ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ-ವಿಂಡೀಸ್‌ ಮೊದಲ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ರೋಸ್ಟನ್ ಚೇಸ್ ತಂಡದ ನಾಯಕತ್ವ ವಹಿಸಲಿದ್ದು, ಶಾಯ್ ಹೋಪ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಆಡಲಿದ್ದಾರೆ. ಭಾರತಕ್ಕೆ ಕಠಿಣ ಸವಾಲು ನೀಡಬೇಕಿದ್ದರೆ ವಿಂಡೀಸ್ ಸ್ಪಿನ್ ಅಸ್ತ್ರ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ವಿಂಡೀಸ್ ತಂಡದ ಸೀಮಿತ ಓವರ್‌ಗಳ ಪ್ರದರ್ಶನ ತೀರಾ ಕಳಪೆಯಾಗಿದ್ದರೂ, ಟೆಸ್ಟ್‌ನಲ್ಲಿ ಉತ್ತಮ ಆಟವಾಡುತ್ತಿದೆ.

ಭಾರತ-ವಿಂಡೀಸ್‌ ಟೆಸ್ಟ್‌; ಮೊದಲ ದಿನವೇ ಮಳೆ ಭೀತಿ

-

Abhilash BC Abhilash BC Oct 1, 2025 12:14 PM

ಅಹಮದಾಬಾದ್: ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಶುಭಮನ್‌ ಗಿಲ್‌ ಸಾರಥ್ಯದ ಭಾರತ ತಂಡ ಗುರುವಾರ ವೆಸ್ಟ್‌ ಇಂಡೀಸ್‌(IND vs WI Test) ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದೆ. 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯದೆ. ಈ ಪಂದ್ಯದ ಪಿಚ್‌ ರಿಪೋರ್ಟ್‌(Ahmedabad Pitch Report), ಹವಾಮಾನ ಮತ್ತು ಭಾರತ ಆಡುವ ಬಳಗದ ಮಾಹಿತಿ ಇಲ್ಲಿದೆ.

ಪಿಚ್‌ ರಿಪೋರ್ಟ್‌

ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿ ಕಂಡುಬಂದಿತ್ತು. ಆದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ವಿಕೆಟ್ ಅದೇ ರೀತಿ ವರ್ತಿಸುವುದು ಅನುಮಾನ.

ಮಳೆ ಭೀತಿ

ಪಂದ್ಯದ ಮೊದಲ ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ. ಎರಡು, ಮೂರು ಮತ್ತು ನಾಲ್ಕನೇ ದಿನ ಮಳೆ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೂ ಅಂತಿಮ ದಿನ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಖಾಮುಖಿ

ತವರಿನಲ್ಲಿ ವಿಂಡೀಸ್‌ ವಿರುದ್ಧ ಭಾರತ ಸೋಲು ಕಾಣದೆ 31 ವರ್ಷಗಳಾಗಿದೆ. ಕೊನೆಯ ಬಾರಿಗೆ ಸೋತದ್ದು 1994ರ ಮೊಹಾಲಿ ಟೆಸ್ಟ್‌ನಲ್ಲಿ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ಒಟ್ಟು 100 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ವೆಸ್ಟ್ ಇಂಡೀಸ್‌ ತಂಡವೇ ಸ್ಪಷ್ಟ ಮೇಲುಗೈ ಸಾಧಿಸಿದೆ. 100 ಟೆಸ್ಟ್ ಪಂದ್ಯಗಳ ಪೈಕಿ ವೆಸ್ಟ್ ಇಂಡೀಸ್ ತಂಡವು 30 ಪಂದ್ಯಗಳಲ್ಲಿ ಗೆದ್ದರೆ, ಭಾರತ ತಂಡವು 23 ಪಂದ್ಯಗಳಲ್ಲಿ ಜಯಿಸಿದೆ. 47 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ಭಾರತ ಸಂಭಾವ್ಯ ತಂಡ

ಶುಭ್‌ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧೃವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್/ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

ಇದನ್ನೂ ಓದಿ IND vs WI 1st Test: ನಾಳೆಯಿಂದ ಭಾರತ-ವಿಂಡೀಸ್‌ ಟೆಸ್ಟ್‌ ಸರಣಿ; ಗೆಲುವಿನ ವಿಶ್ವಾಸದಲ್ಲಿ ಗಿಲ್‌ ಬಳಗ