ಝಿಯಾನ್ ಹಿಲ್ಸ್ ನಲ್ಲಿ ನಡೆದ ಕೋಲಾರ್ ಓಪನ್ 2025ರಲ್ಲಿ ಕ್ಷಿತಿಜ್ ನವೀದ್ ಕೌಲ್ ಅಮೋಘ ಗೆಲುವು
ಕ್ಷಿತಿಜ್ ನವೀದ್ ಕೌಲ್ (74-69-71-65) ಓವರ್ ನೈಟ್ ಫಿಫ್ತ್ ಮತ್ತು ಸಿಕ್ಸ್ ಆಫ್ ದಿ ಲೀಡ್ ಮೂಲಕ ನಾಲ್ಕನೇ ದಿನದಂದು ನಂಬಲಾಗದಂತೆ ಪುನರಾಗಮನ ಪಡೆದಿದ್ದು ಕೊನೆಯ ನಾಲ್ಕು ಹೋಲ್ ಗಳಲ್ಲಿ ಮೂರು ಬರ್ಡಿಗಳು ಮತ್ತು ಈಗಲ್ ನಿಂದ ಏಳು-ಅಂಡರ್ 65ರಿಂದ ಒಂಬತ್ತು- ಅಂಡರ್ 279ಕ್ಕೆ ಕೊಂಡೊಯ್ದರು.

-

ಕೋಲಾರ: ದೆಹಲಿಯ ಕ್ಷಿತಿಜ್ ನವೀದ್ ಕೌಲ್ ಕರ್ನಾಟಕದ ಕೋಲಾರದಲ್ಲಿರುವ ಝಿಯಾನ್ ಹಿಲ್ಸ್ ಗಾಲ್ಫ್ (Golf)ಕೌಂಟಿಯಲ್ಲಿ ನಡೆದ 1 ಕೋಟಿ ರೂ. ಮೌಲ್ಯದ ಕೋಲಾರ್ ಓಪನ್ (Kolar Open) 2025ರಲ್ಲಿ ಗೆಲುವನ್ನು ತನ್ನದಾಗಿಸಿಕೊಂಡರು.
ಕ್ಷಿತಿಜ್ ನವೀದ್ ಕೌಲ್ (74-69-71-65) ಓವರ್ ನೈಟ್ ಫಿಫ್ತ್ ಮತ್ತು ಸಿಕ್ಸ್ ಆಫ್ ದಿ ಲೀಡ್ ಮೂಲಕ ನಾಲ್ಕನೇ ದಿನದಂದು ನಂಬಲಾಗದಂತೆ ಪುನರಾಗಮನ ಪಡೆದಿದ್ದು ಕೊನೆಯ ನಾಲ್ಕು ಹೋಲ್ ಗಳಲ್ಲಿ ಮೂರು ಬರ್ಡಿಗಳು ಮತ್ತು ಈಗಲ್ ನಿಂದ ಏಳು-ಅಂಡರ್ 65ರಿಂದ ಒಂಬತ್ತು- ಅಂಡರ್ 279ಕ್ಕೆ ಕೊಂಡೊಯ್ದರು. ಮತ್ತು ವಾರದ ಅತ್ಯಂತ ಹೆಚ್ಚಿನ ಗಾಳಿ ಬೀಸುತ್ತಿದ್ದು ಗಂಟೆಗೆ 30 ಕಿ.ಮೀ. ಬೀಸುತ್ತಿದ್ದರೂ ಎರಡು-ಶಾಟ್ ಗೆಲುವನ್ನು ಸಾಧಿಸಿದರು.
24 ವರ್ಷದ ಕೌಲ್ ಗೆಲುವು ಸಾಧಿಸಿದ ಐದನೆಯವರು. ಕ್ಷಿತಿಜ್ ಅವರು 15 ಲಕ್ಷ ರೂ. ಚೆಕ್ ಪಡೆದಿದ್ದು ಪಿಜಿಟಿಐ ಆರ್ಡರ್ ಆಫ್ ಮೆರಿಟ್ ನಲ್ಲಿ ಎಂಟನೇ ಸ್ಥಾನಕ್ಕೆ ಜಿಗಿದಿದ್ದು ಈ ಋತುವಿನ ಗಳಿಕೆ ರೂ. 48,00,847 ಆಗಿದೆ.
ಇದನ್ನೂ ಓದಿ: Asia Cup 2025: ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಕಣಕ್ಕೆ!
ಶೌರ್ಯ ಭಟ್ಟಾಚಾರ್ಯ (70-72-66-73) ಮತ್ತೊಬ್ಬ ದೆಹಲಿ ಮೂಲದ ವೃತ್ತಿಪರರಾಗಿದ್ದು ಮೂರು ಶಾಟ್ಸ್ ನಿಂದ ಮುಂಚೂಣಿಗೆ ಬಂದಿದ್ದು ಅಂತಿಮ ಸುತ್ತಿನಲ್ಲಿ 73ರಿಂದ ಏಳು-ಅಂಡರ್ 281 ಆಗಿ ರನ್ನರ್-ಅಪ್ ಎನಿಸಿದರು. ಶವರ್ಯ ಪಿಜಿಟಿಐ ಆರ್ಡರ್ ಆಫ್ ಮೆರಿಟ್ ನಲ್ಲಿ ನಾಲ್ಕು ಸ್ಥಾನ ಮೇಲಕ್ಕೆ ಏರಿ ಆರನೇ ಸ್ಥಾನ ಪಡೆದರು.
ಗುರುಗ್ರಾಮ್ ನ ಧ್ರುವ್ ಶಿಯೊರನ್ (67) ನಾಲ್ಕು-ಅಂಡರ್ 284ರಲ್ಲಿ ಮೂರನೇ ಸ್ಥಾನ ಪಡೆದರು.
ಕ್ಷಿತಿಜ್, “ನಾನು ಇಡೀ ದಿನ ತಾಳ್ಮೆಯಿಂದ ಇದ್ದೆ ಮತ್ತು ಗುಣಮಟ್ಟದ ಶಾಟ್ಸ್ ಹೊಡೆಯಲು ಗಮನ ನೀಡಿದೆ. ನನ್ನ ಆಟದ ಎಲ್ಲ ಆಯಾಮವೂ ಮುಖ್ಯವಾಗ ಡ್ರೈವಿಂಗ್ ಮತ್ತು ಪುಟಿಂಗ್ ನಲ್ಲಿ ಈ ವಾರ ಅತ್ಯಂತ ತೀಕ್ಷ್ಣವಾಗಿತ್ತು. ಆಫ್-ಸೀಸನ್ ನಲ್ಲಿ ಮಾಡಿದ ಕೆಲಸ ಪ್ರಯೋಜನಕ್ಕೆ ಬಂದಿತು.
ಅಂತಿಮ ಹಂತದಲ್ಲಿ ನಾನು ಒಂದಾದ ನಂತರ ಮತ್ತೊಂದು ಒಳ್ಳೆಯ ಶಾಟ್ ಹೊಡೆಯಲು ಪ್ರಯತ್ನಿಸಿದೆ. ಗಾಳಿಯು ಇದನ್ನು ಸವಾಲಿನದಾಗಿಸಿತು. ಆದರೆ ಒಳ್ಳೆಯ ಶಾಟ್ಸ್ ಹೊಡೆಯಬಲ್ಲೆ ಎಂದು ನಂಬಿದ್ದೆ. ಅಂತಿಮವಾಗಿ ಗೆಲುವು ದೊರೆಯಿತು” ಎಂದರು.
ಪುಣೆಯ ಉದಯನ್ ಮಾನೆ ಎರಡನೇ ಸುತ್ತಿನಲ್ಲಿ ಮೂರು-ಅಂಡರ್ 285 ಸಾಧಿಸಿದರು. ಗುರುಗ್ರಾಮ್ ನ ಡಿ.ಎಲ್.ಎಫ್. ಗಾಲ್ಫ್ ಅಂಡ್ ಕಂಟ್ರಿ ಕ್ಲಬ್ ಹನಿ ಬೈಸೊಯಾ(72) ನಾಲ್ಕನೇ ಸ್ಥಾನ ಪಡೆದರು.
ನೇಪಾಳದ ಸುಭಾಷ್ ತಮಾಂಗ್ ಎರಡು-ಅಂಡರ್ 286ರಲ್ಲಿ ಪೂರ್ಣಗೊಳಿಸಿದರು.
ಕ್ಷಿತಿಜ್ ಹಾಟ್ ಪುಟರ್ ನೊಂದಿಗೆ ಇಡೀ ದಿನ ಮುಂಚೂಣಿಯಲ್ಲಿದ್ದ ಶೌರ್ಯ ಭಟ್ಟಾಚಾರ್ಯರನ್ನು ಅಂತಿಮವಾಗಿ ಹಿಂದಿಕ್ಕಿದರು.