ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PKL 12 schedule: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ

PKL Season 12: ಆಗಸ್ಟ್ 29 ರಂದು ವೈಜಾಗ್‌ನಲ್ಲಿ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವು ತಮಿಳು ತಲೈವಾಸ್ ತಂಡವನ್ನು ಎದುರಿಸಲಿದ್ದು, ಬೆಂಗಳೂರು ಬುಲ್ಸ್ ತಂಡವು ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ. ಏಳು ವರ್ಷಗಳ ಬಳಿಕ ಪಿಕೆಎಲ್ ವೈಜಾಗ್‌ಗೆ ಮರಳಲಿದೆ.

12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ

Profile Abhilash BC Jul 31, 2025 4:45 PM

ಮುಂಬೈ: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ನ 12ನೇ(PKL Season 12) ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು(PKL 12 schedule), ಆಗಸ್ಟ್‌ 29ರಿಂದ ಪಂದ್ಯಾವಳಿ ಆರಂಭವಾಗಲಿದ್ದು ಅಕ್ಟೋಬರ್ 23 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಆಯೋಜಕರು ಗುರುವಾರ ತಿಳಿಸಿದ್ದಾರೆ. ಪಂದ್ಯಾವಳಿ ದೇಶಾದ್ಯಂತ ನಾಲ್ಕು ನಗರಗಳಲ್ಲಿ ಆಯೋಜನೆಗೊಳ್ಳಲಿದೆ.

ವೈಜಾಗ್ (ಆಗಸ್ಟ್ 29 ರಿಂದ ಸೆಪ್ಟೆಂಬರ್ 11), ಜೈಪುರ (ಸೆಪ್ಟೆಂಬರ್ 12 ರಿಂದ 28), ಚೆನ್ನೈ (ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 12) ಮತ್ತು ದೆಹಲಿ (ಅಕ್ಟೋಬರ್ 13 ರಿಂದ 23) ಒಟ್ಟು 108 ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲಿವೆ.

ಆಗಸ್ಟ್ 29 ರಂದು ವೈಜಾಗ್‌ನಲ್ಲಿ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವು ತಮಿಳು ತಲೈವಾಸ್ ತಂಡವನ್ನು ಎದುರಿಸಲಿದ್ದು, ಬೆಂಗಳೂರು ಬುಲ್ಸ್ ತಂಡವು ದಿನದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡವನ್ನು ಎದುರಿಸಲಿದೆ. ಏಳು ವರ್ಷಗಳ ಬಳಿಕ ಪಿಕೆಎಲ್ ವೈಜಾಗ್‌ಗೆ ಮರಳಲಿದೆ.



ಹಾಲಿ ಚಾಂಪಿಯನ್‌ ಹರಿಯಾಣ ಸ್ಟೀಲರ್ಸ್ ಆಗಸ್ಟ್ 31 ರಂದು ಬೆಂಗಾಲ್ ವಾರಿಯರ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿ ಬೆಂಗಳೂರಿಗೆ ಪಂದ್ಯಗಳ ಆತಿಥ್ಯ ಸಿಗಲಿಲ್ಲ.

ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಪ್ರೊ ಕಬಡ್ಡಿ ಲೀಗ್ ಸೀಸನ್ 12ರ ಪಂದ್ಯಾವಳಿಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ.

ಇದನ್ನೂ ಓದಿ PKL 2025: ಆಗಸ್ಟ್‌ 29 ರಂದು ಹನ್ನೆರಡನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ಆರಂಭ!