ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Who is Jatinder Singh?: ಒಮಾನ್‌ ತಂಡ ಮುನ್ನಡೆಸುವ ಜತಿಂದರ್‌ ಸಿಂಗ್‌ ಯಾರು?

Asia Cup 2025: 2024 ರಿಂದ 12 ಏಕದಿನ ಮತ್ತು 11 ಟಿ20ಗಳಲ್ಲಿ ತಂಡವನ್ನು ಮುನ್ನಡೆಸಿರುವ ಜತಿಂದರ್ ಸಿಂಗ್ ಇದೀಗ ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್‌ ಮಾಡಲಿದ್ದಾರ ಎಂದು ಕಾದು ನೋಡಬೇಕಿದೆ. ಒಮನ್ ತಂಡ ಏಕದಿನ ವಿಶ್ವಕಪ್‌ನಲ್ಲಿ ಆಡದಿದ್ದರೂ, ಎರಡು ಟಿ20 ವಿಶ್ವಕಪ್‌ಗಳಲ್ಲಿ( 2016 ಮತ್ತು 2021) ಆಡಿದೆ. ಈ ಪಂದ್ಯಾವಳಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಜತೀಂದರ್ 162 ರನ್ ಗಳಿಸಿದ್ದಾರೆ.

ನವದೆಹಲಿ: ಏಷ್ಯಾ ಖಂಡದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ಏಷ್ಯಾ ಕಪ್ ಟೂರ್ನಿ(Asia Cup 2025) ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಚೊಚ್ಚಲ ಬಾರಿಗೆ ಸ್ಪರ್ಧಿಸುತ್ತಿರುವ ಒಮಾನ್‌ ತಂಡವನ್ನು ಭಾರತೀಯ ಮೂಲದ ಜತಿಂದರ್ ಸಿಂಗ್(Jatinder Singh) ಮುನ್ನಡೆಸಲಿದ್ದಾರೆ. ಇವರ ಹಿನ್ನಲೆ, ಕ್ರಿಕೆಟ್‌ ಸಾಧನೆಯ(Who is Jatinder Singh?) ಕುರಿತ ಮಾಹಿತಿಯ ಇಣುಕು ನೋಟ ಇಲ್ಲಿದೆ.

1989 ರಲ್ಲಿ ಪಂಜಾಬ್‌ನ ಲುಧಿಯಾನದಲ್ಲಿ ಜನಿಸಿದ ಜತಿಂದರ್ ಸಿಂಗ್, 2015 ರಲ್ಲಿ ಒಮಾನ್‌ ಪರ ಟಿ20 ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ನಂತರ ಏಪ್ರಿಲ್ 2019 ರಲ್ಲಿ ಒಮಾನ್ ಏಕದಿನ ತಂಡದಲ್ಲಿ ಸ್ಥಾನ ಪಡೆದರು.

ಏಕದಿನ ಕ್ರಿಕೆಟ್‌ನಲ್ಲಿ ಅವರು ನಾಲ್ಕು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳೊಂದಿಗೆ 29.37 ರ ಸರಾಸರಿಯಲ್ಲಿ 1,704 ರನ್ ಗಳಿಸಿದ್ದಾರೆ. ಏಪ್ರಿಲ್ 2022 ರಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ಅವರು ಅಜೇಯ 118 ರನ್ ಗಳಿಸಿದ್ದು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಟಿ20ಯಲ್ಲಿ, ಜತಿಂದರ್ 64 ಪಂದ್ಯಗಳಲ್ಲಿ ಆಡಿದ್ದು, 118.55 ಸ್ಟ್ರೈಕ್ ರೇಟ್‌ನಲ್ಲಿ 1,399 ರನ್ ಗಳಿಸಿದ್ದಾರೆ.

2024 ರಿಂದ 12 ಏಕದಿನ ಮತ್ತು 11 ಟಿ20ಗಳಲ್ಲಿ ತಂಡವನ್ನು ಮುನ್ನಡೆಸಿರುವ ಜತಿಂದರ್ ಸಿಂಗ್ ಇದೀಗ ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್‌ ಮಾಡಲಿದ್ದಾರ ಎಂದು ಕಾದು ನೋಡಬೇಕಿದೆ. ಒಮನ್ ತಂಡ ಏಕದಿನ ವಿಶ್ವಕಪ್‌ನಲ್ಲಿ ಆಡದಿದ್ದರೂ, ಎರಡು ಟಿ20 ವಿಶ್ವಕಪ್‌ಗಳಲ್ಲಿ( 2016 ಮತ್ತು 2021) ಆಡಿದೆ. ಈ ಪಂದ್ಯಾವಳಿಯಲ್ಲಿ ಐದು ಪಂದ್ಯಗಳನ್ನು ಆಡಿರುವ ಜತಿಂದರ್ 162 ರನ್ ಗಳಿಸಿದ್ದಾರೆ.

ಈ ಬಾರಿಯ ಏಷ್ಯಾಕಪ್‌ನಲ್ಲಿ ಒಮಾನ್‌ ತಂಡ ಸೆಪ್ಟೆಂಬರ್ 12ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

ಏಷ್ಯಾಕಪ್‌ಗೆ ಒಮಾನ್‌ ತಂಡ

ಜತಿಂದರ್‌ ಸಿಂಗ್‌ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸುಫ್ಯಾನ್ ಯೂಸುಫ್, ಆಶಿಶ್ ಒಡೆಡೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಆರ್ಯನ್ ಬಿಶ್ತ್, ಕರಣ್ ಸೋನಾವಾಲೆ, ಜಿಕ್ರಿಯಾ ಇಸ್ಲಾಂ, ಹಸ್ನೈನ್ ಅಲಿ ಶಾ, ಫೈಸಲ್ ಶಾ, ಮೊಹಮ್ಮದ್ ಇಮ್ರಾನ್, ನದೀಮ್ ಖಾನ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ.

ಇದನ್ನೂ ಓದಿ Asia Cup 2025: ಏಷ್ಯಾ ಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಒಮಾನ್