ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ನಿವೃತ್ತಿ ವದಂತಿಗಳ ನಡುವೆ ಕೊಹ್ಲಿಯ 2027 ರ ಏಕದಿನ ವಿಶ್ವಕಪ್ ಯೋಜನೆ ಬಹಿರಂಗ

Kohli ODI World Cup 2027: "ಕೊಹ್ಲಿ ವಿಶ್ವಕಪ್ ಆಡಲು ಉತ್ಸುಕರಾಗಿದ್ದಾರೆ. ಟೆಸ್ಟ್‌ ನಿವೃತ್ತಿ ಬಳಿಕ ಲಂಡನ್‌ನಲ್ಲಿ ನಲೆಸಿದ್ದ ಕೊಹ್ಲಿ, ವಿಶ್ರಾಂತಿ ಸಮಯದಲ್ಲಿ ಬ್ಯಾಟಿಂಗ್‌ ತರಬೇತಿ ಪಡೆಯುತ್ತಿದ್ದರು. ಅವರು ವಾರಕ್ಕೆ 2-3 ಅವಧಿಗಳಲ್ಲಿ ಸುಲಭವಾಗಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು ಎಂದು ನನಗೆ ತಿಳಿದಿದೆ" ಎಂದು ಕಾರ್ತಿಕ್ ಬಹಿರಂಗಪಡಿಸಿದರು.

ನವದೆಹಲಿ: ಟೀಮ್‌ ಇಂಡಿಯಾದ ಅನುಭವಿ, ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) 2027ರ ಏಕದಿನ ವಿಶ್ವಕಪ್(ODI World Cup 2027) ಆಡುತ್ತಾರಾ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಕುರಿತಂತೆ ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌(Dinesh Karthik) ಮಹತ್ವ ಹೇಳಿಕೆಯೊಂದನ್ನು ನೀಡಿದ್ದಾರೆ.

ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ವಿರಾಟ್ ಕೊಹ್ಲಿ 2027 ರ ಏಕದಿನ ವಿಶ್ವಕಪ್ ಆಡಲು ಉತ್ಸುಕರಾಗಿದ್ದಾರೆ ಮತ್ತು ಅದು ಅವರ ಪ್ರಸ್ತುತ ಮೊದಲ ಆದ್ಯತೆಯಾಗಿದೆ ಎಂದು ದಿನೇಶ್ ಕಾರ್ತಿಕ್ ಬಹಿರಂಗಪಡಿಸಿದ್ದಾರೆ. ಅದಕ್ಕಾಗಿ, ಅವರು ತಮ್ಮ ಬಿಡುವಿನ ವೇಳೆಯಲ್ಲಿ ಲಂಡನ್‌ನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದರು. ಕೊಹ್ಲಿ ವಾರಕ್ಕೆ ಎರಡು ಬಾರಿ ಕ್ರಿಕೆಟ್ ಅಭ್ಯಾಸ ಅವಧಿಗಳನ್ನು ಸಿದ್ಧತೆಯಾಗಿ ಹೊಂದಿದ್ದಾರೆ ಎಂದು ಕಾರ್ತಿಕ್‌ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ ಕೊಹ್ಲಿ-ರೋಹಿತ್‌ ಅವರೇ..... ಇನ್ನೂ ಸ್ವಲ್ಪ ದಿನ ಆಡಬಹುದಿತ್ತಲ್ವಾ? ಯಾಕಿಷ್ಟು ಆತುರ!

"ಕೊಹ್ಲಿ ವಿಶ್ವಕಪ್ ಆಡಲು ಉತ್ಸುಕರಾಗಿದ್ದಾರೆ. ಟೆಸ್ಟ್‌ ನಿವೃತ್ತಿ ಬಳಿಕ ಲಂಡನ್‌ನಲ್ಲಿ ನಲೆಸಿದ್ದ ಕೊಹ್ಲಿ, ವಿಶ್ರಾಂತಿ ಸಮಯದಲ್ಲಿ ಬ್ಯಾಟಿಂಗ್‌ ತರಬೇತಿ ಪಡೆಯುತ್ತಿದ್ದರು. ಅವರು ವಾರಕ್ಕೆ 2-3 ಅವಧಿಗಳಲ್ಲಿ ಸುಲಭವಾಗಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು ಎಂದು ನನಗೆ ತಿಳಿದಿದೆ" ಎಂದು ಕಾರ್ತಿಕ್ ಬಹಿರಂಗಪಡಿಸಿದರು.

ದಿನೇಶ್‌ ಕಾರ್ತಿಕ್‌ ಇನ್‌ಸ್ಟಾಗ್ರಾಮ್‌ ವಿಡಿಯೊ