ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಾಹುಲ್​ ಕರೆ ಮಾಡಿದ್ರು...! ಆದರೆ ಫ್ರಾಂಚೈಸಿ ಕೆಟ್ಟದಾಗಿ ನಡೆಸಿಕೊಂಡಿತು; ಗೇಲ್‌ ಸ್ಫೋಟಕ ಹೇಳಿಕೆ

"ಕೆಎಲ್ ರಾಹುಲ್ ಅವರು ನನಗೆ ಫೋನ್ ಮಾಡಿ, 'ಕ್ರಿಸ್, ಇರು, ನೀನು ಮುಂದಿನ ಪಂದ್ಯದಲ್ಲಿ ಆಡುತ್ತೀಯಾ' ಎಂದು ಹೇಳಿದರು. ಆದರೆ ನಾನು 'ನಿಮಗೆ ಒಳ್ಳೆಯದಾಗಲಿ' ಎಂದಷ್ಟೇ ಹೇಳಿ ನನ್ನ ಬ್ಯಾಗ್ ತೆಗೆದುಕೊಂಡು ಹೊರಟೆ," ಎಂದು ಗೇಲ್ ಫ್ರಾಂಚೈಸಿ ತೊರೆದ ಘಟನೆಯನ್ನು ಮೆಲುಕು ಹಾಕಿದರು. ಕ್ರಿಸ್ ಗೇಲ್ ಅವರು ಐಪಿಎಲ್ ನಲ್ಲಿ 2018ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದರು.

ಆ... ಫ್ರಾಂಚೈಸಿ ಕೆಟ್ಟದಾಗಿ ನಡೆಸಿಕೊಂಡಿತು; ಗೇಲ್‌ ಸ್ಫೋಟಕ ಹೇಳಿಕೆ

-

Abhilash BC Abhilash BC Sep 8, 2025 8:14 PM

ಮುಂಬಯಿ: ಯುನಿವರ್ಸಲ್ ಬಾಸ್ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್(Chris Gayle) ಅವರು ಪಂಜಾಬ್ ಕಿಂಗ್ಸ್(Kings XI Punjab) ತಂಡದಲ್ಲಿ ತಮಗಾದ ಬೇಸರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹಿರಿಯ ಆಟಗಾರನಾಗಿ ನನಗೆ ಸಿಗಬೇಕಾಗಿದ್ದ ಬೆಲೆ, ಪಂಜಾಬ್‌ ಫ್ರಾಂಚೈಸಿಯಲ್ಲಿ ನನಗೆ ಸಿಗಲಿಲ್ಲ. ನನ್ನನ್ನು ತೀರಾ ಮಕ್ಕಳಂತೆ ನಡೆಸಿಕೊಂಡರು. ಇದರಿಂದ ನಾನು ಜೀವನದಲ್ಲಿ ಮೊದಲ ಬಾರಿಗೆ ಖಿನ್ನತೆಗೆ ಒಳಗಾಗುವಂತೆ ಭಾಸವಾಯಿತು ಎಂದು ಗೇಲ್‌ ಹೇಳಿದರು.

ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಗೇಲ್‌, "ಪಂಜಾಬ್ ಕಿಂಗ್ಸ್ ತಂಡದಲ್ಲಿ ನನ್ನ ಐಪಿಎಲ್ ಜೀವನ ಬಹಳ ಬೇಗನೆ ಮುಗಿಯಿತು. ನಾನು ಲೀಗ್‌ಗೆ ತುಂಬಾ ಕೊಡುಗೆ ನೀಡಿದ್ದೇನೆ. ಆದರೆ ಹಿರಿಯ ಆಟಗಾರನಾಗಿ ನನಗೆ ಸರಿಯಾದ ಬೆಲೆ ಸಿಗಲಿಲ್ಲ. ನನ್ನನ್ನು ಮಕ್ಕಳಂತೆ ನಡೆಸಿಕೊಂಡರು. ಇದರಿಂದ ಜೀವನದಲ್ಲಿ ಮೊದಲ ಬಾರಿಗೆ ಖಿನ್ನತೆಗೆ ಒಳಗಾಗುವಂತೆ ಅನ್ನಿಸಿತ್ತು. ನಾನು ತಂಡದ ಕೋಚ್‌ ಆಗಿದ್ದ ಅನಿಲ್ ಕುಂಬ್ಳೆ ಅವರೊಂದಿಗೆ ಮಾತನಾಡುವಾಗ ಬೇಸರದಿಂದ ಜೋರಾಗಿ ಅತ್ತಿರುವೆ. ಏಕೆಂದರೆ ನನಗೆ ತುಂಬಾ ನೋವಾಗಿತ್ತು. ಅಷ್ಟರ ಮಟ್ಟಿಗೆ ಫ್ರಾಂಚೈಸಿ ನನ್ನನ್ನು ಅಗೌರವದಿಂದ ನಡೆಸಿಕೊಂಡಿತ್ತು" ಎಂದು ಗೇಲ್ ದೂರಿದ್ದಾರೆ.