ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಸೂರ್ಯಕುಮಾರ್‌

ಪಂದ್ಯದಲ್ಲಿ 39 ಎಸೆತದಲ್ಲಿ 6 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 57 ರನ್‌ ಹೊಡೆದ ಸೂರ್ಯಕುಮಾರ್‌ ಐಪಿಎಲ್‌ ಸೀಸನ್‌ ಒಂದರಲ್ಲಿ ಅತ್ಯಧಿಕ 14 ಸಲ 25 ಪ್ಲಸ್‌ ರನ್‌ ಮಾಡಿದ ದಾಖಲೆ ಸ್ಥಾಪಿಸಿದರು. 2018ರಲ್ಲಿ ಕೇನ್‌ ವಿಲಿಯಮ್ಸನ್‌, 2023ರಲ್ಲಿ ಶುಭಮನ್‌ ಗಿಲ್‌ 13 ಸಲ ಈ ಸಾಧನೆಗೈದದ್ದು ಹಿಂದಿನ ದಾಖಲೆ.

ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಸೂರ್ಯಕುಮಾರ್‌

Profile Abhilash BC May 27, 2025 9:13 AM

ಜೈಪುರ: ಪಂಜಾಬ್‌ ಕಿಂಗ್ಸ್‌(MI vs PBKS) ವಿರುದ್ಧ ಸೋಮವಾರ ನಡೆದಿದ್ದ ಐಪಿಎಲ್‌(IPL 2025) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡ 7 ವಿಕೆಟ್ ಅಂತರದಿಂದ ಸೋಲು ಕಂಡರೂ ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್‌ ಯಾದವ್‌ ಅವರು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (Sachin Tendulkar) ದಾಖಲೆಯೊಂದನ್ನು ಮುರಿದಿದ್ದಾರೆ.

ಪಂದ್ಯದಲ್ಲಿ 39 ಎಸೆತದಲ್ಲಿ 6 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 57 ರನ್‌ ಹೊಡೆದ ಸೂರ್ಯಕುಮಾರ್‌ ಐಪಿಎಲ್‌ ಸೀಸನ್‌ ಒಂದರಲ್ಲಿ ಅತ್ಯಧಿಕ 14 ಸಲ 25 ಪ್ಲಸ್‌ ರನ್‌ ಮಾಡಿದ ದಾಖಲೆ ಸ್ಥಾಪಿಸಿದರು. 2018ರಲ್ಲಿ ಕೇನ್‌ ವಿಲಿಯಮ್ಸನ್‌, 2023ರಲ್ಲಿ ಶುಭಮನ್‌ ಗಿಲ್‌ 13 ಸಲ ಈ ಸಾಧನೆಗೈದದ್ದು ಹಿಂದಿನ ದಾಖಲೆ.

ಸಚಿನ್‌ ದಾಖಲೆ ಪತನ

ಮುಂಬೈ ಪರ ಆವೃತ್ತಿ ಒಂದರಲ್ಲಿ ಅತ್ಯಧಿಕ 640 ರನ್‌ ಬಾರಿಸುವ ಮೂಲಕ ಈ ಹಿಂದಿನ ಸಾಧಕರಾಗಿದ್ದ ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯನ್ನು ಕೂಡ ಸೂರ್ಯಕುಮಾರ್‌ ಮುರಿದರು. ಸಚಿನ್‌ 2010ರಲ್ಲಿ 618 ರನ್‌ ಹೊಡೆದಿದ್ದರು. ಸೂರ್ಯ ಮುಂಬೈ ಪರ 2 ಸಲ 600 ರನ್‌ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆಯನ್ನೂ ಸ್ಥಾಪಿಸಿದರು. 2023ರಲ್ಲಿ ಮೊದಲ ಸಲ ಈ ಸಾಧನೆ ಮಾಡಿದ್ದರು (605).

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 7 ವಿಕೆಟಿಗೆ 184 ರನ್‌ ಗಳಿಸಿತು. ಗುರಿ ಬೆನ್ನ್ನಟ್ಟಿದ ಪಂಜಾಬ್‌ 18.3 ಓವರ್‌ಗಳಲ್ಲಿ 3 ವಿಕೆಟಿಗೆ 187 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಭರ್ಜರಿ ಗೆಲುವು ಸಾಧಿಸಿದ ಪಂಜಾಬ್ ಕಿಂಗ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಕ್ವಾಲಿಫೈಯರ್‌ ಮೊದಲ ಪಂದ್ಯವನ್ನಾಡಲಿದೆ. ಸೋಲು ಕಂಡ 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಎಲಿಮಿನೇಟರ್‌ನಲ್ಲಿ ಆಡಬೇಕಿದೆ.

ಇದನ್ನೂ ಓದಿ IPL 2025: ಇನ್‌ಸ್ಟಾಗ್ರಾಮ್‌ನಲ್ಲಿಯೂ ಎಲ್ಲಾ ತಂಡಗಳನ್ನು ಹಿಂದಿಕ್ಕಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!