ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಕಣಕ್ಕೆ!

ಟೊಯೋಟಾ ಮೋಟಾರ್ ಕಾರ್ಪೊರೇಷನ್(Toyota Motors) ಸೇರಿದಂತೆ ಎರಡು ಕಂಪನಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪ್ರಮುಖ ಪ್ರಾಯೋಜಕರಾಗಲು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ. ಜಪಾನ್‌ ಮೂಲದ ಟೊಯೋಟಾ ಕಂಪೆನಿ ಪ್ರಸಕ್ತ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಜೆರ್ಸಿ ಪ್ರಾಯೋಜಕ ಹೊಂದಿದೆ

ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಆಡಲಿದೆ ಭಾರತ

Abhilash BC Abhilash BC Aug 29, 2025 2:20 PM

ನವದೆಹಲಿ: 2025 ರ ಏಷ್ಯಾ ಕಪ್‌ ಟೂರ್ನಿಯಲ್ಲಿ(Asia Cup 2025) ಭಾರತ ತಂಡವು ಯಾವುದೇ ಜೆರ್ಸಿ ಪ್ರಾಯೋಜಕತ್ವವಿಲ್ಲದೆ(India jersey sponsor) ಆಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಬಿಸಿಸಿಐ(BCCI)ನೊಂದಿಗೆ ಬರೋಬ್ಬರಿ ₹358 ಕೋಟಿ ಮೊತ್ತದ ಜೆರ್ಸಿ ಪ್ರಾಯೋಜಕತ್ವ(Team India's sponsor) ಒಪ್ಪಂದವನ್ನು ಡ್ರೀಮ್11(Dream11) ಕೊನೆಗೊಳಿಸಿತ್ತು. ಏಷ್ಯಾ ಕಪ್‌ಗೆ ಕೆಲವೇ ದಿನಗಳು ಉಳಿದಿರುವುದರಿಂದ, ಹೊಸ ಪ್ರಾಯೋಜಕರನ್ನು ಪಡೆಯಲು ಬಿಸಿಸಿಐಗೆ ಹೆಚ್ಚು ಸಮಯ ಉಳಿದಿಲ್ಲ. ಅಲ್ಲದೆ ಬಿಸಿಸಿಐ ಪ್ರಾಯೋಜಕತ್ವಕ್ಕೆ ಇನ್ನೂ ಟೆಂಡರ್‌ ಆಹ್ವಾನಿಸಿಲ್ಲ. ಹೀಗಾಗಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಆಡುವ ಸಾಧ್ಯತೆಯಿದೆ.

ಬಿಸಿಸಿಐ 2027 ರ ಏಕದಿನ ವಿಶ್ವಕಪ್ ವರೆಗೆ ಪ್ರಾಯೋಜಕರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ. ಆದರೆ ಏಷ್ಯಾ ಕಪ್ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದೆ. ಇತ್ತೀಚೆಗೆ ಸಂಸತ್ತಿನಲ್ಲಿ 'ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025' ಅಂಗೀಕಾರವಾದ ನಂತರ, ಡ್ರೀಮ್ 11 ಭಾರತೀಯ ಕ್ರಿಕೆಟ್ ತಂಡದ ಶೀರ್ಷಿಕೆ ಪ್ರಾಯೋಜಕರಾಗಿ ಬಿಸಿಸಿಐ ಜತೆಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿತ್ತು. ಆಗಸ್ಟ್ 28 ರ ಗುರುವಾರ ಬಿಸಿಸಿಐನ ಮಧ್ಯಂತರ ಅಧ್ಯಕ್ಷ ರಾಜೀವ್ ಶುಕ್ಲಾ ಅವರ ಅಧ್ಯಕ್ಷತೆಯಲ್ಲಿ ಬಿಸಿಸಿಐ ತುರ್ತು ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಿತ್ತು.

ಸಭೆಯಲ್ಲಿ ಹೊಸ ಪ್ರಾಯೋಜಕರನ್ನು ಹುಡುಕುವ ಬಗ್ಗೆ ಚರ್ಚೆಗಳು ನಡೆದವು, ಮತ್ತು ಬಿಸಿಸಿಐ ಇನ್ನೂ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆಯಲ್ಲಿದೆ. ಆದರೆ ಜಾಹೀರಾತು ನೀಡಲು ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯವಿಲ್ಲದ ಕಾರಣ, ಏಷ್ಯಾ ಕಪ್‌ಗೆ ಪ್ರಾಯೋಜಕತ್ವವಿಲ್ಲದೆ ಆಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ Asia Cup 2025: ಶುಭಮನ್ ಗಿಲ್‌ಗಾಗಿ ಸಂಜು ಸ್ಯಾಮ್ಸನ್‌ಗೆ ಅನ್ಯಾಯ ಮಾಡಬೇಡಿ!

ಟೊಯೋಟಾ ಮೋಟಾರ್ ಕಾರ್ಪೊರೇಷನ್(Toyota Motors) ಸೇರಿದಂತೆ ಎರಡು ಕಂಪನಿಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪ್ರಮುಖ ಪ್ರಾಯೋಜಕರಾಗಲು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ. ಜಪಾನ್‌ ಮೂಲದ ಟೊಯೋಟಾ ಕಂಪೆನಿ ಪ್ರಸಕ್ತ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಜೆರ್ಸಿ ಪ್ರಾಯೋಜಕ ಹೊಂದಿದೆ. ಈ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಜೆರ್ಸಿ ಪ್ರಾಯೋಜಕತ್ವವನ್ನೂ ಹೊಂದಿತ್ತು. ಟೊಯೋಟಾ ಜತೆ ಫಿನ್‌ಟೆಕ್‌ ಸ್ಟಾರ್ಟ್‌ಅಪ್‌ ಸಹಿತ ಕೆಲ ಕಂಪೆನಿಗಳ ನಡುವೆ ಪೈಪೋಟಿ ಆರಂಭಗೊಂಡಿದೆ ಎನ್ನಲಾಗಿದೆ.