ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sheetal Devi: ಭಾರತದ ಸಮರ್ಥ ಜೂನಿಯರ್ ಬಿಲ್ಲುಗಾರಿಕೆ ತಂಡಕ್ಕೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ ಶೀತಲ್ ದೇವಿ

18 ವರ್ಷದ ಶೀತಲ್, ಜಮ್ಮು ಮತ್ತು ಕಾಶ್ಮೀರದವರು. ಅವರು ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2024 ರಲ್ಲಿ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಶ್ರ ತಂಡ ಕಾಂಪೌಂಡ್ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕವನ್ನು ಗೆದ್ದರು. ಈ ವರ್ಷದ ಆರಂಭದಲ್ಲಿ, ಅವರು ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳಾ ತೋಳಿಲ್ಲದ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ ಶೀತಲ್ ದೇವಿ

ನವದೆಹಲಿ: ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌, ಭಾರತದ ಶೀತಲ್ ದೇವಿ(Sheetal Devi) ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಗಮನಾರ್ಹ ಹೆಜ್ಜೆ ಇಟ್ಟಿದ್ದಾರೆ. ಜೆಡ್ಡಾದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಂತ 3 ಕ್ಕೆ ಭಾರತೀಯ ಸಮರ್ಥ ಜೂನಿಯರ್ ತಂಡಕ್ಕೆ ಆಯ್ಕೆಯಾದರು. ಪ್ಯಾರಾ ಅಥ್ಲೀಟ್ ಒಬ್ಬರು ಸಮರ್ಥ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು ಇದೇ ಮೊದಲ ಬಾರಿ. ಅವರ ಆಯ್ಕೆ ಭಾರತೀಯ ಕ್ರೀಡೆಗೆ ಐತಿಹಾಸಿಕ ಕ್ಷಣವಾಗಿದೆ. ಕೈಗಳಿಲ್ಲದ ಸ್ಥಿತಿಯಲ್ಲಿಯೂ ಅವರ ಪ್ರದರ್ಶನ ಮತ್ತು ಸಾಧನೆ ನೋಡುವಾಗ ಆಕೆ ಆರ್ಚರಿ ಇತಿಹಾಸ ಕಂಡ ಅಸಾಮಾನ್ಯ ಬಿಲ್ಲುಗಾರ್ತಿಯರಲ್ಲಿ ಒಬ್ಬರು.

ಸಮರ್ಥ ಜೂನಿಯರ್ ತಂಡಕ್ಕೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿರವ ಶೀತಲ್, "ನಾನು ಸ್ಪರ್ಧಿಸಲು ಪ್ರಾರಂಭಿಸಿದಾಗ, ನನಗೆ ಒಂದು ಸಣ್ಣ ಕನಸು ಇತ್ತು. ಒಂದು ದಿನ ಸಮರ್ಥರ ಜೊತೆಗೆ ಸ್ಪರ್ಧಿಸಬೇಕೆಂದು, ನಾನು ಮೊದಲಿಗೆ ಅದನ್ನು ಸಾಧಿಸಲಿಲ್ಲ, ಆದರೆ ನಾನು ಪ್ರತಿ ಹಿನ್ನಡೆಯಿಂದ ಕಲಿಯುತ್ತಾ ಮುಂದುವರಿಯುತ್ತಿದ್ದೆ. ಇಂದು, ಆ ಕನಸಿಗೆ ಒಂದು ಹೆಜ್ಜೆ ಹತ್ತಿರವಾಗಿದೆ" ಎಂದರು.

ಅವರು ತಂಡಕ್ಕೆ ಆಯ್ಕೆಯಾದದ್ದು ವಿಶೇಷ ಪರಿಗಣನೆಯ ಮೂಲಕವಲ್ಲ, ಬದಲಾಗಿ ಅವರ ಪ್ರದರ್ಶನದ ಮೂಲಕ. ಸೋನಿಪತ್‌ನಲ್ಲಿ ನಡೆದ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ, 60 ಕ್ಕೂ ಹೆಚ್ಚು ಸಾಮರ್ಥ್ಯವುಳ್ಳ ಬಿಲ್ಲುಗಾರರ ಜತೆ ಸ್ಪರ್ಧಿಸಿ ಒಟ್ಟಾರೆಯಾಗಿ ಮೂರನೇ ಸ್ಥಾನ ಪಡೆದರು. ಅರ್ಹತಾ ಸುತ್ತುಗಳಲ್ಲಿ ಅವರು 703 ಅಂಕಗಳನ್ನು ಗಳಿಸಿದರು, ಮೊದಲ ಸುತ್ತಿನಲ್ಲಿ 352 ಅಂಕಗಳು ಮತ್ತು ಎರಡನೇ ಸುತ್ತಿನಲ್ಲಿ 351 ಅಂಕಗಳನ್ನು ಗಳಿಸಿದರು. ತೇಜಲ್ 15.75 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು ಮತ್ತು ವೈದೇಹಿ ಜಾಧವ್ 15 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು.

18 ವರ್ಷದ ಶೀತಲ್, ಜಮ್ಮು ಮತ್ತು ಕಾಶ್ಮೀರದವರು. ಅವರು ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2024 ರಲ್ಲಿ, ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಶ್ರ ತಂಡ ಕಾಂಪೌಂಡ್ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕವನ್ನು ಗೆದ್ದರು. ಈ ವರ್ಷದ ಆರಂಭದಲ್ಲಿ, ಅವರು ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳಾ ತೋಳಿಲ್ಲದ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶೀತಲ್‌, ಭಾರತೀಯ ಸೇನೆ ಪೋಷಿಸಿರುವ ಪ್ರತಿಭೆ. ಇದರ ಜೊತೆಗೆ, ಗಿರ್ದಿ ಅವರ ಟರ್ಕಿಗೂ ಪಾಕಿಸ್ತಾನಕ್ಕೂ ಇನ್ನಿಲ್ಲದ ನಂಟು. ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಭಾರತದ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ಬಳಸಿತ್ತು. ದ್ವೇಷ ಸಾಧನೆಗೆ ಇಷ್ಟು ನೆಪ ಸಾಕು. ಆದರೆ, ಆಟದ ಅಂಗಳಕ್ಕೂ ಕ್ರೀಡಾಂಗಣಕ್ಕೂ ಇರುವ ವ್ಯತ್ಯಾಸ ಶೀತಲ್ ಅವರಿಗೆ ತಿಳಿದಂತಿದೆ. ಹೆಸರಿನಲ್ಲಿನ ಶೀತಲತೆ ಅವರ ವ್ಯಕ್ತಿತ್ವ ದಲ್ಲೂ ಇರುವಂತಿದೆ.

ಇದನ್ನೂ ಓದಿ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಶೀತಲ್‌ ದೇವಿ!

ಪ್ಯಾರಾ ಆರ್ಚರಿ ಕ್ಷೇತ್ರದ ಶೃಂಗದಲ್ಲಿ ನಿಂತಿರುವ ಶೀತಲ್‌ ಹುಟ್ಟಿದ್ದು, ಬೆಳೆದದ್ದು ಬಡ ಕುಟುಂಬದಲ್ಲಿ. ಅಮ್ಮ–ಅಪ್ಪ ರೈತ ಕಾರ್ಮಿಕರು. ಬಡತನದ ಜೊತೆಗೆ, ಹುಟ್ಟಿನಿಂದಲೇ ದೈಹಿಕ ಅಸಾಮರ್ಥ್ಯವನ್ನೂ ಶೀತಲ್‌ ಬಳವಳಿಯಾಗಿ ಪಡೆಯಬೇಕಾಯಿತು. ಫೊಕೊಮೆಲಿಯಾ ಎಂಬ ವಿಚಿತ್ರ ಸಮಸ್ಯೆಯಿಂದ ಎರಡೂ ಕೈಗಳು ಅವರಿಗಿಲ್ಲ. ಬಡತನ, ಜನ್ಮದತ್ತ ಅಂಗವೈಕಲ್ಯವನ್ನು ಮೆಟ್ಟಿನಿಂತ ಗಟ್ಟಿಗಿತ್ತಿ.

ತಂಡಗಳು

ರಿಕರ್ವ್: ಪುರುಷರ ತಂಡ: ರಾಂಪಾಲ್ ಚೌಧರಿ (ಎಎಐ), ರೋಹಿತ್ ಕುಮಾರ್ (ಉತ್ತರ ಪ್ರದೇಶ), ಮಯಾಂಕ್ ಕುಮಾರ್ (ಹರಿಯಾಣ)

ಮಹಿಳೆಯರ ತಂಡ: ಕೊಂಡಪಾವುಲುರಿ ಯುಕ್ತ ಶ್ರೀ (ಆಂಧ್ರಪ್ರದೇಶ), ವೈಷ್ಣವಿ ಕುಲಕರ್ಣಿ (ಮಹಾರಾಷ್ಟ್ರ), ಕ್ರತಿಕಾ ಬಿಚಪುರಿಯ (ಮಧ್ಯಪ್ರದೇಶ).

ಕಾಂಪೌಂಡ್‌ ತಂಡ

ಪುರುಷರು: ಪ್ರದ್ಯುಮನ್ ಯಾದವ್, ವಾಸು ಯಾದವ್, ದೇವಾಂಶ್ ಸಿಂಗ್ (ಎಲ್ಲರೂ ರಾಜಸ್ಥಾನ).

ಮಹಿಳೆಯರು: ತೇಜಲ್ ಸಾಳ್ವೆ, ವೈದೇಹಿ ಜಾಧವ್ (ಇಬ್ಬರೂ ಮಹಾರಾಷ್ಟ್ರ), ಶೀತಲ್ ದೇವಿ (ಜಮ್ಮು ಮತ್ತು ಕಾಶ್ಮೀರ).