64ನೇ ಸುಬ್ರೋತೋ ಕಪ್ ಸಬ್ ಜೂನಿಯರ್ ಟೂರ್ನಿಯಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ ಚಾಂಪಿಯನ್!
ಕಳೆದ ಹಲವು ದಿನಗಳಿಂದ ಬೆಂಗಳೂರಿನ ಯಲಹಂಕದಲ್ಲಿ ನಡೆದಿದ್ದ 64ನೇ ಆವೃತ್ತಿಯ ಸುಬ್ರೋತೋ ಕಪ್ ಫುಟ್‌ಬಾಲ್ ಕಿರಿಯ ಟೂರ್ನಿಯು ಸೆಪ್ಟಂಬರ್ 11 ರಂದು ಅಂತ್ಯವಾಯಿತು. ಗುರುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ವಿದ್ಯಾಚಲ್ ಇಂಟರ್‌ನ್ಯಾಷನಲ್ ಶಾಲೆಯನ್ನು ಮಣಿಸುವ ಮೂಲಕ ಮಿನರ್ವಾ ಪಬ್ಲಿಕ್ ಶಾಲೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

64ನೇ ಸುಬ್ರೋತೋ ಕಪ್ ಸಬ್ ಜೂನಿಯರ್ ಫುಟ್‌ಬಾಲ್ ಟೂರ್ನಿ ಗೆದ್ದ ಮೊಹಾಲಿ ಶಾಲೆ. -

ಬೆಂಗಳೂರು: ಮಹೇಶ್ (4, 50+1) ಹಾಗೂ ಲೆಟ್ಗೌಹಾವ್ ಕಿಪ್ಜನ್ (19, 35) ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಮೊಹಾಲಿಯ ಮಿನರ್ವಾ ಪಬ್ಲಿಕ್ ಶಾಲೆಯು (CISCE) 64ನೇ ಆವೃತ್ತಿಯ ಸುಬ್ರೋತೋ ಕಪ್ ಸಬ್ ಜೂನಿಯರ್ ಪುರುಷರ ಫುಟ್‌ಬಾಲ್ (Subroto Cup Sub Junior) ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಸೆಪ್ಟಂಬರ್ 11 ರಂದು ಗುರುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಬಿಹಾರದ ಮುಝಾಫರ್‌ಪುರದ ವಿದ್ಯಾಚಲ್ ಇಂಟರ್‌ನ್ಯಾಷನಲ್ ಶಾಲೆಯನ್ನು (Vidyachal International School) ಮಣಿಸಿತು. ಈ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿದ ಮಿನರ್ವಾ ಪಬ್ಲಿಕ್ ಶಾಲೆ (Minerva Public School), 6-0 ಅಂತರದಲ್ಲಿ ಏಕಪಕ್ಷೀಯವಾಗಿ ವಿದ್ಯಾಚಲ್ ಇಂಟರ್‌ನ್ಯಾಷನಲ್ ಶಾಲೆಯನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮಿನರ್ವಾ ಪಬ್ಲಿಕ್ ಶಾಲೆಯ ಪರ ಅತ್ಯುತ್ತಮ ಕೌಶಲ ತೋರಿದ ಮಹೇಶ್, 4ನೇ ನಿಮಿಷದಲ್ಲಿಯೇ ತಮ್ಮ ತಂಡಕ್ಕೆ ಖಾತೆ ತೆರೆಯಲು ನೆರವು ನೀಡಿದ್ದರು. ನಂತರ ಲೆಟ್ಗೌಹಾವ್ ಕಿಪ್ಜನ್ ಅವರು 19 ಮತ್ತು 35ನೇ ನಿಮಿಷಗಳಲ್ಲಿ ಸತತ ಎರಡು ಗೋಲು ಗಳಿಸಿ ಮಿನರ್ವಾ ಶಾಲೆಗೆ 3-0 ಮುನ್ನಡೆಯನ್ನು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೆ ಬಿಕ್ಸನ್ ಅವರು ಕೂಡ ಪಾರ್ಟಿಗೆ ಬಂದರು. ಅವರು 37ನೇ ನಿಮಿಷದಲ್ಲಿ ತಮ್ಮ ಮೊದಲನೇ ಗೋಲು ದಾಖಲಿಸಿದರು.
ರೋಚಕ ಕ್ವಾರ್ಟರ್ ಫೈನಲ್ ಪಂದ್ಯ; ಯುವ ಪ್ರತಿಭೆಗಳ ಆಟಕ್ಕೆ ಸಾಕ್ಷಿಯಾದ ಸುಬ್ರೋತೋ ಕಪ್
ನಂತರ ರಿಮೋಸನ್ ಅವರು ಕೂಡ ಕಾಲ್ಚಳಕವನ್ನು ತೋರಿದರು. ಅವರು 42ನೇ ನಿಮಿಷದಲ್ಲಿ ಗೋಲು ಗಳಿಸಿದರ. ಆ ಮೂಲಕ ಮಿನರ್ವಾ ಪಬ್ಲಿಕ್ ಶಾಲೆಯು 5-0 ಮುನ್ನಡೆಯನ್ನು ಪಡೆದಿತ್ತು. ಆದರೆ, ಮಿನಿರ್ವಾಗೆ ಖಾತೆ ತೆರೆಯಲು ನೆರವು ನೀಡಿದ್ದ ಮಹೇಶ್ ಕೊನೆಯಲ್ಲಿ ತಮ್ಮ ಎರಡನೇ ಗೋಲನ್ನು ದಾಖಲಿಸಿದರು. ಅಂತಿಮವಾಗಿ ಮೊಹಾಲಿಯ ಶಾಲೆ ಏಕ ಪಕ್ಷೀಯವಾಗಿ ಫೈನಲ್ ಪಂದ್ಯವನ್ನು ಗೆದ್ದು ಚಾಂಪಿಯನ್ ಆಯಿತು. ಎದುರಾಳಿ ವಿದ್ಯಾಚಲ್ ಇಂಟರ್‌ನ್ಯಾಷನಲ್ ಶಾಲೆ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು.
ಈ ಟೂರ್ನಿಯಲ್ಲಿ ಚಾಂಪಿಯನ್ ಆದ ಮಿನಿರ್ವಾ ಪಬ್ಲಿಕ್ ಶಾಲೆಯ ತಂಡಕ್ಕೆ 4 ಲಕ್ಷ ರೂ ನಗದು ಬಹುಮಾನ ಹಾಗು ರನ್ನರ್ ಅಪ್ ಆದ ವಿದ್ಯಾಚಲ್ ಇಂಟರ್‌ನ್ಯಾಷನಲ್ ಶಾಲೆ ತಂಡಕ್ಕೆ 2 ಲಕ್ಷ ರೂ. ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ಫೈನಲ್ ಪಂದ್ಯಕ್ಕೆ ಪ್ರಮುಖ ಅತಿಥಿಗಳಾಗಿ ಏರ್ ಮಾರ್ಷಲ್ ತೇಜಿಂದರ್ ಸಿಂಗ್ (AVSM VM, AOC-in-C) ಹಾಗೂ ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಉಪಸ್ಥಿತರಿದ್ದರು.
Subroto Cup (U-15): ಫೈನಲ್‌ಗೇರಿದ ಮಿನರ್ವಾ ಪಬ್ಲಿಕ್ ಸ್ಕೂಲ್-ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!
ವೈಯಕ್ತಿಕ ಪ್ರಶಸ್ತಿ ವಿಜೇತರು
ಉತ್ತಮ ಆಟಗಾರ (40,000): ಲೆಟ್ಗೌಹಾವ್ ಕಿಪ್ಜನ್, CISCE
ಉತ್ತಮ ಕೋಚ್ (25,000): ಕರಣ್ ಕುಮಾರ್, ಬಿಹಾರ
ಉತ್ತಮ ಗೋಲ್‌ಕೀಪರ್ (25,000): ಗುರ್ಜಿತ್ ವೀರ, CISCE
ಫೇರ್ ಪ್ಲೇ ಅವಾರ್ಡ್ (50,000): ನವೋದಯ ವಿದ್ಯಾಲಯ ಸಮಿತಿ (NVS)
ಉತ್ತಮ ಶಾಲೆ (40,000): ವಿದ್ಯಾಚಲ್ ಇಟರ್‌ನ್ಯಾಷನಲ್ ಸ್ಕೂಲ್, ಮುಜಫ್ಫರ್ಪುರ (ಬಿಹಾರ)