KL Rahul: 3,211 ದಿನಗಳ ಬಳಿಕ ತವರಿನಲ್ಲಿ ಟೆಸ್ಟ್ ಶತಕ ಸಿಡಿಸಿ ರೋಹಿತ್, ಗಂಭೀರ್ ದಾಖಲೆ ಮುರಿದ ರಾಹುಲ್
33 ವರ್ಷದ ರಾಹುಲ್ ತಮ್ಮ ತವರು ಋತುವನ್ನು ಉತ್ತಮ ಪ್ರದರ್ಶನದೊಂದಿಗೆ ಆರಂಭಿಸಿದ್ದಾರೆ. ಕಳೆದ ವಾರ, ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧದ 412 ರನ್‌ಗಳ ಅದ್ಭುತ ಚೇಸಿಂಗ್‌ನಲ್ಲಿ ರಾಹುಲ್ ಅಜೇಯ 176 ರನ್‌ಗಳೊಂದಿಗೆ 2016 ರ ಚೆನ್ನೈ ಟೆಸ್ಟ್ ನಂತರ ಭಾರತದಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಶತಕವನ್ನು ಗಳಿಸಿದ್ದರು.

-

ಅಹಮದಾಬಾದ್: ಶುಕ್ರವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್(WI vs IND 1st Test) ವಿರುದ್ಧದ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್(KL Rahul) 11 ನೇ ಟೆಸ್ಟ್ ಶತಕ ಬಾರಿಸುವ ಮೂಲಕ ಬರೋಬ್ಬರಿ 3,211 ದಿನಗಳ ನಂತರ ತವರಿನಲ್ಲಿ ತಮ್ಮ ಮೊದಲ ಶತಕವನ್ನು ದಾಖಲಿಸಿದರು. ಇದೇ ವೇಳೆ ಹಾಲಿ ಕೋಚ್ ಗೌತಮ್ ಗಂಭೀರ್(Gautam Gambhir) ಮತ್ತು ರೋಹಿತ್ ಶರ್ಮ(Rohit Sharma) ಅವರ ದಾಖಲೆಯನ್ನು ಮುರಿದರು.
ಕರ್ನಾಟಕದ ಬ್ಯಾಟರ್ ರಾಹುಲ್, ಭಾರತದ ಪರ ಆರಂಭಿಕರಾಗಿ 10 ಟೆಸ್ಟ್ ಶತಕಗಳನ್ನು ಗಳಿಸುವ ಮೂಲಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಒಂಬತ್ತು ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸುನಿಲ್ ಗವಾಸ್ಕರ್ (33), ವೀರೇಂದ್ರ ಸೆಹ್ವಾಗ್ (22) ಮತ್ತು ಮುರಳಿ ವಿಜಯ್ (12) ಮಾತ್ರ ಭಾರತದ ಪರ ಟೆಸ್ಟ್ ಆರಂಭಿಕರಾಗಿ ಹೆಚ್ಚು ಶತಕಗಳನ್ನು ದಾಖಲಿಸಿದ್ದಾರೆ.
33 ವರ್ಷದ ರಾಹುಲ್ ತಮ್ಮ ತವರು ಋತುವನ್ನು ಉತ್ತಮ ಪ್ರದರ್ಶನದೊಂದಿಗೆ ಆರಂಭಿಸಿದ್ದಾರೆ. ಕಳೆದ ವಾರ, ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎ ವಿರುದ್ಧದ 412 ರನ್‌ಗಳ ಅದ್ಭುತ ಚೇಸಿಂಗ್‌ನಲ್ಲಿ ರಾಹುಲ್ ಅಜೇಯ 176 ರನ್‌ಗಳೊಂದಿಗೆ 2016 ರ ಚೆನ್ನೈ ಟೆಸ್ಟ್ ನಂತರ ಭಾರತದಲ್ಲಿ ತಮ್ಮ ಮೊದಲ ಪ್ರಥಮ ದರ್ಜೆ ಶತಕವನ್ನು ಗಳಿಸಿದ್ದರು.
📸📸
— BCCI (@BCCI) October 3, 2025
A special knock calls for a special celebration 😍
Describe KL Rahul's knock so far 👇
Updates ▶ https://t.co/MNXdZcelkD#TeamIndia | #INDvWI | @IDFCFIRSTBank | @klrahul pic.twitter.com/yX2OK3TVno
2024 ರ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮತ್ತು ಇತ್ತೀಚಿನ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಸರಣಿಯನ್ನು ದಾಖಲಿಸಿದ್ದರು.
ಇದನ್ನೂ ಓದಿ KL Rahul: ಕನ್ನಡಿಗ ರಾಹುಲ್ ಶತಕ; ಮುನ್ನಡೆ ಕಾಯ್ದುಕೊಂಡ ಭಾರತ