ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PKL 2025: ಆಗಸ್ಟ್‌ 29 ರಂದು ಹನ್ನೆರಡನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ಆರಂಭ!

ಹದಿನೇಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ವೇಳಾಪಟ್ಟಿಯಲ್ಲಿ ಬುಧವಾರ (ಜುಲೈ 9) ಪ್ರಕಟಿಸಲಾಗಿದೆ. 2025ರ ಟೂರ್ನಿಯು ಆಗಸ್ಟ್‌ 29 ರಂದು ಶುಕ್ರವಾರ ಆರಂಭವಾಗಲಿದೆ. ಈ ಬಾರಿ ಪ್ರಶಸ್ತಿಗಾಗಿ ಒಟ್ಟು 12 ತಂಡಗಳು ಕಾದಾಟ ನಡೆಸಲಿವೆ. ಹಾಲಿ ಚಾಂಪಿಯನ್‌ ಹರಿಯಾಣ ಸ್ಟೀಲರ್ಸ್‌ ಈ ಬಾರಿಯೂ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

ಆಗಸ್ಟ್‌ 29 ರಂದು ಹನ್ನೆರಡನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ಆರಂಭ!

2025ರ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ವೇಳಾಪಟ್ಟಿ ಪ್ರಕಟ.

Profile Ramesh Kote Jul 9, 2025 7:22 PM

ನವದೆಹಲಿ: ಬಹುನಿರೀಕ್ಷಿತ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ (PKL 2025) ವೇಳಾಪಟ್ಟಿ ಜುಲೈ 9 ರಂದು ಬುಧವಾರ ಪ್ರಕಟವಾಗಿದೆ. ಆಗಸ್ಟ್‌ 29 ರಂದು ಶುಕ್ರವಾರ ಈ ಟೂರ್ನಿಯು ಆರಂಭವಾಗಲಿದೆ. ಪ್ರಶಸ್ತಿಗಾಗಿ ಒಟ್ಟು 12 ತಂಡಗಳು ಈ ಟೂರ್ನಿಯಲ್ಲಿ ಕಾದಾಟ ನಡೆಸಲಿವೆ. ಹಾಲಿ ಚಾಂಪಿಯನ್‌ ಹರಿಯಾಣ ತಂಡ (Haryana) ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಟೂರ್ನಿಯಲ್ಲಿ ಪಂದ್ಯಗಳ ದಿನಾಂಕ ಹಾಗೂ ಸ್ಥಳಗಳು ಸೇರಿದಂತೆ ಸಂಪೂರ್ಣ ವೇಳಾಪಟ್ಟಿಯನ್ನು ಅತಿ ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ. ಪ್ರೊ ಕಬಡ್ಡಿಯ ಬ್ಯುಸಿನೆಸ್‌ ಹೆಡ್‌ ಅನುಪಮ್‌ ಗೋಸ್ವಾಮಿ (Anupam Goswami) ತಿಳಿಸಿದ್ದಾರೆ.

ಈ ಟೂರ್ನಿಯ ನಿಮಿತ್ತ ಈಗಾಗಲೇ ಮೆಗಾ ಹರಾಜಿ ಮುಗಿದಿದ್ದು, ಆಟಗಾರರು ದುಬಾರಿ ಮೊತ್ತವನ್ನು ಪಡೆಯುವ ಮೂಲಕ ಆಯಾ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ.ಇದನ್ನು ಗಮನಿಸಿದರೆ, ಈ ಬಾರಿ ಟೂರ್ನಿಯು ಇನ್ನಷ್ಟು ರೋಚಕತೆಯಿಂದ ಕೂಡಿರಲಿದೆ ಎಂದು ಹೇಳಬಹುದು.

"ಪಿಕೆಎಲ್ ಸೀಸನ್ 12ರ ಆರಂಭದ ದಿನಾಂಕವನ್ನು ಅನಾವರಣಗೊಳಿಸಲು ನಾವು ರೋಮಾಂಚನಗೊಂಡಿದ್ದೇವೆ. 10 ಆಟಗಾರರು ಒಂದು ಕೋಟಿ ರು ಗಡಿಯನ್ನು ದಾಟಿ ದಾಖಲೆಯನ್ನು ಬರೆದಿದ್ದಾರೆ. ಈ ಹರಾಜಿನ ನಂತರ ನಮ್ಮ ಅತ್ಯಂತ ಸ್ಪರ್ಧಾತ್ಮಕ ಋತುವಿಗೆ ನಾವು ಅಡಿಪಾಯ ಹಾಕಿದ್ದೇವೆ. ಅಭಿಮಾನಿಗಳಿಗೆ ಕಬಡ್ಡಿ ಕ್ರಿಯೆಯ ಮತ್ತೊಂದು ರೋಮಾಂಚಕ ಅಧ್ಯಾಯವನ್ನು ತರಲು ನಾವು ಎದುರು ನೋಡುತ್ತಿದ್ದೇವೆ," ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದ ಕೆವಿನ್‌ ಪೀಟರ್ಸನ್‌!

2025ರ ಪಿಕೆಎಲ್‌ ಟೂರ್ನಿಯ ತಂಡಗಳ ವಿವರ

ಯುಪಿ ಯೋಧಾಸ್: ಮಹೇಂದರ್ ಸಿಂಗ್, ಮೊಹಮ್ಮದ್ರೇಜಾ ಕಬೌದ್ರಹಂಗಿ, ಡಾಂಗ್ ಜಿಯೋನ್ ಲೀ, ಸುಮಿತ್, ಭವಾನಿ ರಜಪೂತ್, ಸಾಹುಲ್ ಕುಮಾರ್, ಸುರೇಂದರ್ ಗಿಲ್, ಅಶು ಸಿಂಗ್, ಹಿತೇಶ್, ಗಗನ ಗೌಡ ಎಚ್‌ಆರ್, ಶಿವಂ ಚೌಧರಿ, ಜಯೇಶ್ ವಿಕಾಸ್ ಮಹಾಜನ್, ಗಂಗಾರಾಮ್, ಸಚಿನ್, ಕೇಶವ್ ಕುಮಾರ್, ರೋಣಕ್, ಪ್ರಣಯ್ ವಿನಯ್ ರಾಣೆ

ಯು ಮುಂಬಾ: ರಿಂಕು ಶರ್ಮಾ, ಮೊಹಮ್ಮದ್ ಘೋರ್ಬಾನಿ, ಪರ್ವೇಶ್ ಭೈನ್ಸ್ವಾಲ್, ರವಿ, ಅಭಿಮನ್ಯು ರಘುವಂಶಿ, ಸಂದೀಪ್ ಕುಮಾರ್, ಅನಿಲ್ ಮೋಹನ್, ಸುನೀಲ್ ಕುಮಾರ್, ರೋಹಿತ್, ಆಮಿರ್‌ ಮೊಹಮ್ಮದ್ ಜಫರ್ದಾನೇಶ್, ಸತೀಶ್ ಕಣ್ಣನ್; ಮುಕಿಲನ್ ಷಣ್ಮುಗಂ; ಅಜಿತ್ ಚೌಹಾಣ್, ದೀಪಕ್ ಕುಂದು, ಲೋಕೇಶ್ ಘೋಸ್ಲಿಯಾ, ಸನ್ನಿ, ಅಮರ್ಜೀತ್

ತೆಲುಗು ಟೈಟನ್ಸ್: ಭರತ್, ವಿಜಯ್ ಮಲಿಕ್, ಶುಭಂ ಶಿಂಧೆ, ಅಮೀರ್ಹೊಸೇನ್ ಎಜ್ಲಾಲಿ, ಗಣೇಶ್ ಪಾರ್ಕಿ, ಆಶಿಶ್ ನರ್ವಾಲ್, ಜೈ ಭಗವಾನ್, ಮಂಜೀತ್, ರಾಹುಲ್ ದಾಗರ್, ಶಂಕರ್ ಭೀಮರಾಜ್ ಗಡಾಯಿ, ಅಜಿತ್ ಪಾಂಡುರಂಗ ಪವಾರ್, ಅಂಕಿತ್, ಪ್ರಫುಲ್ ಸುದಮ್ ಜವಾರೆ, ಸಾಗರ್, ಚೇತನ್ ಸಾಹು, ನಿತಿನ್, ರೋಹಿತ್, ಅಮನ್



ತಮಿಳು ತಲೈವಾಸ್: ಪವನ್ ಸೆಹ್ರಾವತ್, ಅರ್ಜುನ್ ದೇಶ್ವಾಲ್, ಅಲಿರೇಜಾ ಖಲೀಲಿ, ಮೊಯಿನ್ ಶಫಾಘಿ, ಹಿಮಾಂಶು, ಸಾಗರ್, ನಿತೇಶ್ ಕುಮಾರ್, ನರೇಂದರ್, ರೋನಕ್, ವಿಶಾಲ್ ಚಹಾಲ್, ಆಶಿಶ್, ಅನುಜ್ ಕಲುರಾಮ್ ಗವಡೆ, ಧೀರಜ್ ರವೀಂದ್ರ ಬೈಲ್ಮಾರೆ, ಮೋಹಿತ್, ಸುರೇಶ್ ಜಾಧವ್

ಪುಣೇರಿ ಪಲ್ಟನ್: ಸಚಿನ್ ತನ್ವಾರ್, ಮಿಲಾದ್ ಮೊಹಜರ್, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ಗುರುದೀಪ್, ಮೋದ್. ಅಮಾನ್, ಸ್ಟುವರ್ಟ್ ಸಿಂಗ್, ಅಭಿನೇಶ್ ನಾಡರಾಜನ್, ಗೌರವ್ ಖಾತ್ರಿ, ಪಂಕಜ್ ಮೋಹಿತೆ, ಅಸ್ಲಂ ಮುಸ್ತಫಾ ಇನಾಮದಾರ್, ಮೋಹಿತ್ ಗೋಯತ್, ದಾದಾಸೊ ಶಿವಾಜಿ ಪೂಜಾರಿ, ಆದಿತ್ಯ ತುಷಾರ್ ಶಿಂಧೆ, ವಿಶಾಲ್ ಭಾರದ್ವಾಜ್, ರೋಹನ್ ತುಪಾರೆ

ಪಾಟ್ನಾ ಪೈರೇಟ್ಸ್: ದೀಪಕ್ ಸಿಂಗ್, ಅಂಕಿತ್ ಜಗ್ಲಾನ್, ಸಂಕೇತ್ ಸಾವಂತ್, ಮಣಿಂದರ್ ಸಿಂಗ್, ಅಮೀನ್ ಘೋರ್ಬಾನಿ, ಮಂದೀಪ್, ಹಮೀದ್ ಮಿರ್ಜಾಯಿ ನಾಡರ್, ತ್ಯಾಗರಾಜನ್ ಯುವರಾಜ್, ಸುಧಾಕರ್ ಎಂ, ಅಯನ್, ನವದೀಪ್, ದೀಪಕ್, ಸಾಹಿಲ್ ಪಾಟೀಲ್, ಸೋಂಬಿರ್, ಬಾಳಾಸಾಹೇಬ್ ಶಹಾಜಿ ಜಾಧವ್

ಜೈಪುರ ಪಿಂಕ್ ಪ್ಯಾಂಥರ್ಸ್: ನಿತಿನ್ ಕುಮಾರ್, ಮಂಜೀತ್ ದಹಿಯಾ, ಅಲಿ ಸಮಾದಿ ಚೌಬ್ತರಶ್, ನಿತಿನ್ ರಾವಲ್, ಆಶಿಶ್, ಉದಯ್ ಪಾರ್ಟೆ, ರೆಜಾ ಮಿರ್ಬಘೇರಿ, ಅಭಿಷೇಕ್ ಕೆಎಸ್, ರೋನಕ್ ಸಿಂಗ್, ನಿತಿನ್ ಕುಮಾರ್, ಸೋಂಬಿರ್, ರಿತಿಕ್ ಶರ್ಮಾ, ಮೋಹಿತ್, ವಿನಯ್, ಮೀಟೂ

ಹರಿಯಾಣ ಸ್ಟೀಲರ್ಸ್: ನವೀನ್ ಕುಮಾರ್, ಶಹನ್ ಶಾ ಮೊಹಮ್ಮದ್, ಘನಶ್ಯಾಮ್ ರೋಕಾ ಮಗರ್, ಆಶಿಶ್, ಹರ್ದೀಪ್, ರಿತಿಕ್, ಜುಬೇರ್, ರಾಹುಲ್ ಸೇಠಪಾಲ್, ವಿನಯ್, ಶಿವಂ ಅನಿಲ್ ಪತಾರೆ, ಜೈದೀಪ್, ಜಯ ಸೂರ್ಯ ಎನ್.ಎಸ್, ವಿಶಾಲ್ ಎಸ್. ಟೇಟ್, ಸಾಹಿಲ್, ಮಣಿಕಂದನ್ ಎನ್, ವಿಕಾಸ್ ರಾಮದಾಸ್ ಜಾಧವ್, ಮಯಾಂಕ್ ಸೈನಿ, ಸಚಿನ್



ಗುಜರಾತ್‌ ಜಯಂಟ್ಸ್‌: ಎಂ.ಶಾಡ್ಲೌಯಿ, ಮಿಲಾದ್ ಜಬ್ಬಾರಿ, ನಿತಿನ್ ಪನ್ವಾರ್, ರೋಹಿತ್ ಕುಮಾರ್, ಲಕ್ಕಿ ಶರ್ಮಾ, ಶುಭಂ, ಹಿಮಾಂಶು ಯಾದವ್, ಅಮಿತ್, ಸುಮಿತ್, ಕೆ.ಹರೀಶ್, ಹಿಮಾಂಶು ಸಿಂಗ್, ಹಿಮಾಂಶು; ಪಾರ್ತೀಕ್ ದಹಿಯಾ, ರಾಕೇಶ್, ವಿಶ್ವಂತ್ ವಿ, ಅಜಿತ್ ವಿ ಕುಮಾರ್, ಅಂಕಿತ್

ದಬಾಂಗ್ ಡೆಲ್ಲಿ ಕೆಸಿ: ಫಝೆಲ್ ಅತ್ರಾಚಲಿ, ಅಶು ಮಲಿಕ್, ಅಮೀರ್ ಹೊಸೈನ್ ಬಸ್ತಾಮಿ, ಮೋಹಿತ್, ಸುರ್ಜೀತ್ ಸಿಂಗ್, ನವೀನ್, ಆಶಿಶ್ ಕುಮಾರ್ ಸಂಗ್ವಾನ್, ಸೌರಭ್ ನಂದಲ್, ಗೌರವ್ ಛಿಲ್ಲರ್, ಅಕ್ಷಿತ್, ನೀರಜ್ ನರ್ವಾಲ್, ಸಂದೀಪ್, ಮೋಹಿತ್, ಅನಿಲ್ ಗುರ್ಜಾರ್, ಅರ್ಕಮ್ ಶೇಖ್, ವಿಜಯ್, ಅಜಿಂಕ್ಯ ಅಶೋಕ್, ಅಜಿಂಕ್ಯ ಅಶೋಕ್



ಬೆಂಗಳೂರು ಬುಲ್ಸ್: ಅಂಕುಶ್, ಯೋಗೇಶ್ ಬಿಜೇಂದರ್ ದಹಿಯಾ, ಸಂಜಯ್, ಅಹ್ಮದ್ರೇಜಾ ಅಸ್ಗರಿ, ಅಲಿರೇಜಾ ಮಿರ್ಜೈಯಾನ್, ಧೀರಜ್, ಮನೀಶ್, ಆಕಾಶ್ ಸಂತೋಷ್ ಶಿಂಧೆ, ಸಚಿನ್, ಚಂದ್ರನಾಯಕ್ ಎಂ, ಲಕ್ಕಿ ಕುಮಾರ್, ಮಂಜೀತ್, ಪಂಕಜ್, ಸಾಹಿಲ್ ಸುಹಾಸ್ ರಾಣೆ, ಶುಭಂ ರಹಾತೆ, ಶುಭಂ ರಹಾತೆ, ಶುಭಮತ್ ಬಿತಾಕೆ

ಬೆಂಗಾಲ್ ವಾರಿಯರ್ಸ್‌: ದೇವಾಂಕ್ ದಲಾಲ್, ನಿತೇಶ್ ಕುಮಾರ್, ಜಂಗ್ ಕುನ್ ಲೀ, ಒಮಿದ್ ಖೋಜಸ್ತೇ ಮೊಹಮ್ಮದ್‌ಶಾ, ಆಶಿಶ್, ಪಾರ್ತೀಕ್, ಮತ್ಯು ಕದಮ್, ಹಿಮಾಂಶು, ಸಂದೀಪ್, ಅಂಕಿತ್, ಹರಂದರ್, ವಿಶ್ವಾಸ್ ಎಸ್, ಯಶ್ ಮಲಿಕ್, ಮಂಜೀತ್, ದೀಪ್ ಕುಮಾರ್, ಸುಶೀಲ್ ಕಾಂಬ್ರೇಕರ್, ಮನ್‌ದೀಪ್, ಮೂಲ್ಚಂದ್ರ, ಸಿಂಗ್