ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಡೇವಿಡ್‌ ವಾರ್ನರ್‌ ದಾಖಲೆ ಮೇಲೆ ಕಣ್ಣಿಟ್ಟ ಕಿಂಗ್‌ ಕೊಹ್ಲಿ

ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದರೆ 2016ರ ನಂತರ ಮೊದಲ ಬಾರಿ ಕ್ವಾಲಿಫೈಯರ್‌ 1ಕ್ಕೆ ಅರ್ಹತೆ ಪಡೆಯಲಿದೆ. ಇಂದು ಸೋತರೆ ಆರ್‌ಸಿಬಿ ಮುಂಬೈ ವಿರುದ್ಧ ಎಲಿನೇಟರ್‌ ಪಂದ್ಯ ಆಡಬೇಕಿದೆ. ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ 1ರಲ್ಲಿ ಆಡಲಿವೆ.

ಲಕ್ನೋ: ಈಗಾಗಲೇ ಪ್ಲೇ ಆಫ್‌ ಪ್ರವೇಶ ಪಡೆದಿರುವ ಆರ್‌ಸಿಬಿ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಇಂದು(ಮೇ 27) ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಆಡಲಿದೆ. ರಜತ್‌ ಪಾಟೀದಾರ್‌ ಪಡೆ ಈ ಪಂದ್ಯ ಗೆದ್ದರೆ ಮೊದಲ ಕ್ವಾಲಿಫೈಯರ್‌ ಪಂದ್ಯವನ್ನಾಡುವ ಅವಕಾಶ ಗಿಟ್ಟಿಸಿಕೊಳ್ಳಲಿದೆ. ಹೀಗಾಗಿ ಆರ್‌ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದೆ. ಇದೇ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಗೆ ಎರಡು ದಾಖಲೆಗಳನ್ನು ನಿರ್ಮಿಸುವ ಅವಕಾಶವೊಂದಿದೆ.

ಅತ್ಯಧಿಕ ಅರ್ಧಶತಕ ದಾಖಲೆ

ವಿರಾಟ್‌ ಕೊಹ್ಲಿ ಇಂದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರೆ ಐಪಿಎಲ್‌ ಇತಿಹಾಸದಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್‌ ವಾರ್ನರ್‌(62) ಜತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಕೊಹ್ಲಿ 12 ಪಂದ್ಯಗಳಿಂದ 548 ರನ್‌ ಕಲೆಹಾಕಿದ್ದಾರೆ.

ಅತ್ಯಧಿಕ ಐಪಿಎಲ್‌ ಅರ್ಧಶತಕ

ವಿರಾಟ್ ಕೊಹ್ಲಿ-62

ಡೇವಿಡ್ ವಾರ್ನರ್- 62

ಶಿಖರ್ ಧವನ್- 51

ರೋಹಿತ್ ಶರ್ಮಾ- 46

ಕೆ.ಎಲ್ ರಾಹುಲ್- 40

ಎಬಿ ಡಿವಿಲಿಯರ್ಸ್- 40



24 ರನ್‌ ಬಾರಿಸಿದರೆ ಮತ್ತೊಂದು ದಾಖಲೆ

ಕೊಹ್ಲಿ ಇದೇ ಪಂದ್ಯದಲ್ಲಿ 24 ರನ್‌ ಪೂರೈಸಿದರೆ, ಟಿ20 ಇತಿಹಾಸದಲ್ಲಿ ಒಂದೇ ತಂಡದ ಪರ 9,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಕೊಹ್ಲಿ ವಿದಾಯ ಹೇಳಿದ್ದರೂ ಕೂಡ ಫ್ರಾಂಚೈಸಿ ಲೀಗ್‌ಗಳಲ್ಲಿ ಅವರ ಬ್ಯಾಟಿಂಗ್‌ ಜೋಶ್‌ ಕಿಂಚಿತ್ತು ಕಡಿಮೆಯಾಗಿಲ್ಲ.

ಇದನ್ನೂ ಓದಿ IPL 2025: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಸೂರ್ಯಕುಮಾರ್‌

ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದರೆ 2016ರ ನಂತರ ಮೊದಲ ಬಾರಿ ಕ್ವಾಲಿಫೈಯರ್‌ 1ಕ್ಕೆ ಅರ್ಹತೆ ಪಡೆಯಲಿದೆ. ಇಂದು ಸೋತರೆ ಆರ್‌ಸಿಬಿ ಮುಂಬೈ ವಿರುದ್ಧ ಎಲಿನೇಟರ್‌ ಪಂದ್ಯ ಆಡಬೇಕಿದೆ. ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್ 1ರಲ್ಲಿ ಆಡಲಿವೆ. ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಸೋತ ತಂಡ ಕ್ವಾಲಿಫೈಯರ್‌ 2ರಲ್ಲಿ ಎಲಿಮಿನೇಟರ್‌ ಪಂದ್ಯದ ವಿಜೇತರನ್ನು ಎದುರಿಸಬೇಕಾಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ನಲ್ಲಿ ಮುಖಾಮುಖಿಯಾಗಲಿವೆ. ಸದ್ಯ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಗೆದ್ದರೆ ಪಂಜಾಬ್‌ನಂತೆ 19 ಅಂಕ ಆಗಲಿದೆ.