ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ರೋಹಿತ್ ಶರ್ಮ(Rohit Sharma) ಅವರು ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 1000 ಏಕದಿನ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೈಲುಗಲ್ಲು ತಲುಪಲು ರೋಹಿತ್‌ಗೆ 2 ರನ್ ಬೇಕಿತ್ತು.
ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಆಟಗಾರ ವಿವ್ ರಿಚರ್ಡ್ಸ್ ಹೆಸರಿನಲ್ಲಿದೆ. ಅವರು 40 ಏಕದಿನ ಪಂದ್ಯಗಳಿಂದ 1905 ರನ್ ಗಳಿಸಿದ್ದಾರೆ. ರೋಹಿತ್, ಆಸ್ಟ್ರೇಲಿಯಾ ವಿರುದ್ಧ ಇಲ್ಲಿಯವರೆಗೆ ಆಡಿರುವ 21 ಏಕದಿನ ಪಂದ್ಯಗಳಲ್ಲಿ ರೋಹಿತ್ ಸಾವಿರ ಪ್ಲಸ್ ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿವೆ.
ಆಸೀಸ್ ನೆಲದಲ್ಲಿ ಸಾವಿರ ಪ್ಲಸ್ ರನ್ ಗಳಿಸಿದವರು
ವಿವ್ ರಿಚರ್ಡ್ಸ್- 1905
ಡೆಸ್ಮಂಡ್ ಹೇನ್ಸ್-1565
ಕುಮಾರ ಸಂಗಕ್ಕಾರ- 1171
ಮಹೇಲಾ ಜಯವರ್ಧನೆ-1013
ರೋಹಿತ್ ಶರ್ಮ 1000*
ಇದನ್ನೂ ಓದಿ IND vs AUS 2nd ODI: ಮತ್ತೆ ಟಾಸ್ ಸೋತ ಭಾರತ; ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ
ಸೆಹವಾಗ್ ದಾಖಲೆ ಮೇಲೆ ಕಣ್ಣು
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಎಲ್ಲಾ ಮಾದರಿಗಳಲ್ಲಿ 15,758 ರನ್ ಗಳಿಸಿ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿಯ ನಂತರ ರೋಹಿತ್ 15,584 ರನ್ ಗಳಿಸಿದ್ದಾರೆ. ಸೆಹ್ವಾಗ್ ಅವರನ್ನು ಹಿಂದಿಕ್ಕಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಫಲಪ್ರದ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ಆಗಲು ಅವರಿಗೆ ಇನ್ನೂ 160 ರನ್‌ಗಳ ಅಗತ್ಯವಿದೆ.