ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WCL Semifinal: ನಾಳೆ ಭಾರತ-ಪಾಕ್‌ ಸೆಮಿ ಕಾದಾಟ

ಮಂಗಳವಾರ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಭಾರತ ತಂಡವು ಕೇವಲ 13.2 ಓವರ್‌ಗಳಲ್ಲಿ 145 ರನ್‌ಗಳ ಗುರಿಯನ್ನು ತಲುಪಿ ಐದು ವಿಕೆಟ್‌ಗಳ ಗೆಲುವು ಸಾಧಿಸಿ, ತಮ್ಮ ನಿವ್ವಳ ರನ್ ದರವನ್ನು ಸುಧಾರಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿ ನಾಲ್ಕನೇ ತಂಡವಾಗಿ ಸೆಮಿ ಪ್ರವೇಶಿಸಿತು.

ನಾಳೆ ಭಾರತ-ಪಾಕ್‌ ಸೆಮಿ ಕಾದಾಟ

Profile Abhilash BC Jul 30, 2025 9:53 AM

ಲಂಡನ್‌: ವಿಶ್ವ ಚಾಂಪಿಯನ್‌ಶಿಪ್‌ ಆಫ್‌ ಲೆಜೆಂಡ್ಸ್‌(World Championship of Legends 2025) ಲೀಗ್‌ನ ಟಿ20 ಪಂದ್ಯದ ಸೆಮಿಫೈನಲ್‌ನಲ್ಲಿ(WCL Semifinal) ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ(IND vs PAK) ತಂಡಗಳು ಸೆಣಸಾಟ ನಡೆಸಲಿವೆ. ಪಹಲ್ಗಾಂ ಎಂಬಲ್ಲಿ ಉಗ್ರರು ನಡೆಸಿದ ಭೀಕರ ಹತ್ಯಾಕಾಂಡ ಖಂಡಿಸಿ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಲೀಗ್‌ ಪಂದ್ಯವನ್ನು ಆಯೋಜಕರು ರದ್ದುಗೊಳಿಸಿದ್ದರು. ಇದೀಗ ಸೆಮಿ ಫೈನಲ್‌ ಪಂದ್ಯವಾದ ಕಾರಣ ಭಾರತೀಯ ಆಟಗಾರರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕು. ಇತ್ತಂಡಗಳ ಸೆಮಿ ಪಂದ್ಯ ಜುಲೈ 31 ರಂದು ನಿಗದಿಯಾಗಿದೆ.

ಒಂದು ಪಂದ್ಯ ಗೆದ್ದು ಸೆಮಿ ಪ್ರವೇಶಿಸಿದ ಭಾರತ

ಹಾಲಿ ಚಾಂಪಿಯನ್‌ ಆಗಿರುವ ಭಾರತ ತಂಡ ಈ ಬಾರಿಯ ಲೀಗ್‌ನಲ್ಲಿ ಗೆದ್ದದ್ದು ಕೇವಲ ಒಂದು ಪಂದ್ಯ ಮಾತ್ರ. ಆದರೂ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಯಶಸ್ಸು ಕಂಡಿದು ನಿಜಕ್ಕೂ ಅಚ್ಚರಿಯ ಸಂಗತಿ. ಸತತ ಮೂರು ಸೋಲುಗಳಿಗೆ ಕಾರಣವಾದ ಕಳಪೆ ಪ್ರದರ್ಶನದ ನಂತರ ಯುವರಾಜ್ ಸಿಂಗ್ ನೇತೃತ್ವದ ಭಾರತ ಪಂದ್ಯಾವಳಿಯ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ದೊಡ್ಡ ಗೆಲುವು ದಾಖಲಿಸುವ ಅಗತ್ಯವಿತ್ತು. ಮಂಗಳವಾರ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಭಾರತ ತಂಡವು ಕೇವಲ 13.2 ಓವರ್‌ಗಳಲ್ಲಿ 145 ರನ್‌ಗಳ ಗುರಿಯನ್ನು ತಲುಪಿ ಐದು ವಿಕೆಟ್‌ಗಳ ಗೆಲುವು ಸಾಧಿಸಿ, ತಮ್ಮ ನಿವ್ವಳ ರನ್ ದರವನ್ನು ಸುಧಾರಿಸಿಕೊಂಡು ಪಾಯಿಂಟ್ ಪಟ್ಟಿಯಲ್ಲಿ ಮುನ್ನಡೆ ಸಾಧಿಸಿ ನಾಲ್ಕನೇ ತಂಡವಾಗಿ ಸೆಮಿ ಪ್ರವೇಶಿಸಿತು.

ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ತಂಡಗಳ ಶೋಚನೀಯ ಪ್ರದರ್ಶನದಿಂದ ಇಂಡಿಯಾ ಚಾಂಪಿಯನ್ಸ್ ಲಾಭ ಪಡೆದುಕೊಂಡಿತು. ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧದ ಟೂರ್ನಮೆಂಟ್‌ನ ಆರಂಭಿಕ ಪಂದ್ಯ ರದ್ದಾದ ನಂತರ, ಭಾರತ ತಂಡವು ಒಂದು ಪಾಯಿಂಟ್ ಪಡೆದುಕೊಂಡಿತು. ಮತ್ತು ನಂತರ ದಕ್ಷಿಣ ಆಫ್ರಿಕಾ ವಿರುದ್ಧ 88 ರನ್‌ಗಳ ಬೃಹತ್ ಸೋಲನ್ನು ಅನುಭವಿಸಿತು. ಆಸ್ಟ್ರೇಲಿಯಾ ಮತ್ತು ಆತಿಥೇಯ ಇಂಗ್ಲೆಂಡ್ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು.

ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ಎದುರಾಳಿ ತಂಡವನ್ನು 144/9 ಸ್ಕೋರ್‌ಗೆ ಸೀಮಿತಗೊಳಿಸಿತು. ಕೀರನ್ ಪೊಲಾರ್ಡ್ 43 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರು. ಭಾರತದ ಬೌಲರ್‌ಗಳಲ್ಲಿ ಪಿಯೂಷ್ ಚಾವ್ಲಾ ಪ್ರಮುಖ ದಾಳಿ ನಡೆಸಿರು. ನಾಲ್ಕು ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್‌ ಕಿತ್ತರು. ಸ್ಟುವರ್ಟ್ ಬಿನ್ನಿ (2/17) ಕೂಡ ಉತ್ತಮ ಬೆಂಬಲ ನೀಡಿದರು. ವರುಣ್ ಆರನ್ ದುಬಾರಿಯಾಗಿದ್ದರೂ, ಎರಡು ವಿಕೆಟ್‌ಗಳನ್ನು ಪಡೆದರು.