WCL 2025: ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಭಾರತ ತಂಡ!
ಪಾಕಿಸ್ತಾನ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲು ನಿರಾಕರಿಸಿದ ಭಾರತ ತಂಡ, ಇದೀಗ ಪ್ರಸ್ತುತ ನಡೆಯುತ್ತಿರುವ 2025ರ ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಿಂದ ಅಧಿಕೃತವಾಗಿ ಹೊರ ಬಿದ್ದಿದೆ. ಆ ಮೂಲಕ ಪಾಕಿಸ್ತಾನ ತಂಡ ಫೈನಲ್‌ಗೆ ಅರ್ಹತೆ ಪಡೆದಿದೆ. ಏಕೆಂದರೆ ಭಾರತ ಹಾಗೂ ಪಾಕಿಸ್ತಾನ ನಡುವಣ ರಾಜಕೀಯ ಕಾರಣಗಳಿಂದ ಟೀಮ್ ಇಂಡಿಯಾ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯನ್ನು ತೊರೆದ ಭಾರತ ತಂಡ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯಿಂದ ಭಾರತ ತಂಡ ಅಧಿಕೃತವಾಗಿ ಹೊರ ನಡೆದಿದೆ. ಪಾಕಿಸ್ತಾನ ವಿರುದ್ದ ಸೆಮಿಫೈನಲ್ ಪಂದ್ಯದಲ್ಲಿ ಆಡಲು ಭಾರತ ತಂಡ (India Champions) ಆಡಲು ನಿರಾಕರಿಸಿದೆ, ಈ ಕಾರಣದಿಂದ ಪಾಕಿಸ್ತಾನ ತಂಡ (Pakistan Champions) ಈ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಗಡಿ ಸಂಬಂಧಿತ ರಾಜಕೀಯ ಸಮಸ್ಯೆಗಳಿವೆ. ಈ ಕಾರಣದಿಂದ ಭಾರತ ಬಹುತೇಕ ಆಟಗಾರರು, ಪಾಕ್ ವಿರುದ್ದ ಸೆಮಿಫೈನಲ್ ಪಂದ್ಯವನ್ನು ಆಡಲು ನಿರಾಕರಿಸಿದ್ದಾರೆಂದು ಇಸಿಬಿ ಮನವರಿಕೆ ಮಾಡಿಕೊಂಡಿದೆ.
ಅಂದಹಾಗೆ ಈ ಟೂರ್ನಿಯ ಗುಂಪು ಹಂತದಲ್ಲಿಯೂ ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಿರಲಿಲ್ಲ. ಅದೇ ರೀತಿ ನಿಲುವನ್ನು ಇದೀಗ ಸೆಮಿಫೈನಲ್ ಪಂದ್ಯದಲ್ಲಿಯೂ ತೆಗೆದುಕೊಂಡಿದೆ. ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಭಾರತ ತಂಡದ ಹಲವು ಮಾಜಿ ಆಟಗಾರರು ಪಾಕಿಸ್ತಾನ ವಿರುದ್ಧ ಕಣಕ್ಕೆ ಇಳಿಯುವುದು ಬೇಡವೆಂಬ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿರುವುದನ್ನು ಇಂಡಿಯಾ ಟುಡೇ ಬಹಿರಂಗಪಡಿಸಿದೆ.
IND vs ENG: ಓವಲ್ ಪಿಚ್ ಕ್ಯುರೇಟರ್ ಜತೆ ಗಂಭೀರ್ ಜಗಳದ ಬಗ್ಗೆ ಶುಭಮನ್ ಗಿಲ್ ಪ್ರತಿಕ್ರಿಯೆ!
ಜುಲೈ 31 ರಂದು ಎಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡ, ಪಾಕಿಸ್ತಾನದ ವಿರುದ್ಧ ಮೊದಲನೇ ಸೆಮಿಫೈನಲ್ ಪಂದ್ಯವನ್ನು ಆಡಬೇಕಾಗಿತ್ತು. ಆದರೆ, ಭಾರತ ತಂಡದ ಪ್ರಾಯೋಜಕ ಸಂಸ್ಥೆಯಾದ ಏಸ್‌ಮೈಟ್ರಿಪ್ ಸೆಮಿಫೈನಲ್ ಪಂದ್ಯದಿಂದ ಹೊರ ನಡೆಯಿತು ಹಾಗೂ ಕ್ರಿಕೆಟ್ ಹಾಗೂ ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಕಂಪನಿಯ ಸಂಸ್ಥಾಪಕ ನಿಶಾಂತ್ ಪಿಟ್ಟಿ, ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿ ಸೆಮಿಫೈನಲ್ ತಲುಪಿದ್ದಕ್ಕಾಗಿ ಇಂಡಿಯಾ ಚಾಂಪಿಯನ್ಸ್ ಅನ್ನು ಶ್ಲಾಘಿಸುತ್ತಿದ್ದರೂ, ಪಾಕಿಸ್ತಾನ ಭಾಗವಹಿಸುವ ಪಂದ್ಯಗಳೊಂದಿಗೆ ಸಂಬಂಧ ಹೊಂದಲು ಅವರು ಬಯಸುವುದಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದರು.
IND vs ENG: ಐದನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ವಾಸೀಮ್ ಜಾಫರ್!
"ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ನಾವು ಭಾರತ ಚಾಂಪಿಯನ್ಸ್ ತಂಡವನ್ನು ಶ್ಲಾಘಿಸುತ್ತೇವೆ, ನೀವು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಆದಾಗ್ಯೂ, ಪಾಕಿಸ್ತಾನ ವಿರುದ್ಧದ ಮುಂಬರುವ ಸೆಮಿಫೈನಲ್ ಕೇವಲ ಮತ್ತೊಂದು ಪಂದ್ಯವಲ್ಲ. ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಏಸ್‌ಮೈಟ್ರಿಪ್, ನಾವು ಭಾರತದೊಂದಿಗೆ ನಿಲ್ಲುತ್ತೇವೆ. ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶದೊಂದಿಗೆ ಸಂಬಂಧವನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುವ ಯಾವುದೇ ಕಾರ್ಯಕ್ರಮವನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ. ಭಾರತದ ಜನರು ಮಾತನಾಡಿದ್ದಾರೆ ಮತ್ತು ನಾವು ಅವರ ಮಾತನ್ನು ಕೇಳಿದ್ದೇವೆ. ಡಬ್ಲ್ಯುಸಿಎಲ್‌ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯದೊಂದಿಗೆ ಏಸ್‌ಮೈಟ್ರಿಪ್ ಸಂಬಂಧ ಹೊಂದಿಲ್ಲ. ಕೆಲವು ವಿಷಯಗಳು ಕ್ರೀಡೆಗಿಂತ ದೊಡ್ಡವು. ಮೊದಲು ರಾಷ್ಟ್ರ, ನಂತರ ವ್ಯವಹಾರ. ಯಾವಾಗಲೂ. ಜೈ ಹಿಂದ್," ಎಂದು ಸಂಸ್ಥಾಪಕ ನಿಶಾಂತ್ ಪಿಟ್ಟಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.