ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ಪಾಕ್‌ ವಿರುದ್ಧದ ಪಂದ್ಯಕ್ಕೆ ಭಾರತ ಆಡುವ ಬಳಗದ ಮಾಹಿತಿ ನೀಡಿದ ಸಹಾಯಕ ಕೋಚ್

ಬ್ಯಾಟಿಂಗ್‌ನಲ್ಲಿ ಭಾರತವೇ ಬಲಿಷ್ಠವಾಗಿದೆ. ಶುಭ್‌ಮನ್‌ ಗಿಲ್‌, ಅಭಿಷೇಕ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್, ತಿಲಕ್‌ ವರ್ಮಾರಂತಹ ಶ್ರೇಷ್ಠ ಬ್ಯಾಟರ್‌ಗಳಿದ್ದಾರೆ. ಪಾಕ್‌ ತಂಡ ಸೈಮ್‌ ಅಯೂಬ್, ಹಸನ್ ನವಾಜ್‌, ಫಖರ್‌ ಜಮಾನ್‌, ಮೊಹಮ್ಮದ್‌ ಹಾರಿಸ್‌ರನ್ನು ಹೆಚ್ಚಾಗಿ ಅವಲಂಬಿಸಿದೆ.

ಪಾಕ್‌ ವಿರುದ್ಧದ ಪಂದ್ಯಕ್ಕೆ ಹೇಗಿರಲಿದೆ ಭಾರತ ಆಡುವ ಬಳಗ?

-

Abhilash BC Abhilash BC Sep 14, 2025 9:56 AM

ದುಬೈ: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳು ಈ ಬಾರಿ ಏಷ್ಯಾಕಪ್‌ ಟಿ20(Asia Cup 2025) ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ಪಂದ್ಯಕ್ಕೆ ಯುಎಇ ದೇಶದ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಪಂದ್ಯಕ್ಕೂ ಮುನ್ನ ಮುಖ್ಯ ಕೋಚ್ ಗೌತಮ್ ಗಂಭೀರ್ ದೊಡ್ಡ ಆಟದತ್ತ ಗಮನಹರಿಸುವಂತೆ ಒತ್ತಾಯಿಸಿದ್ದಾರೆ ಎಂದು ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್(Ryan ten Doeschate) ಹೇಳಿದ್ದಾರೆ.

ಯುಎಇ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು ಸ್ಪಿನ್-ಭರಿತ ಲೈನ್‌ಅಪ್‌ನೊಂದಿಗೆ ಆಡಿತ್ತು. ಜಸ್‌ಪ್ರೀತ್‌ ಬುಮ್ರಾ ಅವರನ್ನು ಏಕೈಕ ಸ್ಪೆಷಲಿಸ್ಟ್ ಸೀಮರ್ ಆಗಿ ಮೂವರು ನಿಧಾನಗತಿಯ ಬೌಲರ್‌ಗಳನ್ನು ಬಳಸಿಕೊಂಡಿತ್ತು. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಹೆಚ್ಚುವರಿ ವೇಗದ ಆಯ್ಕೆಗಳನ್ನು ನೀಡಿದರು. ಇದೀಗ ಪಾಕ್‌ ವಿರುದ್ಧದ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಹೌದು, ಈ ಪಂದ್ಯಕ್ಕೆ ಭಾರತ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಕಡಿಮೆ ಎಂದು ಟೆನ್ ಡೋಸ್ಚೇಟ್ ಸುಳಿವು ನೀಡಿದ್ದಾರೆ. "ಬದಲಾವಣೆಗಳನ್ನು ಮಾಡುವ ಸಾಧ್ಯತೆ ಕಡಿಮೆ. ವಿಕೆಟ್‌ಗಳು ವಿಭಿನ್ನವಾಗಿ ಇರಲಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಮೊದಲ ಪಂದ್ಯದಲ್ಲಿ ಆಡಿದ ಸಂಯೋಜನೆಯು ಸರಿಯಾದ ಸೆಟಪ್ ಆಗಿದೆ. ಸಂಜು ಅವರಂತೆ ವಿಭಿನ್ನ ಸ್ಥಾನಗಳಿಗೆ ಸ್ಲಾಟ್ ಮಾಡಬಹುದಾದ ನಮ್ಮ ಆಟಗಾರರನ್ನು ನಾವು ಅಪಾಯಕ್ಕೆ ಸಿಲುಕಿಸುವುದಿಲ್ಲ ಎಂಬುದು ಪ್ರಮುಖ ತತ್ವವಾಗಿದೆ ”ಎಂದು ಅವರು ಹೇಳಿದರು. ಹೀಗಾಗಿ ಎಡಗೈ ವೇಗಿ ಅರ್ಶ್‌ದೀಪ್‌ ಈ ಪಂದ್ಯದಲ್ಲೂ ಹೊರಗುಳಿಯುವುದು ಖಚಿತ.

ಇದನ್ನೂ ಓದಿ IND vs PAK: ಇಂದಿನ ಭಾರತ-ಪಾಕ್‌ ಪಂದ್ಯಕ್ಕೆ ಸಾಮಾಜಿಕ ತಾಣದಲ್ಲಿ ಬಾಯ್ಕಾಟ್‌ ಅಭಿಯಾನ

ಭಾರತ ಸಂಭಾವ್ಯ ಆಡುವ ಬಳಗ

ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.