Asia Cup 2025: ಏಷ್ಯಾ ಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಒಮಾನ್
"ಭಾರತ ಮತ್ತು ಪಾಕಿಸ್ತಾನದಂತಹ ತಂಡಗಳ ವಿರುದ್ಧ ಆಡುವುದು ಯಾವುದೇ ಕ್ರಿಕೆಟಿಗನಿಗೆ ಮರೆಯಲಾಗದ ಕ್ಷಣ. ಟಿ20 ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದು, ಅಲ್ಲಿ ಒಂದು ಓವರ್‌ನ ಅದ್ಭುತ ಆಟ ಎಲ್ಲವನ್ನೂ ಬದಲಾಯಿಸಬಹುದು. ನಮ್ಮ ತಂಡವು ಬಲಿಷ್ಠವಾಗಿದ್ದು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ" ಎಂದು ತಂಡದ ಮುಖ್ಯ ಕೋಚ್ ದುಲೀಪ್ ಮೆಂಡಿಸ್ ಹೇಳಿರು.
-
Abhilash BC
Aug 26, 2025 1:09 PM
ದುಬೈ: ಏಷ್ಯಾಕಪ್‌ನಲ್ಲಿ(Asia Cup 2025) ಮೊದಲ ಬಾರಿಗೆ ಭಾಗವಹಿಸಲಿರುವ ಒಮಾನ್(Oman squad), ಮಂಗಳವಾರ ತಮ್ಮ 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿತು. ತಂಡವನ್ನು ಆರಂಭಿಕ ಆಟಗಾರ ಜತಿಂದರ್ ಸಿಂಗ್(Jatinder Singh) ಮುನ್ನಡೆಸಲಿದ್ದಾರೆ. 1980 ರ ದಶಕದಲ್ಲಿ 24 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ದುಲೀಪ್ ಮೆಂಡಿಸ್ ಅವರ ತರಬೇತಿಯಲ್ಲಿ ಒಮನ್ ತಂಡ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಒಮಾನ್ ತಂಡ ಸೆಪ್ಟೆಂಬರ್ 12 ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ನಂತರ 15 ಮತ್ತು 19 ರಂದು ಕ್ರಮವಾಗಿ ಯುಎಇ ಮತ್ತು ಭಾರತ ವಿರುದ್ಧ ಆಡಲಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಟೂರ್ನಿಯ ಮುಂದಿನ ಹಂತಗಳಿಗೆ ಅರ್ಹತೆ ಪಡೆಯಲಿವೆ.
"ನಾವು ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ದೊಡ್ಡ ಸಾಧನೆ. ಇದು ಒಂದು ಪ್ರಮುಖ ಪಂದ್ಯಾವಳಿ ಮತ್ತು ನಮ್ಮ ಆಟಗಾರರು ಜಾಗತಿಕ ವೇದಿಕೆಯಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ಅದ್ಭುತ ಅವಕಾಶ" ಎಂದು ತಂಡದ ಕೋಚ್ ಮೆಂಡಿಸ್ ಹೇಳಿದರು.
"ಭಾರತ ಮತ್ತು ಪಾಕಿಸ್ತಾನದಂತಹ ತಂಡಗಳ ವಿರುದ್ಧ ಆಡುವುದು ಯಾವುದೇ ಕ್ರಿಕೆಟಿಗನಿಗೆ ಮರೆಯಲಾಗದ ಕ್ಷಣ. ಟಿ20 ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದು, ಅಲ್ಲಿ ಒಂದು ಓವರ್‌ನ ಅದ್ಭುತ ಆಟ ಎಲ್ಲವನ್ನೂ ಬದಲಾಯಿಸಬಹುದು. ನಮ್ಮ ತಂಡವು ಬಲಿಷ್ಠವಾಗಿದ್ದು ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ" ಎಂದರು.
ಒಮಾನ್ ತಂಡ
ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸುಫ್ಯಾನ್ ಯೂಸುಫ್, ಆಶಿಶ್ ಒಡೆಡೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಆರ್ಯನ್ ಬಿಶ್ತ್, ಕರಣ್ ಸೋನಾವಾಲೆ, ಜಿಕ್ರಿಯಾ ಇಸ್ಲಾಂ, ಹಸ್ನೈನ್ ಅಲಿ ಶಾ, ಫೈಸಲ್ ಶಾ, ಮೊಹಮ್ಮದ್ ಇಮ್ರಾನ್, ನದೀಮ್ ಖಾನ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ.
ಇದನ್ನೂ ಓದಿ Asia Cup 2025: ಚಾಂಪಿಯನ್‌ಗಳ ಒಂದು ನೋಟ