ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಭಾರತ-ಪಾಕ್‌ ಏಷ್ಯಾಕಪ್‌ ಪಂದ್ಯ ರದ್ದು ಸಾಧ್ಯತೆ!

IND vs PAK: ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಭಾನ್ ಅಹ್ಮದ್ ಅವರ ಪ್ರಕಾರ, ಏಷ್ಯಾಕಪ್‌ನಲ್ಲಿ ಪಂದ್ಯ ರದ್ದಾಗುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾದರೂ, ನಾವು ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಭಾರತ-ಪಾಕ್‌ ಏಷ್ಯಾಕಪ್‌ ಪಂದ್ಯ ರದ್ದು ಸಾಧ್ಯತೆ!

Abhilash BC Abhilash BC Aug 8, 2025 11:04 AM

ದುಬೈ: ಮುಂಬರುವ ಏಷ್ಯಾಕಪ್‌(Asia Cup 2025) ಕೂಟದಲ್ಲಿ ಭಾರತ ತಂಡ ಪಾಕಿಸ್ತಾನ(IND vs PAK) ವಿರುದ್ಧ ಆಡಲಿದೆ. ಇತ್ತಂಡಗಳ ನಡುವಣ ಪಂದ್ಯ ಸೆ.14 ರಂದು ನಿಗದಿಯಾಗಿದೆ. ಆದರೆ ಪಂದ್ಯ ರದ್ದಾಗುವ ಸಾಧ್ಯತೆ ಕಂಡುಬಂದಿದೆ. ಪದೇ ಪದೇ ಕಾಲುಕೆರೆದು ಜಗಳಕ್ಕೆ ಬರುವ, ಸದಾ ಭಾರತದ ಮೇಲೆ ಭಯೋ ತ್ಪಾದಕ ದಾಳಿ ನಡೆಸುವ ಪಾಕಿಸ್ತಾನ ವಿರುದ್ಧ ಕ್ರಿಕೆಟ್‌ ಸಹವಾಸವೇ ಬೇಡ ಎಂಬ ಅನೇಕರ ಪ್ರತಿರೋಧ ವ್ಯಕ್ತವಾಗಿದೆ.

ಇತ್ತೀಚೆಗೆ ನಡೆದಿದ್ದ ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್‌ (ಡಬ್ಲ್ಯುಸಿಎಲ್‌) ಟೂರ್ನಿಯಲ್ಲಿ ಭಾರತ ತಂಡ ಪಾಕ್‌ ವಿರುದ್ಧದ ಪಂದ್ಯವನ್ನು ಆಡಲು ನಿರಾಕರಿಸಿತ್ತು. ಲೀಗ್‌ ಹಂತ ಮಾತ್ರವಲ್ಲದೆ ಸೆಮಿ ಪಂದ್ಯವನ್ನು ಕೂಡ ಭಾರತ ಆಡಿರಲಿಲ್ಲ. ಹೀಗಾಗಿ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಪಾಕ್‌ ವಿರುದ್ಧ ಆಡಬಾರದು ಎಂಬುದು ಭಾರತೀಯ ಅಭಿಮಾನಿಗಳ ಒತ್ತಾಯ. ಇನ್ನು ಕೆಲವರು ನಾವೇಕೆ ಪಾಕಿಸ್ತಾನಕ್ಕೆ ಪುಕ್ಕಟೆ ಎರಡಂಕ ಕೊಡಬೇಕು, ಅವರನ್ನು ಇನ್ನೊಮ್ಮೆ ಹೆಡೆಮುರಿ ಕಟ್ಟಿ ಸೋಲಿಸಬೇಕು ಎಂದಿದಾರೆ.

ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಭಾನ್ ಅಹ್ಮದ್ ಅವರ ಪ್ರಕಾರ, ಏಷ್ಯಾಕಪ್‌ನಲ್ಲಿ ಪಂದ್ಯ ರದ್ದಾಗುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾದರೂ, ನಾವು ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

"ಏಷ್ಯಾ ಕಪ್‌ನಲ್ಲಿ ಆಡುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಸರ್ಕಾರದ ಅನುಮತಿಗಳನ್ನು ಮುಂಚಿತವಾಗಿ ತೆಗೆದುಕೊಳ್ಳಲಾಗುತ್ತದೆ. ವೇಳಾಪಟ್ಟಿಯನ್ನು ಘೋಷಿಸುವ ನಿರ್ಧಾರಕ್ಕೆ ಬರುವ ಮೊದಲೇ ಅದನ್ನು ಮಾಡಲಾಗಿದೆ. ಆದ್ದರಿಂದ WCL ನಲ್ಲಿ ಇದ್ದಂತಹ ಪರಿಸ್ಥಿತಿ ನಮಗೆ ಬರುವುದಿಲ್ಲ ಎಂದು ಆಶಿಸುತ್ತೇವೆ" ಎಂದು ಅವರು ಹೇಳಿದ್ದಾರೆ. ಆದರೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ Asia Cup 2025: ಏಷ್ಯಾಕಪ್‌ ತಂಡದಿಂದ ಬುಮ್ರಾ, ಗಿಲ್ ಔಟ್; ಕೃಣಾಲ್‌ಗೆ ಅವಕಾಶ?