ನ್ಯೂಯಾರ್ಕ್: ಈ ಬಾರಿ ಯುಎಸ್ ಓಪನ್(US Open 2025) ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದ ಸರ್ಬಿಯಾದ ದಿಗ್ಗಜ ನೋವಾಕ್ ಜೋಕೋವಿಕ್(Novak Djokovic) ಹಾಗೂ ವಿಶ್ವ ನಂ.2 ಆಟಗಾರ ಕಾರ್ಲೊಸ್ ಅಲ್ಕರಾಜ್(Carlos Alcaraz) ನಡುವಣ ಸೆಮಿಫೈನಲ್ ಮುಖಾಮುಖಿಯಲ್ಲಿ ಜೋಕೋವಿಕ್ ಸೋಲು ಕಂಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಅವರ 25ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲುವು ಭಗ್ನಗೊಂಡಿತು. ಅಲ್ಕರಾಜ್ 2022ರ ಬಳಿಕ ಮತ್ತೊಂದು ಯುಎಸ್ ಓಪನ್ ಕಿರೀಟ ಗೆಲ್ಲುವ ಕಾತರದಲ್ಲಿದ್ದಾರೆ.
ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಅಲ್ಕರಾಜ್ ಅವರು ಜೋಕೋವಿಕ್ ವಿರುದ್ದ 6-4, 7-6 (4), 6-2 ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದರು. ಈ ಗೆಲುವು ಅವರ ಸತತ ಮೂರನೇ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗೆ ಅರ್ಹತೆ ಗಳಿಸಲು ಸಹಾಯ ಮಾಡಿತು. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಾನಿಕ್ ಸಿನ್ನರ್ ಸವಾಲು ಎದುರಿಸಲಿದ್ದಾರೆ. ಉಭಯ ಆಟಗಾರರ ಈ ಪಂದ್ಯ ಅತ್ಯಂತ ಜಿದ್ದಾಜಿದ್ದಿನಿಂ ಕೂಡಿರುವ ನಿರೀಕ್ಷೆ ಇದೆ.
ಜೋಕೋ ಹಾಗೂ ಅಲ್ಕರಾಜ್ ನಡುವಣ 8ನೇ ಮುಖಾಮುಖಿ ಇದಾಗಿತ್ತು. ಜೋಕೋ 5-3 ಗೆಲುವಿನ ದಾಖಲೆ ಹೊಂದಿದ್ದರು. ಇಬ್ಬರ ನಡುವಿನ ಕೊನೆ 2 ಪಂದ್ಯಗಳಾದ ಒಲಿಂಪಿಕ್ಸ್, ವಿಂಬಲ್ಡನ್‌ನಲ್ಲಿ ಜೋಕೋ ಗೆದ್ದಿದ್ದರು. ಈ ಬಾರಿ ಅಲ್ಕರಾಜ್ ಗೆದ್ದು ಬೀಗಿದರು.
ಇದನ್ನೂ ಓದಿ US Open: ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಕ್