ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

National Sports Day: ಹಾಕಿ ದಂತಕಥೆ ಧ್ಯಾನ್ ಚಂದ್‌ರ 10 ವಿಶಿಷ್ಟ ಸಂಗತಿಗಳು ಇಲ್ಲಿವೆ

ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದ ಧ್ಯಾನ್ ಚಂದ್, 1932 ಮತ್ತು 1936 ರಲ್ಲಿ ದೇಶದ ಐತಿಹಾಸಿಕ ಒಲಿಂಪಿಕ್ ಅಭಿಯಾನಗಳ ಭಾಗವಾಗಿದ್ದ ಭಾರತವನ್ನು ಜಾಗತಿಕ ನಕ್ಷೆಯಲ್ಲಿ ಕ್ರೀಡಾ ರಾಷ್ಟ್ರವಾಗಿ ಗುರುತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರ ಹೆಸರಿನಲ್ಲಿ ಅತ್ಯುನ್ನತ ಭಾರತೀಯ ಕ್ರೀಡಾ ಗೌರವ ಪ್ರಶಸ್ತಿ ನೀಡಲಾಗುತ್ತದೆ.

ನವದೆಹಲಿ: ಮೇಜರ್ ಧ್ಯಾನ್ ಚಂದ್(Major Dhyan Chand) ಅವರ ಜನ್ಮ ದಿನವಾದ ಆಗಸ್ಟ್ 29ರಂದು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ(National Sports Day) ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯೂ ದೇಶಾದ್ಯಂತ ಧ್ಯಾನ್ ಚಂದ್ ಅವರ ಪ್ರತಿಮೆಗೆ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ "ಎಲ್ಲರಿಗೂ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು! ಈ ವಿಶೇಷ ಸಂದರ್ಭದಲ್ಲಿ, ಮೇಜರ್ ಧ್ಯಾನ್ ಚಂದ್ ಜಿ ಅವರಿಗೆ ನಾವು ಗೌರವ ಸಲ್ಲಿಸುತ್ತೇವೆ. ಅವರ ಶ್ರೇಷ್ಠತೆಯು ಹಲವು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ" ಎಂದು ತಿಳಿಸಿದರು.

ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದ ಧ್ಯಾನ್ ಚಂದ್, 1932 ಮತ್ತು 1936 ರಲ್ಲಿ ದೇಶದ ಐತಿಹಾಸಿಕ ಒಲಿಂಪಿಕ್ ಅಭಿಯಾನಗಳ ಭಾಗವಾಗಿದ್ದ ಭಾರತವನ್ನು ಜಾಗತಿಕ ನಕ್ಷೆಯಲ್ಲಿ ಕ್ರೀಡಾ ರಾಷ್ಟ್ರವಾಗಿ ಗುರುತಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರ ಹೆಸರಿನಲ್ಲಿ ಅತ್ಯುನ್ನತ ಭಾರತೀಯ ಕ್ರೀಡಾ ಗೌರವ ಪ್ರಶಸ್ತಿ ನೀಡಲಾಗುತ್ತದೆ.

ಧ್ಯಾನ್ ಚಂದ್ ಬಗೆಗಿನ ಆಸಕ್ತಿದಾಯಕ ಸಂಗತಿಗಳು

ಧ್ಯಾನ್ ಸಿಂಗ್ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು. ಆಗಸ್ಟ್ 29, 1905 ರಂದು ಅಲಹಾಬಾದ್‌ನಲ್ಲಿ ಶಾರದಾ ಸಿಂಗ್ ಮತ್ತು ಸಮೇಶ್ವರ ಸಿಂಗ್ ದಂಪತಿಗೆ ಜನಿಸಿದ ಅವರು ತಮ್ಮ ತಂದೆಯಂತೆಯೇ 16 ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿಕೊಂಡರು.

ಧ್ಯಾನ್ ಚಂದ್ ಸೈನ್ಯದಲ್ಲಿ ತಮ್ಮ ಗೆಳೆಯರಿಂದ 'ಚಂದ್' ಎಂಬ ಹೆಸರನ್ನು ಪಡೆದರು. ರಾತ್ರಿಯಲ್ಲಿ, ಬೆಳದಿಂಗಳ ಬೆಳಕಿನಲ್ಲಿ ಹಾಕಿ ಅಭ್ಯಾಸ ಮಾಡುವ ಮೂಲಕ ಜನಪ್ರಿಯರಾದರು.

ಧ್ಯಾನ್ ಚಂದ್ 1926 ರಿಂದ 1948 ರವರೆಗಿನ ತಮ್ಮ ಕ್ರೀಡಾ ವೃತ್ತಿ ಜೀವನದಲ್ಲಿ 1,000 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದರು. ಆಧುನಿಕ ಅಂಕಿಅಂಶಗಳು ಅಧಿಕೃತವಾಗಿ ಡೇಟಾವನ್ನು ಹೊಂದಿಲ್ಲದಿರಬಹುದು, ಆದರೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಹಾಕಿಯಲ್ಲಿ ಅವರ ವೃತ್ತಿಜೀವನದ ಅಂಕಿಅಂಶಗಳು ಹಾಗೆ ಸೂಚಿಸುತ್ತವೆ.

ಹಾಕಿ ದಂತಕಥೆಗೆ 1956 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಆದಾಗ್ಯೂ, ಅವರಿಗೆ ಭಾರತ ರತ್ನ ಸಿಗಲಿಲ್ಲ! ಹಲವಾರು ಶಿಫಾರಸುಗಳು ಮತ್ತು ಪರಿಗಣನೆಗಳ ಹೊರತಾಗಿಯೂ, ಚಂದ್ ಅವರಿಗೆ ಅವರ ಜೀವಿತಾವಧಿಯಲ್ಲಿ ಅಥವಾ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವವನ್ನು ನೀಡದ್ದು ವಿಪರ್ಯಾಸ.

ಭಾರತೀಯ ಹಾಕಿ ಮತ್ತು ಕ್ರೀಡೆಗೆ ಧ್ಯಾನ್ ಚಂದ್ ನೀಡಿದ ಕೊಡುಗೆಯನ್ನು ಗೌರವಿಸಲು ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ. ಇದರ ಘೋಷಣೆ ಮೊದಲ ಬಾರಿಗೆ 2012 ರಲ್ಲಿ ನಡೆಯಿತು.

1936 ರ ಒಲಿಂಪಿಕ್ಸ್ ಫೈನಲ್‌ನಲ್ಲಿ ಆತಿಥೇಯ ಜರ್ಮನಿಯ ವಿರುದ್ಧ ಬರಿಗಾಲಿನಲ್ಲಿ ಆಟವಾಡಿ ಧ್ಯಾನ್ ಚಂದ್ ಬರ್ಲಿನ್‌ನಲ್ಲಿ ಸ್ಥಳೀಯ ಪ್ರೇಕ್ಷಕರನ್ನು ಬೆರಗುಗೊಳಿಸಿದ್ದರು. ಭಾರತವು ಫೈನಲ್ ಅನ್ನು 8-1 ಅಂತರದಿಂದ ಗೆದ್ದಿತ್ತು.

1936 ರ ಬರ್ಲಿನ್ ಒಲಿಂಪಿಕ್ಸ್ ಸಮಯದಲ್ಲಿ, ಅಡಾಲ್ಫ್ ಹಿಲ್ಟರ್ ಧ್ಯಾನ್ ಚಂದ್ ಅವರ ಹಾಕಿ ಕೌಶಲ್ಯದಿಂದ ಆಕರ್ಷಿತರಾದರು, ಅವರು ಅವರಿಗೆ ಜರ್ಮನ್ ಪೌರತ್ವ ಮತ್ತು ಮಿಲಿಟರಿ ಶ್ರೇಣಿಯನ್ನು ಸಹ ನೀಡಲು ಮುಂದಾದರು, ಆದರೆ ಹಾಕಿ ಆಟಗಾರ ಅದನ್ನು ಗೌರವಯುತವಾಗಿ ನಿರಾಕರಿಸಿದ್ದರು.

ನೆದರ್ಲ್ಯಾಂಡ್ಸ್ ಪ್ರವಾಸದ ಸಮಯದಲ್ಲಿ, ಧ್ಯಾನ್ ಚಂದ್ ಮ್ಯಾಗ್ನೆಟ್ ಬಳಸಿ ಆಡುತ್ತಾರಾ ಎಂದು ಪರಿಶೀಲಿಸಲು ಅಧಿಕಾರಿಗಳು ಅವರ ಹಾಕಿ ಸ್ಟಿಕ್‌ ಮುರಿದು ಪರೀಕ್ಷಿಸಿದ್ದರು. ಅಷ್ಟರ ಮಟ್ಟಿಗೆ ಅವರ ಆಟ ಜನಪ್ರಿಯವಾಗಿತ್ತು.

ಭಾರತ ಪರ 185 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 500 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಚಂದ್, 1928 (ಆಮ್ಸ್ಟರ್‌ಡ್ಯಾಮ್), 1932 (ಲಾಸ್ ಏಂಜಲೀಸ್) ಮತ್ತು (ಬರ್ಲಿನ್) ನಲ್ಲಿ ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ಗೆದ್ದ ತಂಡದ ಭಾಗವಾಗಿದ್ದರು.

ಕ್ರೀಡೆಯಲ್ಲಿ ಭಾರತವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದರೂ, ಮೇಜರ್ ಧ್ಯಾನ್ ಚಂದ್ ತಮ್ಮ ಜೀವನದ ಬಹುಪಾಲು ಕಾಲ ಆರ್ಥಿಕ ತೊಂದರೆ ಅನುಭವಿಸುತ್ತಿದ್ದರು. ಮತ್ತು ಆಸ್ಪತ್ರೆಯಲ್ಲಿ ಆರೈಕೆ ಪಡೆಯಲು ಕೂಡ ಪರದಾಟ ನಡೆಸಿ ಬಹಳ ಕಡಿಮೆ ಮನ್ನಣೆಯೊಂದಿಗೆ ಸಾಮಾನ್ಯ ಪ್ರಜೆಯಾಗಿ ನಿಧನರಾದರು.

ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಕಣಕ್ಕೆ!