ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) ನಲ್ಲಿರುವ ಐದು ಫ್ರಾಂಚೈಸಿಗಳು ಪುನರುಜ್ಜೀವನಕ್ಕೆ ಸಜ್ಜಾಗಿದ್ದು, 2026 ರ(WPL mega auction) ಋತುವಿಗಾಗಿ ಬಿಸಿಸಿಐ ಮೆಗಾ ಹರಾಜನ್ನು ಯೋಜಿಸುತ್ತಿದೆ. ನವೆಂಬರ್ ಅಂತ್ಯದ ವೇಳೆಗೆ ಹರಾಜು ನಡೆಯುವ ಸಾಧ್ಯತೆಯಿದ್ದು, ಫ್ರಾಂಚೈಸಿಗಳಿಗೆ ಅನೌಪಚಾರಿಕವಾಗಿ ಹರಾಜಿನ ಬಗ್ಗೆ ತಿಳಿಸಲಾಗಿದೆ.
ಆಟಗಾರ್ತಿಯರ ಧಾರಣ ಸಂಖ್ಯೆ, ಹರಾಜು ಪರ್ಸ್, ಧಾರಣ ಸ್ಲಾಬ್‌ಗಳು ಮತ್ತು ಲಭ್ಯವಿರುವ ರೈಟ್-ಟು-ಮ್ಯಾಚ್ (RTM) ಕಾರ್ಡ್‌ಗಳ ಸಂಖ್ಯೆಯ ಕುರಿತು ಡಬ್ಲ್ಯುಪಿಎಲ್ ನಿಂದ ಅಧಿಕೃತ ದೃಢೀಕರಣಕ್ಕಾಗಿ ತಂಡಗಳು ಕಾಯುತ್ತಿವೆ. 2026 ರ ಡಬ್ಲ್ಯುಪಿಎಲ್ ಆವೃತ್ತಿಯ ದಿನಾಂಕಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದಾಗ್ಯೂ BCCI ಈ ಹಿಂದೆ ಜನವರಿ-ಫೆಬ್ರವರಿ ವಿಂಡೋದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಸೂಚಿಸಿತ್ತು.
2023 ರಲ್ಲಿ ಪ್ರಾರಂಭವಾದ ಐದು ತಂಡಗಳ WPL ನಲ್ಲಿ ಮುಂಬೈ ಇಂಡಿಯನ್ಸ್ ಉದ್ಘಾಟನಾ ಚಾಂಪಿಯನ್ ಆಗಿ ಹೊರಹೊಮ್ಮಿತು. ನಂತರ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ರಶಸ್ತಿಯನ್ನು ಗೆದ್ದಿತು. ಕಳೆದ ಬಾರಿ ಮುಂಬೈ ತಂಡವೇ ಗೆದ್ದು ಬೀಗಿತ್ತು.
ಇದನ್ನೂ ಓದಿ WPL 2025: ಡಬ್ಲ್ಯುಪಿಎಲ್‌ನಲ್ಲಿ ದಾಖಲೆ ಬರೆದ ನ್ಯಾಟ್-ಸ್ಕಿವರ್ ಬ್ರಂಟ್
ಮೆಗಾ ಹರಾಜಿಗೆ ಮುಂಬೈ ಇಂಡಿಯನ್ಸ್, ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಒಲವು ತೋರಿಲ್ಲ ಎಂದು ತಿಳಿದುಬಂದಿದೆ. ಮೆಗಾ ಹರಾಜು ನಡೆದರೆ ತಂಡದ ಸಂಯೋಜನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಾದಿಸಿವೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮೆಗಾ ಹರಾಜನ್ನು ಬೆಂಬಲಿಸುತ್ತಿವೆ. ಎರಡೂ ತಂಡಗಳು ಇನ್ನೂ ಫೈನಲ್ ತಲುಪಿಲ್ಲ ಮತ್ತು ಹರಾಜನ್ನು ತಮ್ಮ ತಂಡಗಳನ್ನು ಪುನರ್ನಿರ್ಮಿಸಲು ಒಂದು ಅವಕಾಶವಾಗಿ ನೋಡಿವೆ.