರು. ಆದಾಗ್ಯೂ, ಎಂಸಿಜಿಯ ಪಿಚ್ ಪರಿಸ್ಥಿತಿಗಳು ಹೆಚ್ಚುವರಿ ವೇಗಿ ಬೇಡಿಕೆಯಿಡಬಹುದು, ಇದು ಅರ್ಶ್‌ದೀಪ್‌ಗೆ ಬಾಗಿಲು ತೆರೆಯಬಹುದು.

ಇಲ್ಲಿನ ಪಿಚ್‌ ಬೌಲಿಂಗ್‌ ಸ್ನೇಹಿಯಾಗಿದೆ. ಇದಲ್ಲದೆ, ಮೈದಾನದ ಔಟ್‌ ಫೀಲ್ಡ್‌ ದೊಡ್ಡದಾಗಿರುವ ಕಾರಣ ಬೌಲರ್​ಗಳು ಮೇಲುಗೈ ಸಾಧಿಸಬಹುದು. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ಗೆಲುವಿನ ಪ್ರಮಾಣ ಕಡಿಮೆ ಇದೆ. ಚೇಸಿಂಗ್‌ ನಡೆಸಿದ ತಂಡಗಳು 19 ಪಂದ್ಯಗಳಲ್ಲಿ 11 ರಲ್ಲಿ ಗೆದ್ದಿವೆ. 2016 ರ ಬಳಿ ಇತ್ತಂಡಗಳು ಇಲ್ಲಿ ಮುಖಾಮುಖಿಯಾಗುತ್ತಿವೆ.

ಇದನ್ನೂ ಓದಿ Women's World Cup: ಜೆಮಿಮಾ ರೊಡ್ರಿಗಸ್‌ ಭರ್ಜರಿ ಶತಕ, ಆಸ್ಟ್ರೇಲಿಯಾಗೆ ಆಘಾತ ನೀಡಿ ಫೈನಲ್‌ಗೇರಿದ ಭಾರತ!

ಸಂಭಾವ್ಯ ತಂಡಗಳು

ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ.), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲದೀಪ್ ಯಾದವ್/ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮಿಚೆಲ್ ಓವನ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಫಿಲಿಪ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹ್ಯಾಜಲ್‌ವುಡ್.