ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಾಂಪಿಯನ್ಸ್‌ ಟ್ರೋಫಿಯಿಂದ ಹೊರಬಿದ್ದ ಕಮಿನ್ಸ್‌, ಹ್ಯಾಜಲ್‌ವುಡ್‌

Champions Trophy: ಕಮಿನ್ಸ್‌ ಜತೆಗೆ ಜೋಶ್​ ಹ್ಯಾಜಲ್‌ವುಡ್‌ ಕೂಡ ಗಾಯದಿಂದ ಅಲಭ್ಯರಾಗಿದ್ದಾರೆ. ಬೌಲಿಂಗ್‌ ವಿಭಾಗದ ಎಲ್ಲ ಹೊಣೆ ಮಿಚೆಲ್‌ ಸ್ಟಾರ್ಕ್‌ ಹೆಗಲೇರಿದೆ. ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯಿನಿಸ್‌ ದಿಢೀರ್‌ ನಿವೃತ್ತಿ ಕೂಡ ಆಸೀಸ್‌ಗೆ ದೊಡ್ಡ ಆಘಾತ ತಂದಿದೆ.

Pat Cummins, Josh Hazlewood

ಸಿಡ್ನಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ(Champions Trophy) ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್(Pat Cummins) ಮತ್ತು ವೇಗಿ ಜೋಶ್ ಹ್ಯಾಜಲ್‌ವುಡ್‌(Josh Hazlewood) ಹೊರಗುಳಿದಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಗುರುವಾರ ಪ್ರಕಟಿಸಿದೆ. ಇಬ್ಬರು ಅನುಭವಿ ಬೌಲರ್‌ಗಳ ಸೇವೆ ಕಳೆದುಕೊಂಡದ್ದು ಆಸೀಸ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಕಮಿನ್ಸ್‌ ಅಲಭ್ಯತೆಯಲ್ಲಿ ತಂಡವನ್ನು ಯಾರು ಮುನ್ನಡೆಸಿದ್ದಾರೆ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.

ಭಾರತ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಂತರ ಪಾದದ ನೋವಿಗೆ ಸಿಲುಕಿದ್ದರು. ಶ್ರೀಲಂಕಾ ಪ್ರವಾಸದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದಲೂ ಹೊರಗುಳಿದಿದ್ದರು. ಕಮಿನ್ಸ್‌ ಅಲಭ್ಯತೆ ಬಗ್ಗೆ ಬುಧವಾರವೇ ತಂಡದ ಮುಖ್ಯ ಕೋಚ್​ ಆಂಡ್ರೋ ಮೆಕ್​ಡೊನಾಲ್ಡ್​ ಅನುಮಾನ ವ್ಯಕ್ತಪಡಿಸಿದ್ದರು.

ಕಮಿನ್ಸ್‌ ಜತೆಗೆ ಜೋಶ್​ ಹ್ಯಾಜಲ್‌ವುಡ್‌ ಕೂಡ ಗಾಯದಿಂದ ಅಲಭ್ಯರಾಗಿದ್ದಾರೆ. ಬೌಲಿಂಗ್‌ ವಿಭಾಗದ ಎಲ್ಲ ಹೊಣೆ ಮಿಚೆಲ್‌ ಸ್ಟಾರ್ಕ್‌ ಹೆಗಲೇರಿದೆ. ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯಿನಿಸ್‌ ದಿಢೀರ್‌ ನಿವೃತ್ತಿ ಕೂಡ ಆಸೀಸ್‌ಗೆ ದೊಡ್ಡ ಆಘಾತ ತಂದಿದೆ.



'ದುರದೃಷ್ಟವಶಾತ್ ಕಮಿನ್ಸ್‌, ಹ್ಯಾಜಲ್‌ವುಡ್‌ ಮತ್ತು ಮಿಚೆಲ್‌ ಮಾರ್ಷ್‌ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಆದಷ್ಟು ಬೇಗ ಇವರು ಗಾಯದಿಂದ ಚೇತರಿಸಿಕೊಂಡು ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಮರಳುವಂತಾಗಲಿ' ಎಂದು ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ ಹೇಳಿದರು.

ಇದನ್ನೂ ಓದಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಏಕದಿನ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಸ್ಟೋಯಿನಿಸ್‌

ಆಸ್ಟ್ರೇಲಿಯ ತಂಡ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದೊಂದಿಗೆ ಬಿ ಗುಂಪಿನಲ್ಲಿ ಕಾಣಿಸಿಕೊಂಡಿದೆ. ತನ್ನ ಮೊದಲ ಪಂದ್ಯವನ್ನು ಫೆ.22 ರಂದು ಇಂಗ್ಲೆಂಡ್‌ ವಿರುದ್ಧ ಆಡಲಿದೆ.