ನವದೆಹಲಿ: ಈ ಸಲದ ಐಪಿಎಲ್(IPL 2025)ನಲ್ಲಿ ಬ್ಯಾಟರ್‌ಗಳು ಬಳಸುವ ಬ್ಯಾಟ್‌ಗಳ ಅಳತೆಯನ್ನು ಫೀಲ್ಡ್ ಅಂಪೈರ್‌ಗಳು ಪರಿಶೀಲಿಸುವ ನಿಯಮ ಜಾರಿಯಾಗಿದೆ. ನಿಗದಿತ ಅಳತೆಯನ್ನು ಮೀರಿದ ಬ್ಯಾಟ್‌ಗಳನ್ನು ಆಟಗಾರರು ಬಳಸುವಂತಿಲ್ಲ. ಆದರೆ, ಬುಧವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್(DC vs RR) ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದಲ್ಲಿ ಅಂಪೈರ್, ರಿಯಾನ್ ಪರಾಗ್(Riyan Parag) ಅವರ ಬ್ಯಾಟ್ ಅನ್ನು ಗೇಜ್ ಸಲಕರಣೆ ಮೂಲಕ ಪರಿಶೀಲಿಸಲು ವಿಫಲರಾದರು. ಹೀಗಾಗಿ ಪರಾಗ್‌ಗೆ ಇದೇ ಬ್ಯಾಟ್‌ನಲ್ಲಿ ಆಡುವ ಅವಕಾಶ ನೀಡಲಾಯಿತು. ಈ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡು (ರಿಟರ್ಡ್ ಹರ್ಟ್) ಪೆವಿಲಿಯನ್ ಸೇರಿಕೊಂಡ ಬಳಿಕ ಬ್ಯಾಟಿಂಗ್ ನಡೆಸಲು ಬಂದ ಪರಾಗ್ ಅವರ ಬ್ಯಾಟನ್ನು ಅಂಪೈರ್‌ಗಳು ಪರಿಶೀಲಿಸಿದರು. ಈ ವೇಳೆ ಪರಾಗ್ ಬ್ಯಾಟ್‌ನ ಮಧ್ಯಭಾಗದಲ್ಲಿ ಉಬ್ಬು ಇದ್ದ ಕಾರಣ ಅಳತೆ ಮಾಪಕಕ್ಕೆ ಅಡ್ಡಿಯಾಯಿತು. ನಿಯಮದ ಪ್ರಕಾರ ಅಂಪೈರ್ ಪರಾಗ್‌ಗೆ ಈ ಬ್ಯಾಟ್ ಬಳಕೆಗೆ ಅವಕಾಶ ನೀಡಬಾರದಿತ್ತು. ಆದರೂ ಅವಕಾಶ ನೀಡಿದ ಬಗ್ಗೆ ಇದೀಗ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ IPL 2025: ಸೂಪರ್ ಓವರ್ ಗೆಲುವಿನೊಂದಿಗೆ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್
ಕಳೆದ ಮಂಗಳವಾರದ ಪಂದ್ಯದಲ್ಲಿ ಕೆಕೆಆರ್ ತಂಡದ ಸನೀಲ್ ನರೈನ್ ಮತ್ತು ಅನ್ರಿಚ್ ನೋರ್ಜೆ ಅವರ ಬ್ಯಾಟ್‌ನ ಅಳತೆ ಸರಿ ಇರದ ಕಾರಣ ಅವರ ಬ್ಯಾಟ್ ಬದಲಿಸಿ ಆಡಿಸಲಾಗಿತ್ತು. ನರೈನ್ ಬ್ಯಾಟ್ ಅಳತೆ ನಿಯಮವನ್ನು ಉಲ್ಲಂಘಿಸಿದ ಮೊದಲ ಅಟಗಾರ ಎನಿಸಿಕೊಂಡಿದ್ದರು.
ಮಿತಿ ನಿಗದಿ
ಐಪಿಎಲ್‌ನ ಪಂದ್ಯಗಳಿಗೆ ಬ್ಯಾಟ್‌ನ ಆಯಾಮಗಳಿಗೆ ಮಿತಿ ನಿಗದಿಪಡಿಸಿದೆ. ಅದರಂತೆ ಬ್ಯಾಟ್‌ನ ಅಗಲ 4.25 ಇಂಚುಗಳು ಅಥವಾ 10.8 ಸೆಂಟಿ ಮೀಟರ್, ಆಳ 2.64 ಇಂಚು (6.7 ಸೆಂ.ಮೀ), ಅಂಚು 1.56 ಇಂಚು (4.0 ಸೆಂ.ಮೀ) ಮೀರಿರಬಾರದು. ಬ್ಯಾಟ್‌ನ ಉದ್ದ ಹ್ಯಾಂಡಲ್‌ನ ಮೇಲ್ಭಾಗದಿಂದ ಬೇಸ್‌ನವರೆಗೆ 38 ಇಂಚು (96.4 ಸೆಂ.ಮೀ)ಗಿಂತ ಹೆಚ್ಚಿರಬಾರದು. ಇದನ್ನು ಫೀಲ್ಡ್ ಅಂಪೈರ್‌ಗಳು ಗೇಜ್ ಬಳಸಿ ಪರಿಶೀಲನೆ ಮಾಡುತ್ತಾರೆ.