ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kapil Sharma: ಕಪಿಲ್‌ ಶರ್ಮಾ ಕೆಫೆ ಮೇಲೆ ಮತ್ತೆ ಅಟ್ಯಾಕ್‌; ಸಲ್ಮಾನ್‌ ಜೊತೆಗಿನ ಸ್ನೇಹವೇ ದಾಳಿಗೆ ಕಾರಣ?

Attack On Kapil Sharma's Cafe: ಕಪಿಲ್ ಶರ್ಮಾ ಅವರ ಕೆಫೆ ಮೇಲೆ ಮತ್ತೆ ದಾಳಿ ನಡೆದಿದೆ. ಏಕಾಏಕಿ ಕೆಫೆಗೆ ನುಗ್ಗಿದ 25ಜನರ ತಂಡ ಗುಂಡಿನ ದಾಳಿ ನಡೆಸಿದೆ. ದಾಳಿ ಬೆನ್ನಲ್ಲೇ ಪೊಲೀಸರು ಹೈ ಅಲರ್ಟ್‌ ಆಗಿದ್ದು, ಕಪಿಲ್‌ ಶರ್ಮಾ ಅವರ ಮನೆ ಮತ್ತು ಶೂಟಿಂಗ್‌ ಸೆಟ್‌ ಸುತ್ತಲೂ ಬಿಗಿ ಭದ್ರತೆ ಘೋಷಿಸಲಾಗಿದೆ. ಸಲ್ಮಾನ್‌ ಖಾನ್‌ ಜೊತೆಗಿನ ನಂಟೇ ಈ ದಾಳಿಗೆ ಕಾರಣ ಎನ್ನಲಾಗಿದೆ.

ಕಪಿಲ್‌ ಶರ್ಮಾ ಕೆಫೆ ಮೇಲೆ ಮತ್ತೆ ಗುಂಡಿನ ದಾಳಿ

Rakshita Karkera Rakshita Karkera Aug 8, 2025 1:13 PM

ನವದೆಹಲಿ: ಹಾಸ್ಯ ನಟ ಕಪಿಲ್ ಶರ್ಮಾ(Kapil Sharma) ಅವರ ಕೆಫೆ ಮೇಲೆ ಮತ್ತೆ ದಾಳಿ ನಡೆದಿದೆ. ಏಕಾಏಕಿ ಕೆಫೆಗೆ ನುಗ್ಗಿದ 25ಜನರ ತಂಡ ಗುಂಡಿನ ದಾಳಿ ನಡೆಸಿದೆ. ಇನ್ನು ದಾಳಿಯ ಹೊಣೆಯನ್ನು ಗುರುಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗಳು ಹೊತ್ತುಕೊಂಡಿವೆ. ಇನ್ನು ದಾಳಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಗುಂಡಿನ ಸದ್ದಿನ ನಡುವೆ ಒಂದು ಧ್ವನಿ ಕೇಳಿಸುತ್ತಿದೆ. ನಾವು ಗುರಿಯಿಟ್ಟಿದ್ದ ವ್ಯಕ್ತಿಗೆ ಕರೆ ಮಾಡಿದ್ದೆವು, ಆತ ಕರೆ ಸ್ವೀಕರಿಸಿರಲಿಲ್ಲ. ಆದ್ದರಿಂದ ನಾವು ಕ್ರಮ ಕೈಗೊಳ್ಳಬೇಕಾಯಿತು. ಅವನಿಗೆ ಇನ್ನೂ ಕರೆ ಕೇಳಿಸದಿದ್ದರೆ, ಮುಂದಿನ ಕ್ರಮವನ್ನು ಶೀಘ್ರದಲ್ಲೇ ಮುಂಬೈನಲ್ಲಿ ತೆಗೆದುಕೊಳ್ಳಲಾಗುವುದು ಎಂದು ಒಬ್ಬ ದಾಳಿಕೋರ ಕಿರುಚಾಡುತ್ತಿರುವುದನ್ನು ಕಾಣಬಹುದಾಗಿದೆ.

ಇನ್ನು ದಾಳಿ ಬೆನ್ನಲ್ಲೇ ಪೊಲೀಸರು ಹೈ ಅಲರ್ಟ್‌ ಆಗಿದ್ದು, ಕಪಿಲ್‌ ಶರ್ಮಾ ಅವರ ಮನೆ ಮತ್ತು ಶೂಟಿಂಗ್‌ ಸೆಟ್‌ ಸುತ್ತಲೂ ಬಿಗಿ ಭದ್ರತೆ ಘೋಷಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Khalistan Terrorists: ಗುರುದ್ವಾರ ಆವರಣದಲ್ಲಿ ಖಲಿಸ್ತಾನ್ ರಾಯಭಾರ ಕಚೇರಿ; ಫೋಟೋ ವೈರಲ್‌

ಸಲ್ಮಾನ್‌ ಮೇಲಿನ ಸಿಟ್ಟಿಗೆ ಈ ಕೃತ್ಯ?

ಇನ್ನು ಪದೇ ಪದೆ ಕಪಿಲ್‌ ಶರ್ಮಾನನ್ನು ಗುರಿಯಾಗಿಸಿ ಏಕೆ ದಾಳಿ ನಡೆಯುತ್ತಿದೆ ಎಂಬುದು ಇದೀಗ ಬಹುದೊಡ್ಡ ಪ್ರಶ್ನೆಯಾಗಿದೆ. 1998 ರಲ್ಲಿ ಜೋಧ್‌ಪುರದಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣದ ಸಮಯದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕೆಂಗಣ್ಣಿಗೆ ಗುರಿಯಾಗಿರುವ ನಟ ಸಲ್ಮಾನ್ ಖಾನ್ ಜೊತೆಗೆ ಕಪಿಲ್‌ ಶರ್ಮಾ ಉತ್ತಮ ಒಡನಾಟ ಹೊಂದಿದ್ದಾರೆ. ಇದೇ ಕಾರಣಕ್ಕೆ ಕಪಿಲ್‌ ಶರ್ಮಾ ವಿರುದ್ಧವೂ ಬಿಷ್ಣೋಯ್‌ ಗ್ಯಾಂಗ್‌ ಕಿಡಿಕಾರುತ್ತಿದೆ ಎನ್ನಲಾಗಿದೆ.

ಜೈಲಿನಲ್ಲಿರುವ ಲಾರೆನ್ಸ್‌ ಬಿಷ್ಣೋಯ್‌ ಸಲ್ಮಾನ್‌ ಖಾನ್‌ಗೆ ಆಗಾಗ ಬೆದರಿಕೆ ಒಡ್ಡುತ್ತಲೇ ಇರುತ್ತಾನೆ. ಬಿಷ್ಣೋಯ್‌ ಸಮುದಾಯದವರು ಪವಿತ್ರವೆಂದು ಪೂಜಿಸುವ ಕೃಷ್ಣ ಮೃಗವನ್ನುಬೇಟೆಯಾಡಿರುವ ಸಲ್ಮಾನ್‌ ಖಾನ್‌ ವಿರುದ್ಧ ಪ್ರತೀಕಾರ ಪ್ರತಿಜ್ಞೆ ಮಾಡಿದೆ ಈ ಬಿಷ್ಣೋಯ್‌ ಗ್ಯಾಂಗ್‌. ಕಳೆದ ವರ್ಷವೂ ಸಲ್ಮಾನ್‌ ಖಾನ್‌ ಮನೆ ಮೇಲೆ ದಾಳಿ ನಡೆದಿತ್ತು. ಇದಾದ ನಂತರ ಅವರಿಗೆ Y+ ಭದ್ರತೆ ನೀಡಲಾಗಿತ್ತು.

ಕಾಪ್ಸ್ ಕೆಫೆಯ ಮೇಲೆ ಮೊದಲ ದಾಳಿ ಜುಲೈ 10 ರಂದು ಸಂಭವಿಸಿತು, ಆಗ ಕೆಲವು ಉದ್ಯೋಗಿಗಳು ಇನ್ನೂ ಒಳಗೆ ಇದ್ದರು. ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿರಲಿಲ್ಲ. ಕೆಫೆಯ ಒಂದು ಕಿಟಕಿ ಗಾಜು ಒಡೆದುಹೋಗಿತ್ತು.ಆ ದಾಳಿಯ ಹೊಣೆಯನ್ನು ಭಯೋತ್ಪಾದಕ ಗುಂಪಿನ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಸದಸ್ಯರೊಬ್ಬರು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದರು. ಕಪಿಲ್‌ ತಮ್ಮ ಶೋದಲ್ಲಿ ಸಿಖ್‌ ಉಡುಗೆ ಧರಿಸಿ ಅವಹೇನಕಾರಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.