ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubman Gill: ರೋಹಿತ್ ಅವರಿಂದ ಏಕದಿನ ನಾಯಕತ್ವ ವಹಿಸಿಕೊಳ್ಳಲು ಗಿಲ್ ಸಿದ್ಧ

Mohammad Kaif: ಗಿಲ್‌ ತುಂಬಾ ಶಾಂತ ಸ್ವಭಾವದ ನಾಯಕರಾಗಿದ್ದರು. ಒತ್ತಡದಲ್ಲಿಯೂ ಅವರು ಶಾಂತಚಿತ್ತದಿಂದ ತಂಡವನ್ನು ಮುನ್ನಡೆಸಿದರು. ರೋಹಿತ್ ಶರ್ಮಾ ಎಷ್ಟು ದಿನ ನಾಯಕನಾಗಿ ಮುಂದುವರಿಯುತ್ತಾರೆಂದು ನಮಗೆ ತಿಳಿದಿಲ್ಲವಾದ್ದರಿಂದ ಗಿಲ್‌ಗೆ ಏಕದಿನ ನಾಯಕತ್ವವೂ ಸಿಗುತ್ತದೆ ಎಂದು ಮೊಹಮ್ಮದ್‌ ಕೈಫ್‌ ಅಭಿಪ್ರಾಯಪಟ್ಟಿದಾರೆ.

ರೋಹಿತ್ ಅವರಿಂದ ಏಕದಿನ ನಾಯಕತ್ವ ವಹಿಸಿಕೊಳ್ಳಲು ಗಿಲ್ ಸಿದ್ಧ

Abhilash BC Abhilash BC Aug 6, 2025 11:50 AM

ಮುಂಬಯಿ: ಸ್ಟಾರ್‌ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ(Virat Kohli), ರೋಹಿತ್ ಶರ್ಮಾ(Rohit Sharma), ಆರ್‌.ಅಶ್ವಿನ್‌ರಂತಹ ದಿಗ್ಗಜರ ಅನುಪಸ್ಥಿತಿಯ ಮಧ್ಯೆಯೂ ಬಲಿಷ್ಠ ಇಂಗ್ಲೆಂಡ್‌ ತಂಡದ ವಿರುದ್ಧ ಕೆಚ್ಚೆದೆಯ ಆಟವಾಡುವ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಶುಭಮನ್‌ ಗಿಲ್‌(Shubman Gill) ಸಾರಥ್ಯದ ಯಂಗ್‌ ಇಂಡಿಯಾ ಯಶಸ್ಸು ಕಂಡಿದೆ. ಗಿಲ್ ಭಾರತ ತಂಡದ ಭವಿಷ್ಯದ ನಾಯಕ ಎನ್ನುವುದು ಕೂಡ ಈ ಸರಣಿಯಿಂದ ಸಾಬೀತಾಗಿದೆ. ಇದೀಗ ಅವರು ಏಕದಿನ ತಂಡಕ್ಕೂ ನಾಯಕನಾಗಲಿದ್ದಾರೆ ಎಂದು ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌(Mohammad Kaif) ಅಭಿಪ್ರಾಯಪಟ್ಟಿದಾರೆ.

ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೈಫ್‌, "ಗಿಲ್‌ ತುಂಬಾ ಶಾಂತ ಸ್ವಭಾವದ ನಾಯಕರಾಗಿದ್ದರು. ಒತ್ತಡದಲ್ಲಿಯೂ ಅವರು ಶಾಂತಚಿತ್ತದಿಂದ ತಂಡವನ್ನು ಮುನ್ನಡೆಸಿದರು. ರೋಹಿತ್ ಶರ್ಮಾ ಎಷ್ಟು ದಿನ ನಾಯಕನಾಗಿ ಮುಂದುವರಿಯುತ್ತಾರೆಂದು ನಮಗೆ ತಿಳಿದಿಲ್ಲವಾದ್ದರಿಂದ ಅವರಿಗೆ ಏಕದಿನ ನಾಯಕತ್ವವೂ ಸಿಗುತ್ತದೆ. ಗಿಲ್ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಅವರು ವೈಟ್-ಬಾಲ್‌ನಲ್ಲಿ ರನ್ ಗಳಿಸುತ್ತಾರೆ. ಅವರು ಟೆಸ್ಟ್‌ಗಳಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಟ್ಟಾರೆಯಾಗಿ ಗಿಲ್‌ಗೆ ಇಂಗ್ಲೆಂಡ್‌ ಸರಣಿ ಅದ್ಭುತ ಪ್ರವಾಸ" ಎಂದು ಕೈಫ್‌ ಹೇಳಿದರು.

"ಶುಭಮನ್ ಗಿಲ್ ನಾಯಕನಾಗಿ ಇಂಗ್ಲೆಂಡ್‌ ಸರಣಿಯಲ್ಲಿ ಎರಡೂ ಕೈಗಳಿಂದ ಅವಕಾಶಗಳನ್ನು ಬಾಚಿಕೊಂಡರು. ಅವರು ನಾಯಕರಾದಾಗ, ಅವರ ಟೆಸ್ಟ್ ದಾಖಲೆಯನ್ನು ನೋಡಿ, ಅವರನ್ನು ಏಕೆ ನಾಯಕನನ್ನಾಗಿ ಮಾಡಲಾಯಿತು ಎಂಬ ಬಗ್ಗೆ ಹಲವು ಪ್ರಶ್ನೆಗಳು ಇದ್ದವು. ಆದರೆ ಇಂಉ ಅವರ ನಾಯಕತ್ವವನ್ನು ಎಲ್ಲರೂ ಕೊಂಡಾಡುತ್ತಿದಾರೆ. ಏಕದಿನ ಕ್ರಿಕೆಟ್‌ಗೂ ಅವರಿಗೆ ನಾಯಕತ್ವ ನೀಡಿದರೆ ಉತ್ತಮ" ಎಂದು ಕೈಫ್‌ ಹೇಳಿದರು.

ಇಂಗ್ಲೆಂಡ್‌ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ನಾಯಕನಾಗಿದ್ದ ರೋಹಿತ್‌ ಶರ್ಮ ಅವರು ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ತಂಡಕ್ಕೆ ನೂತನ ನಾಯಕ ಆಯ್ಕೆಯಾಗಬೇಕಿತ್ತು. ಈ ವೇಳೆ ರಾಹುಲ್‌, ಬೂಮ್ರಾ ಹೆಸರು ಕೇಳಿ ಬಂದಿತ್ತಾದರೂ ಆಯ್ಕೆ ಸಮಿತಿ ಯುವ ಆಟಗಾರ ಶುಭಮನ್‌ ಗಿಲ್‌ಗೆ ನಾಯಕತ್ವದ ಹೊಣೆ ನೀಡಿತು. ಈ ವೇಳೆ ಹಲವು ಮಾಜಿ ಆಟಗಾರರಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಆತ್ಮವಿಶ್ವಾಸ, ಛಲ ಬಿಡದ ಗಿಲ್‌ ನಾಯಕತ್ವದ ಜತೆ ಬ್ಯಾಟಿಂಗ್‌ನಲ್ಲೂ ದೊಡ್ಡ ಸಾಧನೆ ಮಾಡಿದರು. 5 ಪಂದ್ಯಗಳಿಂದ 754 ರನ್‌ ಗಳಿಸಿದ್ದರು.

ಇದನ್ನೂ ಓದಿ IND vs ENG: ಮೊಹಮ್ಮದ್‌ ಸಿರಾಜ್‌ಗೆ ಆಗುತ್ತಿರುವ ಅನ್ಯಾಯವನ್ನು ರಿವೀಲ್‌ ಮಾಡಿದ ಆರ್‌ ಅಶ್ವಿನ್‌!