IND vs ENG: 5ನೇ ಟೆಸ್ಟ್‌ನಿಂದ ಬೆನ್ ಸ್ಟೋಕ್ಸ್ ಹೊರಗುಳಿಯಲು ಕಾರಣವೇನು?
Ben Stokes Injury: ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ಜುಲೈ 31 ರಂದು ಆರಂಭವಾಗಲಿರುವ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹೊರ ನಡೆದಿದ್ದಾರೆ. ಅವರು ಭುಜದ ಗಾಯದ ಕಾರಣ ಕೆನಿಂಗ್ಟನ್ ಓವಲ್‌ನಲ್ಲಿ ಕಣಕ್ಕೆ ಇಳಿಯುತ್ತಿಲ್ಲ. ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಖಚಿತಪಡಿಸಿದೆ.

ಐದನೇ ಟೆಸ್ಟ್ ಪಂದ್ಯದಿಂದ ಬೆನ್ ಸ್ಟೋಕ್ಸ್ ಹೊರ ನಡೆದಿದ್ದಾರೆ.

ನವದೆಹಲಿ: ಭಾರತದ ವಿರುದ್ಧ ಇಲ್ಲಿನ ಕೆನಿಂಗ್ಟನ್ ಓವಲ್‌ನಲ್ಲಿ ಜುಲೈ 31 ರಂದು ಆರಂಭವಾಗುವ ಐದನೇ ಹಾಗೂ ಟೆಸ್ಟ್ ಸರಣಿಯ (IND vs ENG) ಕೊನೆಯ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ ಪ್ಲೇಯಿಂಗ್ XI ಅನ್ನು ಪ್ರಕಟಿಸಿದೆ. ಆದರೆ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಅವರು ಐದನೇ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದಾರೆ. ಟೆಸ್ಟ್ ಸರಣಿಯ ಇದು ನಿರ್ಣಾಯಕ ಪಂದ್ಯವಾಗಿದೆ. ಆದರೆ, ಬೆನ್ ಸ್ಟೋಕ್ಸ್ ಹೊರಗುಳಿದಿರುವುದು ಟೀಮ್ ಇಂಡಿಯಾಗೆ ಭಾರಿ ಹಿನ್ನಡೆಯನ್ನು ತಂದೊಡ್ಡಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನಿರ್ಣಾಯಕ ಶತಕವನ್ನು ಸಿಡಿಸಿದ್ದರು. ಆ ಮೂಲಕ ಈ ಪಂದ್ಯದಲ್ಲಿ ಡ್ರಾನಲ್ಲಿ ಅಂತ್ಯವಾಗಿತ್ತು.
ಬೆನ್ ಸ್ಟೋಕ್ಸ್ ಹೊರ ಬಂದ ಕಾರಣ ಅವರ ಸ್ಥಾನಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ XIಗೆ ಜಾಕೋಬ್ ಬೆಥೆಲ್ ಬಂದಿದ್ದಾರೆ. ಇದರ ಜೊತೆಗೆ ಜೋಫ್ರಾ ಆರ್ಚರ್, ಬ್ರೈಡೆನ್ ಕಾರ್ಸ್ ಹಾಗೂ ಲಿಯಾಮ್ ಡಾಸನ್ ಈ ಪಂದ್ಯವನ್ನು ಆಡುತ್ತಿಲ್ಲ. ಇವರ ಬದಲು ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್ ಹಾಗೂ ಜಾಶ್ ಟಾಂಗ್ ಆಡಲಿದ್ದಾರೆ. ಬೆನ್ ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಒಲ್ಲಿ ಪೋಪ್ ತಂಡವನ್ನು ಮುನ್ನಡೆಸಲಿದ್ದಾರೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಸೋಲಿನಿಂದ ತಪ್ಪಿಕೊಂಡರೆ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯನ್ನು ಗೆದ್ದುಕೊಳ್ಳಲಿದೆ.
IND vs ENG: ಐದನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ವಾಸೀಮ್ ಜಾಫರ್!
ಬೆನ್ ಸ್ಟೋಕ್ಸ್ ಐದನೇ ಟೆಸ್ಟ್ ಏಕೆ ಆಡುತ್ತಿಲ್ಲ?
ಬೆನ್ ಸ್ಟೋಕ್ಸ್ ಅವರು ಭುಜದ ಗಾಯದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಲೇ ಅವರು ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಐದನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಬೆನ್ ಸ್ಟೋಕ್ಸ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಪಾಯದ ಕಾರಣ ಅವರು ಐದನೇ ಟೆಸ್ಟ್ ಪಂದ್ಯದಿಂದ ದೂರ ಉಳಿಯುತ್ತಿದ್ದಾರೆ. ಭುಜದ ಗಾಯ ಸಮಸ್ಯೆಯನ್ನು ತಂದೊಡ್ಡಿದೆ, ಆದರೆ ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್ ಆಗಿ ಆಡಲು ಪ್ರಯತ್ನಿಸುತ್ತೇನೆಂದು ಸ್ಟೋಕ್ಸ್ ಹೇಳಿದ್ದರು.
IND vs ENG: ಐದನೇ ಟೆಸ್ಟ್‌ಗೆ ಭಾರತ ತಂಡದಲ್ಲಿ 3 ಬದಲಾವಣೆಯನ್ನು ಸೂಚಿಸಿದ ಇರ್ಫಾನ್ ಪಠಾಣ್!
"ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತೇವೆ. ಓವಲ್ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಆಗಿ ಆಡಬೇಕು ಹಾಗೂ ಬೌಲಿಂಗ್ ಹಾಕಬಾರದೆಂದು ಬಯಸಿದ್ದೆ. ಆದರೆ, ಸ್ಕ್ಯಾನ್ ವರದಿಯಿಂದ ಗಾಯದ ಸ್ವರೂಪ ಗಂಭೀರವಾಗಿದೆ. ಹಾಗಾಗಿ ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಳ್ಳಲು ಈ ಪಂದ್ಯದಿಂದ ಹೊರಗುಳಿಯುತ್ತಿದ್ದೇನೆ. ಇದೇ ರೀತಿ ತಂಡದಲ್ಲಿ ಯಾವುದೇ ಆಟಗಾರನನ್ನು ಅಪಾಯಕ್ಕೆ ತಳ್ಳಲು ನನಗೆ ಇಷ್ಟವಿಲ್ಲ. ನಾನೀಗ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದೇನೆ. ಆ ಮೂಲಕ ಚಳಿಗಾಲಕ್ಕೆ ಸಂಪೂರ್ಣ ಫಿಟ್ ಆಗಲು ಬಯಸುತ್ತಿದ್ದಾರೆ. ಈ ಸರಣಿ ಮುಗಿದ ಬಳಿಕ ನಾನು ಸಂಪೂರ್ಣ ಫಿಟ್ ಆಗುತ್ತೇನೆ, ಆದರೆ, ಇದು ವ್ಯತ್ಯಾಸವನ್ನು ಉಂಟು ಮಾಡುವುದಿಲ್ಲ," ಎಂದು ಇಂಗ್ಲೆಂಡ್ ನಾಯಕ ತಿಳಿಸಿದ್ದಾರೆ.
IND vs ENG 5th Test: ಅಂತಿಮ ಟೆಸ್ಟ್‌ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ
ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಐದು ವಿಕೆಟ್‌ಗಳನ್ನು ಪಡೆದು ಶತಕ ಗಳಿಸಿದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ನಾಲ್ಕು ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ಆಗಿದ್ದಾರೆ.