ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS 2nd ODI: ಮತ್ತೆ ಟಾಸ್‌ ಸೋತ ಭಾರತ; ಬೌಲಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ

ಆರಂಭಿಕ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ತೀರಾ ಕಳಪೆ ಪ್ರದರ್ಶನ ನೀಡಿದ್ದರು. ಪ್ರಮುಖವಾಗಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮಿಂಚಲು ವಿಫಲರಾಗಿದ್ದರು. ಅವರಿಬ್ಬರಿಂದ ದೊಡ್ಡ ಮೊತ್ತ ದಾಖಲಾಗಿರಲಿಲ್ಲ. ಆದರೆ 2ನೇ ಪಂದ್ಯದಲ್ಲಿ ಇವರು ದೊಡ್ಡ ಮೊತ್ತ ಪೇರಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಟಾಸ್‌ ಸೋತ ಭಾರತ; ಕುಲ್‌ದೀಪ್‌ಗೆ ಸಿಗದ ಅವಕಾಶ

-

Abhilash BC Abhilash BC Oct 23, 2025 8:40 AM

ಅಡಿಲೇಡ್‌: ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ ದ್ವಿತೀಯ ಪಂದ್ಯದಲ್ಲಿ(IND vs AUS 2nd ODI) ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದಿದೆ. ಸರಣಿ ಸಮಬಲಗೊಳಿಸಲು ಶುಭಮನ್‌ ಗಿಲ್‌(Shubman Gill) ಪಡೆಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಮತ್ತೊಂದೆಡೆ ಆಸ್ಟ್ರೇಲಿಯಾ ತುಂಬು ಆತ್ಮವಿಶ್ವಾಸದಲ್ಲಿದ್ದು, ಸತತ 2ನೇ ಗೆಲುವಿನೊಂದಿಗೆ ಸರಣಿ ಕೈವಶಪಡಿಸಿಕೊಳ್ಳಲು ಕಾತರಿಸುತ್ತಿದೆ.

ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಆದರೆ ಆಸ್ಟ್ರೇಲಿಯಾ ಎರಡು ಬದಲಾವಣೆ ಮಾಡಿತು. ನಥಾನ್‌ ಎಲ್ಲಿಸ್‌ ಮತ್ತು ಫಿಲಿಪ್‌ ಅವರನ್ನು ಕೈಬಟ್ಟು ಆಡಮ್ ಜಂಪಾ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ತಂಡಕ್ಕೆ ಸೇರಿಸಿಕೊಂಡಿತು. ಭಾರತ ಅಡಿಲೇಡ್‌ನಲ್ಲಿ ಈವರೆಗೂ 15 ಏಕದಿನ ಪಂದ್ಯಗಳನ್ನಾಡಿದ್ದು, 9ರಲ್ಲಿ ಗೆದ್ದು, 5ರಲ್ಲಿ ಸೋತಿದೆ. ಒಂದು ಟೈ ಆಗಿದೆ.

ಆರಂಭಿಕ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ತೀರಾ ಕಳಪೆ ಪ್ರದರ್ಶನ ನೀಡಿದ್ದರು. ಪ್ರಮುಖವಾಗಿ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮಿಂಚಲು ವಿಫಲರಾಗಿದ್ದರು. ಅವರಿಬ್ಬರಿಂದ ದೊಡ್ಡ ಮೊತ್ತ ದಾಖಲಾಗಿರಲಿಲ್ಲ. ಆದರೆ 2ನೇ ಪಂದ್ಯದಲ್ಲಿ ಇವರು ದೊಡ್ಡ ಮೊತ್ತ ಪೇರಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ Asia Cup 2025: ಭಾರತ ತಂಡಕ್ಕೆ ಏಷ್ಯಾ ಕಪ್‌ ಟ್ರೋಫಿ ನೀಡಲು ತಿರಸ್ಕರಿಸಿದ ಮೊಹ್ಸಿನ್‌ ನಖ್ವಿ!

ಉಭಯ ಆಡುವ ಬಳಗ

ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿ.ಕೀ.), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್(ನಾಯಕ), ಟ್ರಾವಿಸ್ ಹೆಡ್, ಮ್ಯಾಥ್ಯೂ ಶಾರ್ಟ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ(ವಿ.ಕೀ.), ಕೂಪರ್ ಕಾನೊಲಿ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಮಿಚೆಲ್ ಸ್ಟಾರ್ಕ್, ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್.

ಮುಖಾಮುಖಿ: 153

ಭಾರತ: 58

ಆಸೀಸ್‌: 85

ಫಲಿತಾಂಶವಿಲ್ಲ: 10