Sports: ಶಿಕ್ಷಣದ ಜೊತೆಗೆ ಸದೃಢ ದೇಹ ಹೊಂದಲು ಕ್ರೀಡೆ ಅತ್ಯವಶ್ಯ
Sports: ಶಿಕ್ಷಣದ ಜೊತೆಗೆ ಸದೃಢ ದೇಹ ಹೊಂದಲು ಕ್ರೀಡೆ ಅತ್ಯವಶ್ಯ
Ashok Nayak
January 12, 2025
ಸಿರಾ: ಉತ್ತಮ ಸಂಸ್ಕಾರದ ಶಿಕ್ಷಣದ ಜೊತೆಗೆ ಸದೃಢ ದೇಹ ಹೊಂದಲು ಕ್ರೀಡೆ ಅತ್ಯವಶ್ಯ. ಶಾಲೆಗಳು ಇವೆರಡನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದರೆ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನಗರಸಭೆ ಸದಸ್ಯ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ರಂಗನಾಥ್ ಅಭಿಪ್ರಾಯ ಪಟ್ಟರು.
ಅವರು ದಿನಾಂಕ 11.01.2025ರಂದು ಶಿಲಾ ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಶ್ರೀ ಪೂನಂ ಆಂಗ್ಲ ಮಾಧ್ಶಮ ಶಾಲೆಯ ವತಿಯಿಂದ ನಡೆದ ಪೂನಂ ಕ್ರೀಡೋತ್ಸವ'2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದರು.
ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣನೀಡಿ ಸಮಾಜಮುಖಿ ಮಕ್ಕಳನ್ನಾಗಿ ಮಾಡುವ ಸಂಕಲ್ಪದಿಂದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದಿರುವ ಡಾ.ಬಿ.ಗೋವಿಂದಪ್ಪನವರು ಶಾಲೆಯನ್ನು ತೆರೆದಿದ್ದಾರೆ. ಪ್ರಾರಂಭದಲ್ಲಿಯೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ ರಾಂಕ್ ನ್ನು ಈ ಶಾಲೆಯ ವಿದ್ಯಾರ್ಥಿನಿ ಪಡೆದುಕೊಂಡಿರುವುದೇ ನಿದರ್ಶನ ಎಂದು ತಿಳಿಸಿದರು.
ಶಿಕ್ಷಣಾಧಿಕಾರಿಗಳಾದ ಎಂ.ವಿ.ರಾಜಣ್ಣ ಮಾತನಾಡುತ್ತಾ ವಿದ್ಶಾರ್ಥಿಗಳಲ್ಲಿ ಉನ್ನತ, ಮಧ್ಶಮ ಹಾಗೂ ಕೆಳವರ್ಗ ಎಂದು ಮೂರುವರ್ಗಗಳನ್ನಾಗಿ ಮಾಡಿದರೆ ಅತ್ಶಂತ ಕೆಳವರ್ಗದ ಮಕ್ಕಳನ್ನು ಹೆಚ್ಚೆಚ್ಚು ಅಧ್ಶಯನಶೀಲರನ್ನಾಗಿ ಮಾಡುವುದರಿಂದ ಎಲ್ಲರನ್ನೂ ಮುಖ್ಶವಾಹಿನಿಗೆ ತರಲು ಸಾಧ್ಶ. ಈ ನಿಟ್ಟಿನಲ್ಲಿ ಬಜೆಟ್ ಶಾಲೆಯ ಮಾದರಿಯಲ್ಲಿ ಅತ್ಶುತ್ತಮ ಮಟ್ಟದಲ್ಲಿ ಉತ್ತಮ ಫಲಿತಾಂಶ ಬರುವಂತೆ ಗುಣಾತ್ಮಕ ಬೋಧನೆಯಲ್ಲಿ ಶಿಕ್ಷಕರನ್ನು ಈ ಶಾಲೆ ತೊಡಗಿಸಿಕೊಂಡಿರುವುದೇ ಹೆಮ್ಮೆಯ ಸಂಗತಿ ಎಂದರು
ಈ ಸಂದರ್ಭದಲ್ಲಿ 2024ರ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ ಎಸ್ ರವಿ,ˌ ಕನಕಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್ಎಲ್ ರಂಗನಾಥ್, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಶಕ್ಷ ರಾಮಚಂದ್ರಯ್ಯ ಹಾಗೂ ವಿವಿದೋದ್ದೇಶ ಸಹಕಾರಿ ಭಂಡಾರ ಅಧ್ಶಕ್ಷ ಚಂದ್ರಶೇಖರ್ ಆರಾಧ್ಯ ಮತ್ತು ಪ್ರಜಾ ಪ್ರಗತಿ ವರದಿಗಾರ ಹಾಗೂ ಟಿ.ನಾರಾಯಣಪ್ಪ ರಾಜ್ಶಪ್ರಶಸ್ತಿ ಪುರಸ್ಕೃತ ಬರಗೂರು ವಿರುಪಾಕ್ಷ ಹಾಗೂ ಕಾರ್ಯ ನಿರತ ಪತ್ರಕರ್ತ ಸಂಘದ ಅಧ್ಯಕ್ಷ ಎಸ್ಎನ್ ಜೈಪಾಲ್ ಅವರಿಗೆ ಸನ್ಮಾನಿಸಲಾಯಿತು.
ವಾರ್ಷಿಕ ಕ್ರೀಡೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್, ಉಪಾಧ್ಯಕ್ಷ ಲಕ್ಷ್ಮಿಕಾಂತ್, ಪೂನಂ ಶಾಲೆಯ ಅಧ್ಯಕ್ಷ ಡಾಬಿ.ಗೋವಿಂದಪ್ಪ. ಖಜಾಂಚಿ ಬಿಜಿಸ್ವಾಮಿ ದರ್ಶನ್, ಈಸಿಓ ಜಿವಿ ನಾಗಭೂಷಣ್ˌ ತಾˌದೈಹಿಕ ಶಿಕ್ಷಣ ಪ್ರಭಾರಿ ಹಂ.ನಾಗರಾಜುˌ ಪರಸಣ್ಣ, ಸುನಿಲ್ ಕುಮಾರ್,ˌ ಸಂಸ್ಥೆಯ , ಮುಖ್ಶೋಪಾಧ್ಶಾಯ ಗ್ರೇಷಿಯನ್ ಡಿ'ಸೌಜ .ಹಿರಿಯ ಶಿಕ್ಷಕಿ ಅನುಪಮಾ, ಶಿಕ್ಷಕ ಕಾಂತರಾಜು, ದೈಹಿಕ ಶಿಕ್ಷಕ ಗುರುಪ್ರಸಾದ್ ಹಾಗೂ ಶಿಕ್ಷಕಿ ಅಪ್ಸಾನಾತಾಜ್ , ರೇಖಾ ಹಾಗೂ ಶಿಕ್ಷಕ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು.