ಏಕದಿನದಲ್ಲಿ ಗರಿಷ್ಠ ಚೇಸಿಂಗ್ ದಾಖಲೆ ಬರೆದ ನೆದರ್ಲೆಂಡ್
Scotland vs Netherlands: ಆಸೀಸ್ ವಿರುದ್ಧ 2006ರಲ್ಲಿ 435 ಮತ್ತು 2016ರಲ್ಲಿ 372 ರನ್ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟಿರುವುದು ಏಕದಿನದಲ್ಲಿ ಮೊದಲೆರಡು ಚೇಸಿಂಗ್ ದಾಖಲೆಗಳಾಗಿವೆ. ಮೂರನೇ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ನೆದರ್ಲೆಂಡ್ ಹೆಸರಿನಲ್ಲಿ ದಾಖಲಾಯಿತು.


ಡುಂಡೀ: ನೆದರ್ಲೆಂಡ್ ತಂಡ ಸ್ಕಾಟ್ಲೆಂಡ್(Scotland vs Netherlands) ವಿರುದ್ಧದ ಏಕದಿನ ಪಂದ್ಯದಲ್ಲಿ 370 ರನ್ಗಳ ಸವಾಲನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ 3ನೇ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ಬರೆದಿದೆ. ಏಕದಿನ ವಿಶ್ವಕಪ್ ಅರ್ಹತಾ ಲೀಗ್ 2ರ(Cricket World Cup League 2) ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಡಚ್ಚರು ಈ ಸಾಧನೆ ಮಾಡಿದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ತಂಡ 6 ವಿಕೆಟ್ಗೆ 369 ರನ್ ಪೇರಿಸಿತು. ದಿಟ್ಟ ರೋತಿಯಲ್ಲಿ ಗುರಿ ಬೆನ್ನಟ್ಟಿದ ನೆದರ್ಲೆಂಡ್ ಮ್ಯಾಕ್ಸ್ ಓ ಡೌಡ್ (158*ರನ್, 130 ಎಸೆತ, 13 ಬೌಂಡರಿ, 4 ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ 49.2 ಓವರ್ಗಳಲ್ಲಿ 6 ವಿಕೆಟ್ಗೆ 374 ರನ್ ಸಿಡಿಸಿ ಜಯಿಸಿತು. ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸೆ (191 ರನ್, 150 ಎಸೆತ, 14 ಬೌಂಡರಿ, 11 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ವ್ಯರ್ಥವಾಯಿತು.
ಆಸೀಸ್ ವಿರುದ್ಧ 2006ರಲ್ಲಿ 435 ಮತ್ತು 2016ರಲ್ಲಿ 372 ರನ್ಗಳ ಗುರಿಯನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟಿರುವುದು ಏಕದಿನದಲ್ಲಿ ಮೊದಲೆರಡು ಚೇಸಿಂಗ್ ದಾಖಲೆಗಳಾಗಿವೆ. ಮೂರನೇ ಗರಿಷ್ಠ ಮೊತ್ತದ ಚೇಸಿಂಗ್ ದಾಖಲೆ ನೆದರ್ಲೆಂಡ್ ಹೆಸರಿನಲ್ಲಿ ದಾಖಲಾಯಿತು.
ವಿಶ್ವ ದಾಖಲೆ ಬರೆದ ಆರ್‌ಸಿಬಿ ಮಾಜಿ ಆಟಗಾರ
ನ್ಯೂಜಿಲೆಂಡ್ನ ಫಿನ್ ಅಲೆನ್ ಅವರು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್(MLC 2025) (ಎಂಎಲ್ಸಿ) ಟಿ20 ಲೀಗ್ನಲ್ಲಿ ಸ್ಯಾನ್ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ತಂಡದ ಪರ ಒಂದೇ ಇನಿಂಗ್ಸ್ನಲ್ಲಿ 19 ಸಿಕ್ಸರ್ ಸಿಡಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ. ಫಿನ್ ಅಲೆನ್ ಅವರನ್ನು 2022ರ ಐಪಿಎಲ್ ಮಿನಿ ಹರಾಜಿನಲ್ಲಿ 80 ಲಕ್ಷ ರೂಪಾಯಿ ನೀಡಿ ಆರ್‌ಸಿಬಿ ತಂಡ ಖರೀದಿಸಿತ್ತು. ಆದರೆ ಐಪಿಎಲ್ 2 ಆವೃತ್ತಿಗಳಲ್ಲಿ ಪದಾರ್ಪಣೆಯ ಅವಕಾಶವೇ ದೊರೆಯಲಿಲ್ಲ.
49 ಎಸೆತಗಳಲ್ಲೇ 150 ರನ್ ಪೂರೈಸಿದ ಅಲೆನ್ ಟಿ20ಯಲ್ಲಿ ಅತಿವೇಗದ 150 ರನ್ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಡಿವಾಲ್ಡ್ ಬ್ರೆವಿಸ್ ಹೆಸರಿನಲ್ಲಿತ್ತು. ಬ್ರೆವಿಸ್ 2022ರಲ್ಲಿ 52 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.