ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Team India: 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಟೀಮ್‌ ಇಂಡಿಯಾ

Team India Creates History: ಭಾರತದಲ್ಲಿ ಭಾರತದ ವಿರುದ್ಧ ವೆಸ್ಟ್ ಇಂಡೀಸ್‌ನ ಪ್ರಸ್ತುತ ಸೋಲಿನ ಸರಣಿಯು ಡ್ಯಾರೆನ್ ಸ್ಯಾಮಿ ನಾಯಕರಾಗಿದ್ದಾಗ ಪ್ರಾರಂಭವಾಯಿತು ಮತ್ತು ಅವರು ಪ್ರಸ್ತುತ ಅವರ ತರಬೇತುದಾರರಾಗಿದ್ದಾರೆ. 2013-25ರ ತನಕ ವಿಂಡೀಸ್‌ 6 ಸೋಲು ಕಂಡಿದೆ. 7 ಸೋಲು ಕಂಡಿರುವ ಆಸೀಸ್‌ ಅಗ್ರಸ್ಥಾನದಲ್ಲಿದೆ.

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಬೃಹತ್ ಟೆಸ್ಟ್‌ (India vs West Indies)ಸರಣಿ ಗೆಲುವಿನ ನಂತರ ಭಾರತ(Team India) ಇತಿಹಾಸವೊಂದನ್ನು ನಿರ್ಮಿಸಿದೆ. 147 ವರ್ಷಗಳ ಟೆಸ್ಟ್‌ ಕ್ರಿಕ್ರೆಟ್‌ ಇತಿಹಾಸದಲ್ಲಿ, ಟೆಸ್ಟ್ ಪಂದ್ಯವನ್ನು ಸೋಲದೆ ತಂಡವೊಂದರ ವಿರುದ್ಧ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ(Team India Creates History) ಪಾತ್ರವಾಯಿತು. ದಕ್ಷಿಣ ಆಫ್ರಿಕಾ ಕೂಡ ವೆಸ್ಟ್ ಇಂಡೀಸ್ ವಿರುದ್ಧ ಸತತ 10 ಸರಣಿಗಳನ್ನು ಗೆದ್ದಿದೆ, ಆದರೆ ಅವರು ಎರಡು ಟೆಸ್ಟ್ ಪಂದ್ಯಗಳನ್ನು ಸೋತಿದ್ದಾರೆ.

ಭಾರತವು 2002 ರಿಂದೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಆಡಿದ 17 ಪಂದ್ಯಗಳನ್ನು ಗೆದ್ದಿದೆ ಮತ್ತು 10 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇದು ಒಂದು ತಂಡದ ವಿರುದ್ಧ ಭಾರತದ ಅತಿ ದೊಡ್ಡ ಅಜೇಯ ದಾಖಲೆಯಾಗಿದೆ.

ಒಂದು ತಂಡದ ವಿರುದ್ಧ ಸತತ ಅತಿ ಹೆಚ್ಚು ಟೆಸ್ಟ್ ಸರಣಿ ಗೆಲುವುಗಳು

10 ಗೆಲುವು; ಭಾರತ vs ವೆಸ್ಟ್ ಇಂಡೀಸ್ (2002-25) *

10 ಗೆಲುವು; ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (1998-24)

9 ಗೆಲುವು; ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ (2000-22)

8 ಗೆಲುವು; ಆಸ್ಟ್ರೇಲಿಯಾ vs ಇಂಗ್ಲೆಂಡ್ (1989-2003)

8 ಗೆಲುವು; ಶ್ರೀಲಂಕಾ vs ಜಿಂಬಾಬ್ವೆ (1996-20)

ಇದನ್ನೂ ಓದಿ IND vs WI: ಭಾರತ-ವಿಂಡೀಸ್‌ ಟೆಸ್ಟ್ ಸರಣಿಯ ಪ್ರಶಸ್ತಿ ವಿಜೇತರು, ಗೆದ್ದ ಬಹುಮಾನದ ಪಟ್ಟಿ ಇಲ್ಲಿದೆ

ಭಾರತದಲ್ಲಿ ಭಾರತದ ವಿರುದ್ಧ ವೆಸ್ಟ್ ಇಂಡೀಸ್‌ನ ಪ್ರಸ್ತುತ ಸೋಲಿನ ಸರಣಿಯು ಡ್ಯಾರೆನ್ ಸ್ಯಾಮಿ ನಾಯಕರಾಗಿದ್ದಾಗ ಪ್ರಾರಂಭವಾಯಿತು ಮತ್ತು ಅವರು ಪ್ರಸ್ತುತ ಅವರ ತರಬೇತುದಾರರಾಗಿದ್ದಾರೆ. 2013-25ರ ತನಕ ವಿಂಡೀಸ್‌ 6 ಸೋಲು ಕಂಡಿದೆ. 7 ಸೋಲು ಕಂಡಿರುವ ಆಸೀಸ್‌ ಅಗ್ರಸ್ಥಾನದಲ್ಲಿದೆ.

ಭಾರತದಲ್ಲಿ ಭಾರತದ ವಿರುದ್ಧ ಸತತ ಅತಿ ಹೆಚ್ಚು ಸೋಲುಗಳು

7 ಸೋಲು; ಆಸ್ಟ್ರೇಲಿಯಾ (2008-13)

6 ಸೋಲು; ಶ್ರೀಲಂಕಾ (1986-94)

6 ಸೋಲು; ನ್ಯೂಜಿಲೆಂಡ್ (2010-16)

6 ಸೋಲು; ವೆಸ್ಟ್ ಇಂಡೀಸ್ (2013-25) *