ಟೆಸ್ಟ್ ಕ್ರಿಕೆಟ್‌ಗೆ 150ರ ಸಂಭ್ರಮ; ಆಸ್ಟ್ರೇಲಿಯಾ-ಇಂಗ್ಲೆಂಡ್ ಪಿಂಕ್ ಬಾಲ್ ಟೆಸ್ಟ್ ಆಯೋಜನೆ
ಟೆಸ್ಟ್ ತನ್ನ ಆರಂಭಿಕ ಘಟ್ಟಗಳಲ್ಲಿ, ಫಲಿತಾಂಶ ಬರುವವರೆಗೂ ನಡೆಯುತ್ತಿತ್ತು. ಹತ್ತು, ಹನ್ನೊಂದು ದಿನ ನಡೆದಿದ್ದು ಇದೆ. ಈಗ ಅದು ಐದು ದಿನಕ್ಕೆ ಬಂದಿದೆ. ಟೆಸ್ಟ್ ಮಾದರಿ ಶುರುವಾಗಿದ್ದು 1877ರಲ್ಲಿ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವೆ ಮೆಲ್ಬರ್ನ್ನಲ್ಲಿ ಪಂದ್ಯ ನಡೆದಿತ್ತು.


ಮೊದಲ ಟೆಸ್ಟ್ ಪಂದ್ಯಕ್ಕೆ 2027ರಲ್ಲಿ150 ವರ್ಷ(150th Test anniversary) ಪೂರೈಸುವ ಹಿನ್ನೆಲೆಯಲ್ಲಿ ಇದರ ಸಂಭ್ರಮಾಚರಣೆಯಾಗಿ ಏಕೈಕ ಅಹರ್ನಿಶಿ ಪಂದ್ಯ ಆಯೋಜಿಸುವುದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ತಿಳಿಸಿದೆ. 2027ರ ಮಾರ್ಚ್ 11ರಿಂದ 15ರವರೆಗೆ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಂಸಿಜಿ) ಆತಿಥೇಯ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್(Australia-England) ನಡುವೆ ಈ ಏಕೈಕ ಟೆಸ್ಟ್ ಪಂದ್ಯ ನಿಗದಿಗೊಳಿಸಲಾಗಿದೆ. ಎಂಸಿಜಿಯಲ್ಲಿ ನಡೆಯಲಿರುವ ಮೊದಲ ಪಿಂಕ್‌ಬಾಲ್ ಟೆಸ್ಟ್(pink-ball Test) ಪಂದ್ಯ ಇದಾಗಿರಲಿದೆ.
ಟೆಸ್ಟ್ ತನ್ನ ಆರಂಭಿಕ ಘಟ್ಟಗಳಲ್ಲಿ, ಫಲಿತಾಂಶ ಬರುವವರೆಗೂ ನಡೆಯುತ್ತಿತ್ತು. ಹತ್ತು, ಹನ್ನೊಂದು ದಿನ ನಡೆದಿದ್ದು ಇದೆ. ಈಗ ಅದು ಐದು ದಿನಕ್ಕೆ ಬಂದಿದೆ. ಟೆಸ್ಟ್ ಮಾದರಿ ಶುರುವಾಗಿದ್ದು 1877ರಲ್ಲಿ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ನಡುವೆ ಮೆಲ್ಬರ್ನ್ನಲ್ಲಿ ಪಂದ್ಯ ನಡೆಯಿತು. 1977ರಲ್ಲಿ ಇವೇ ತಂಡಗಳ ನಡುವೆ 100ನೇ ವರ್ಷಾಚರಣೆ ನಡೆಯಿತು. ಎರಡೂ ಸಂದರ್ಭದಲ್ಲಿ ಆಸ್ಟ್ರೇಲಿಯ 45 ರನ್‌ಗಳ ಜಯ ಸಾಧಿಸಿತ್ತು. ಇದೀಗ 150ನೇ ವರ್ಷಾಚರಣೆಯ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳೇ ಮುಖಾಮುಖಿಯಾಗುತ್ತಿವೆ.
ಇದನ್ನೂ ಓದಿ IPL 2025: ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಹ್ಯಾರಿ ಬ್ರೂಕ್ ಸ್ಥಾನ ತುಂಬಬಲ್ಲಿ ಟಾಪ್ 5 ಆಟಗಾರರು!
ಆಸ್ಟ್ರೇಲಿಯಾ ತಂಡ ಇದುವರೆಗೆ 13 ಅಹರ್ನಿಶಿ ಪಂದ್ಯಗಳನ್ನಾಡಿದ್ದು, 12ರಲ್ಲಿ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ 2025-26ರ ಆಶಸ್ ಟೆಸ್ಟ್ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.
ಕ್ರಿಕೆಟ್‌ನ ಮೂಲರೂಪ, ಶುದ್ಧರೂಪ ಎಂದೆಲ್ಲ ಕರೆಸಿಕೊಳ್ಳುವ ಟೆಸ್ಟ್ ಕ್ರಿಕೆಟ್, ಬದಲಾವಣೆಯ ಪರ್ವಕಾಲದಲ್ಲಿದೆ. ಅದು ತನ್ನ ರೂಪವನ್ನೇ ಕಳೆದುಕೊಳ್ಳುವ ಅವಸ್ಥಾಂತರದಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಐದು ದಿನಗಳ ಟೆಸ್ಟ್ ಅನ್ನು ನಾಲ್ಕುದಿನಗಳಿಗಿಳಿಸಲು ಚಿಂತಿಸುತ್ತಿದೆ.
ಮೊದಲಿನಿಂತೆ ಈಗ 5 ದಿನಗಳು ಟೆಸ್ಟ್ ಪಂದ್ಯ ಸಾಗುವುದು ಬಲು ಅಪರೂಪವಾಗಿದೆ. ಕೇವಲ ಮೂರು ದಿನಗಳಲ್ಲಿ ಪಂದ್ಯ ಮುಕ್ತಾಯ ಕಾಣುತ್ತದೆ. ಡ್ರಾ ಗೊಳ್ಳವ ಮಾತೆ ಇಲ್ಲ. ಸ್ಪಷ್ಟ ಫಲಿತಾಂಶ ಕಾಣುತ್ತದೆ. ಇದಕ್ಕೆ ಕಾರಣ ಟಿ20 ಕ್ರಿಕೆಟ್. ಹೊಡಿ-ಬಡಿ ಆಟಕ್ಕೆ ಹೊಂದಿಕೊಂಡಿರುವ ಯುವ ಆಟಗಾರರಿಗೆ ನಿಂತು ಆಡುವ ಕಲೆ ತಿಳಿದಿಲ್ಲ. ಜತೆಗೆ ಟೆಸ್ಟ್ ಪಂದ್ಯಗಳ ಆಯೋಜನೆ ಕೂಡ ಕಡಿಮೆಯಾಗಿದೆ. ಟೆಸ್ಟ್ ಉಳಿಸುವ ನಿಟ್ಟಿನಲ್ಲಿ ಕೆಲ ಮಾಜಿ ಆಟಗಾರರು ಐಸಿಸಿಗೆ ಹಲವು ಸಲಹೆ ನೀಡಿದ ಕಾರಣ ಟೆಸ್ಟ್ ವಿಶ್ವಕಪ್ ಪರಿಕಲ್ಪನೆಯನ್ನು ಮಾಡಲಾಯಿತು.