ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್; ಬೆಳ್ಳಿ ಗೆದ್ದ ಮೀರಾಬಾಯಿ ಚಾನು

World Weightlifting Championships: ಕಳೆದ ತಿಂಗಳು, ಅಹಮದಾಬಾದ್‌ನಲ್ಲಿ ನಡೆದ 2025 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾನು 193 ಕೆಜಿ (84 ಕೆಜಿ ಸ್ನ್ಯಾಚ್, 109 ಕೆಜಿ ಕ್ಲೀನ್ ಮತ್ತು ಜರ್ಕ್) ಎತ್ತುವ ಮೂಲಕ ಚಿನ್ನ ಗೆದ್ದಿದ್ದರು. ಈ ಗೆಲುವಿನೊಂದಿಗೆ 2026 ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ಪಡೆದಿದ್ದರು.

ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್; ಬೆಳ್ಳಿ ಗೆದ್ದ ಚಾನು

-

Abhilash BC Abhilash BC Oct 3, 2025 10:41 AM

ನವದೆಹಲಿ: ನಾರ್ವೆಯ ಫೋರ್ಡ್‌ನಲ್ಲಿ ನಡೆದ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌(World Weightlifting Championships)ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು(Mirabai Chanu) ಬೆಳ್ಳಿ ಪದಕ ಗೆದ್ದಿದ್ದಾರೆ. ಮೂರು ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಕಣಕ್ಕಿಳಿದ್ದ ಅವರು ಪದಕದೊಂದಿಗೆ ಕಮ್‌ಬ್ಯಾಕ್‌ ಮಾಡಿದರು. ಉತ್ತರ ಕೊರಿಯಾದ ರಿ ಸಾಂಗ್ ಗಮ್ ವಿಶ್ವ ದಾಖಲೆಯ ಪ್ರದರ್ಶನದೊಂದಿಗೆ ಚಿನ್ನ ಗೆದ್ದರೆ, ಥೈಲ್ಯಾಂಡ್‌ನ ಥಾನ್ಯಾಥಾನ್ ಸುಖರೋಯೆನ್ ಕಂಚಿನ ಪದಕ ಗೆದ್ದರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಚಾನು, ಒಟ್ಟು 199 ಕೆಜಿ (84 ಕೆಜಿ ಸ್ನ್ಯಾಚ್, 115 ಕೆಜಿ ಕ್ಲೀನ್ ಮತ್ತು ಜರ್ಕ್)ಭಾರ ಎತ್ತಿ ಬೆಳ್ಳಿ ಪದಕ ಪಡೆದರು. ಈ ಮೂಲಕ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಪದಕ ಗೆದ್ದ ಸಾಧನೆ ಮಾಡಿದರು. 2017ರಲ್ಲಿ ಚಿನ್ನ, ಮತ್ತು 2022ರಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಹೀಗಾಗಿ ಈ ಬಾರಿಯೂ ಅವರ ಮೇಲೆ ಪದಕ ಬರವಸೆ ಇರಿಸಲಾಗಿತ್ತು. ಅದರಂತೆ ಅವರು ನಿರೀಕ್ಷೆಗಳು ಹುಸಿಯಾಗದಂತೆ ಪದಕ ಗೆದ್ದರು.

ಚಾನು ಅವರ ಈ ಸಾಧನೆಯು ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು 18 ಕ್ಕೆ ಏರಿಸಿದೆ. ಕಳೆದ ತಿಂಗಳು, ಅಹಮದಾಬಾದ್‌ನಲ್ಲಿ ನಡೆದ 2025 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಾನು 193 ಕೆಜಿ (84 ಕೆಜಿ ಸ್ನ್ಯಾಚ್, 109 ಕೆಜಿ ಕ್ಲೀನ್ ಮತ್ತು ಜರ್ಕ್) ಎತ್ತುವ ಮೂಲಕ ಚಿನ್ನ ಗೆದ್ದಿದ್ದರು. ಈ ಗೆಲುವಿನೊಂದಿಗೆ 2026 ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ಪಡೆದಿದ್ದರು.



ಉತ್ತರ ಕೊರಿಯಾದ ರಿ ಸಾಂಗ್ ಗಮ್ ಈ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಿದರು. ಸ್ನ್ಯಾಚ್‌ನಲ್ಲಿ 91 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 122 ಕೆಜಿ ಒಟ್ಟು 213 ಕೆಜಿ ಭಾರ ಎತ್ತಿದರು. ಅವರ ಕೊನೆಯ ಎರಡು ಲಿಫ್ಟ್‌ಗಳು - 120 ಕೆಜಿ ಮತ್ತು 122 ಕೆಜಿ - ಕ್ಲೀನ್ ಮತ್ತು ಜರ್ಕ್ ಮತ್ತು ಒಟ್ಟು ಎರಡರಲ್ಲೂ ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿದವು. ಥೈಲ್ಯಾಂಡ್‌ನ ಥಾನ್ಯಾಥೋನ್ ಸುಕ್ಚರೋಯೆನ್ ಒಟ್ಟು 198 ಕೆಜಿ (88 ಕೆಜಿ ಸ್ನ್ಯಾಚ್, 110 ಕೆಜಿ ಕ್ಲೀನ್ ಮತ್ತು ಜರ್ಕ್) ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು.

ಇದನ್ನೂ ಓದಿ 193 ಕೆಜಿ ತೂಕ ಎತ್ತುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡ ಮೀರಾಬಾಯಿ ಚಾನು!