ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೈ ಸನ್ನೆಯ ಮೂಲಕ ಆಂಗ್ಲರ ಡಿಆರ್‌ಎಸ್‌ ಉಳಿಸಿದ ಅಂಪೈರ್‌; ವಿಡಿಯೊ ವೈರಲ್‌

IND vs ENG 5th Test: ಡಿಆರ್‌ಎಸ್‌ ನಿಯಮ ಜಾರಿಗೆ ಬರುಕ್ಕೂ ಮುನ್ನ ಬೌಲಿಂಗ್‌ ತಂಡದ ಆಟಗಾರರು ಎಲ್‌ಬಿಡಬ್ಲ್ಯು ಸೇರಿ ಇನ್ನಿತ್ತರ ಔಟ್‌ ಮನವಿ ಮಾಡಿದಾಗ ಅಂಪೈರ್‌ ಇದನ್ನು ತಿರಸ್ಕರಿಸಿದ ಬಳಿಕ ಔಟ್‌ ಏಕೆ ನೀಡಿಲ್ಲ ಎಂದು ತಿಳಿಸುವ ನಿಟ್ಟಿನಲ್ಲಿ ಸನ್ನೆಗಳ ಮೂಲಕ ಅಥವಾ ಬಾಯಿ ಮಾತಿನ ಮೂಲಕ ಇದನ್ನು ಹೇಳುತ್ತಿದ್ದರು.

ಕೈ ಸನ್ನೆಯ ಮೂಲಕ ಆಂಗ್ಲರ ಡಿಆರ್‌ಎಸ್‌ ಉಳಿಸಿದ ಅಂಪೈರ್‌; ವಿಡಿಯೊ ವೈರಲ್‌

Abhilash BC Abhilash BC Aug 1, 2025 9:56 AM

ಲಂಡನ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5ನೇ ಟೆಸ್ಟ್‌ನ(IND vs ENG 5th Test) ಮೊದಲ ದಿನವೇ ವಿವಾದವೊಂದು ಹುಟ್ಟಿಕೊಂಡಿದೆ. ಅಂಪೈರ್‌ ಧರ್ಮಸೇನಾ(Kumar Dharmasena) ಇಂಗ್ಲೆಂಡ್‌ ಆಟಗಾರರಿಗೆ ನೆರವಾದದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿಯಮ ಉಲ್ಲಂಘಿಸಿ ಧರ್ಮಸೇನಾ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಅನೇಕ ಮಾಜಿ ಭಾರತೀಯ ಆಟಗಾರರು ಆಗ್ರಹಿಸಿದ್ದಾರೆ.

ಮೊದಲ ದಿನದಾಟದಲ್ಲಿ ವೇಗಿ ಜೋಶ್‌ ಟಂಗ್‌ ಎಸೆತದಲ್ಲಿ ಚೆಂಡು ಸಾಯಿ ಸುರ್ಶನ್‌ ಕಾಲಿಗೆ ಬಡಿದಾಗ ಇಂಗ್ಲೆಂಡ್‌ ಆಟಗಾರರು ಎಲ್‌ಬಿಡಬ್ಲ್ಯುಗೆ ಮನವಿ ಮಾಡಿರು. ಆದರೆ ಫೀಲ್ಡ್‌ ಅಂಪೈರ್‌ ಆಗಿದ್ದ ಧರ್ಮಸೇನಾ ಮನವಿಯನ್ನು ತಳ್ಳಿಹಾಕಿದರು. ಯಾರ್ಕರ್‌ ಎಸೆತವಾಗಿದ್ದ ಕಾರಣ ಇಂಗ್ಲೆಂಡ್‌ ಆಟಗಾರರು ಡಿಆರ್‌ಎಸ್‌ ಮೊರೆ ಹೋಗಲು ನಿರ್ಧರಿಸುವ ಬಗ್ಗೆ ಚರ್ಚಿಸುತ್ತಿರುವ ಧರ್ಮಸೇನಾ ಚೆಂಡು ಬ್ಯಾಟ್‌ಗೆ ಇನ್‌ಸೈಡ್‌ ಎಡ್ಜ್‌ ಆಗಿದೆ ಎಂಬಂತೆ ಕೈಯಲ್ಲಿ ಸನ್ನೆ ಮಾಡಿ ತೋರಿಸಿದರು. ಇದರಿಂದ ಇಂಗ್ಲೆಂಡ್‌ ಆಟಗಾರರು ಡಿಆರ್‌ಎಸ್‌ ಮೊರೆ ಹೋಗದೆ ತಮ್ಮ ಡಿಆರ್‌ಎಸ್‌ ವ್ಯರ್ಥಮಾಡಿಕೊಳ್ಳುದ್ದನ್ನು ತಪ್ಪಿಸಿಕೊಂಡರು. ಅಂಪೈರ್‌ಗಳಿಗೆ ಈ ರೀತಿಯ ಸನ್ನೆ ಮಾಡಲು ಅವಕಾಶ ಇಲ್ಲದಿದ್ದರೂ ಕೂಡ ಈ ರೀತಿ ಮಾಡಿದ್ದಕ್ಕೆ ಧರ್ಮಸೇನಾ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದೆ. ಜತೆಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಹ್ರಹಿಸಲಾಗಿದೆ.



ಐಸಿಸಿ ನಿಯಮ ಏನು ಹೇಳುತ್ತೆ?

ಡಿಆರ್‌ಎಸ್‌ ನಿಯಮ ಜಾರಿಗೆ ಬರುಕ್ಕೂ ಮುನ್ನ ಬೌಲಿಂಗ್‌ ತಂಡದ ಆಟಗಾರರು ಎಲ್‌ಬಿಡಬ್ಲ್ಯು ಸೇರಿ ಇನ್ನಿತ್ತರ ಔಟ್‌ ಮನವಿ ಮಾಡಿದಾಗ ಅಂಪೈರ್‌ ಇದನ್ನು ತಿರಸ್ಕರಿಸಿದ ಬಳಿಕ ಔಟ್‌ ಏಕೆ ನೀಡಿಲ್ಲ ಎಂದು ತಿಳಿಸುವ ನಿಟ್ಟಿನಲ್ಲಿ ಸನ್ನೆಗಳ ಮೂಲಕ ಅಥವಾ ಬಾಯಿ ಮಾತಿನ ಮೂಲಕ ಇದನ್ನು ಹೇಳುತ್ತಿದ್ದರು. ಆದರೆ ಡಿಆರ್‌ಎಸ್‌ ನಿಯಮ ಜಾರಿಗೆ ಬಂದ ಬಳಿಕ ಅಂಪೈರ್‌ ಯಾವುದೇ ರೀತಿಯ ಸನ್ನೆ ಮಾಡುವಂತಿಲ್ಲ. ಏಕೆಂದರೆ ಅಂಪೈರ್‌ ನಿರ್ಧಾರವನ್ನು ಪ್ರಶ್ನಿಸಿ ಮತ್ತೊಮ್ಮೆ ಪರಿಶೀಲನೆ ನಡೆಸುವ ಅವಕಾಶ ಆಟಗಾರರಿಗೆ ಇರುತ್ತದೆ.

ಇದನ್ನೂ ಓದಿ IND vs ENG 5th Test: ಇಂಗ್ಲೆಂಡ್‌ ಮಾರಕ ದಾಳಿಯಿಂದ 6 ವಿಕೆಟ್‌ ಕಳೆದುಕೊಂಡ ಭಾರತಕ್ಕೆ ಕರುಣ್‌ ನಾಯರ್‌ ಆಸರೆ!