ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಸ್ಟೋಯಿನಿಸ್
Marcus Stoinis Retirement: ಸ್ಟೊಯಿನಿಸ್ ಆಸೀಸ್ ಪರ 71 ಏಕದಿನ ಪಂದ್ಯಗಳನ್ನಾಡಿ 26.69 ಸರಾಸರಿಯಲ್ಲಿ 1495 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕ ಒಳಗೊಂಡಿದೆ. ಬೌಲಿಂಗ್‌ನಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. 16ರನ್‌ಗೆ 3 ವಿಕೆಟ್ ಕಿತ್ತದ್ದು ಇವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. 2023ರ ಏಕದಿನ ವಿಶ್ವಕಪ್ ಗೆಲುವಿನ ಆಸ್ಟ್ರೇಲಿಯ ತಂಡದ ಭಾಗವಾಗಿದ್ದರು.
ಸಿಡ್ನಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್(Marcus Stoinis Retirement) ಗುರುವಾರ(ಫೆ.6 ರಂದು) ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. 35ರ ಹರೆಯದ ಸ್ಟೋಯಿಸ್ ಟಿ20 ಕ್ರಿಕೆಟ್‌ನತ್ತ ಗಮನ ಹರಿಸುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವೈಟ್-ಬಾಲ್ ಮಾದರಿಯಲ್ಲಿ ಆಸೀಸ್ ತಂಡದ ಸ್ಟೋಯಿನಿಸ್ ನಿಯಮಿತವಾಗಿ ಕಾಣಿಸಿಕೊಂಡಿದ್ದರು. ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಿದ್ದ 15 ಸದ್ಯಸ ಆಸೀಸ್ ತಂಡದಲ್ಲಿಯೂ ಸ್ಟೋಯಿನಿಸ್ ಸ್ಥಾನ ಪಡೆದಿದ್ದರು. ಅವರ ನಿವೃತ್ತಿ ಅಚ್ಚರಿ ತಂದಿದೆ.
'50 ಓವರ್‌ಗಳ ಸ್ವರೂಪದಲ್ಲಿ ಆಸ್ಟ್ರೇಲಿಯಾಕ್ಕಾಗಿ ಇಷ್ಟು ವರ್ಷ ಆಡಿದ್ದು ನಂಬಲಾಗದ ಪ್ರಯಾಣ. ಪ್ರತಿ ಕ್ಷಣಕ್ಕೂ ನಾನು ಕೃತಜ್ಞನಾಗಿದ್ದೇನೆ. ಉನ್ನತ ಮಟ್ಟದಲ್ಲಿ ನನ್ನ ದೇಶವನ್ನು ಪ್ರತಿನಿಧಿಸುವುದು ನಾನು ಯಾವಾಗಲೂ ಪಾಲಿಸುತ್ತೇನೆ. ಇದು ಸುಲಭದ ನಿರ್ಧಾರವಲ್ಲ, ಆದರೆ ODIಗಳಿಂದ ದೂರವಿರಲು ಮತ್ತು ನನ್ನ ವೃತ್ತಿಜೀವನದ ಮುಂದಿನ ಅಧ್ಯಾಯದ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನದಲ್ಲಿರುವ ಹುಡುಗರನ್ನು ಹುರಿದುಂಬಿಸುತ್ತೇನೆ' ಎಂದು ಸ್ಟೊಯಿನಿಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸೀಸ್‌ಗೆ ಗಾಯದ ಭೀತಿ!
ಸ್ಟೋಯಿನಿಸ್ ದಿಢೀರ್ ನಿವೃತ್ತಿಯಿಂದಾಗಿ ಚಾಂಪಿಯನ್ಸ್ ಟ್ರೋಫಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಬದಲಿ ಆಲ್ರೌಂಡರ್ನನ್ನು ಆಯ್ಕೆ ಮಾಡಬೇಕಿದೆ. ಸ್ಟೊಯಿನಿಸ್ ಸೆಪ್ಟೆಂಬರ್ 2015 ರಲ್ಲಿ ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ದ್ವಿತೀಯ ಪಂದ್ಯವನ್ನಾಡಲು 2 ವರ್ಷಗಳ ಕಾಲ ಕಾಯಬೇಕಾಯಿತು. ಜನವರಿ 2017 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಎರಡನೇ ಪಂದ್ಯವನ್ನು ಆಡಿದ್ದರು.
Marcus Stoinis has announced his retirement - effective immediately - from ODI cricket.
— 7Cricket (@7Cricket) February 6, 2025
He'll shift his focus to more T20 cricket, while Australia will look for a replacement in their Champions Trophy squad. pic.twitter.com/DeVQDtZOMY
ಸ್ಟೊಯಿನಿಸ್ ಆಸೀಸ್ ಪರ 71 ಏಕದಿನ ಪಂದ್ಯಗಳನ್ನಾಡಿ 26.69 ಸರಾಸರಿಯಲ್ಲಿ 1495 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಆರು ಅರ್ಧಶತಕ ಒಳಗೊಂಡಿದೆ. ಬೌಲಿಂಗ್‌ನಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದಾರೆ. 16ರನ್‌ಗೆ 3 ವಿಕೆಟ್ ಕಿತ್ತದ್ದು ಇವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. 2023ರ ಏಕದಿನ ವಿಶ್ವಕಪ್ ಗೆಲುವಿನ ಆಸ್ಟ್ರೇಲಿಯ ತಂಡದ ಭಾಗವಾಗಿದ್ದರು.