ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2025: ಡಬ್ಲ್ಯುಪಿಎಲ್‌ನಲ್ಲಿ ದಾಖಲೆ ಬರೆದ ನ್ಯಾಟ್-ಸ್ಕಿವರ್ ಬ್ರಂಟ್

ಆರ್‌ಸಿಬಿ ವಿರುದ್ಧ ಸೋತ ಮುಂಬೈ ನಾಳೆ(ಮಾ.13) ಗುಜರಾತ್‌ ಜೈಂಟ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯವನ್ನಾಡಲಿದೆ. ಗೆದ್ದರೆ ಮಾ.15 ರಂದು ನಡೆಯು ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಆರ್‌ಸಿಬಿ ವಿರುದ್ಧ ಮುಂಬೈ ನಿನ್ನೆಯ(ಮಂಗಳವಾರ) ಪಂದ್ಯದಲ್ಲಿ ಗೆಲ್ಲುತ್ತಿದ್ದರೆ ನೇರವಾಗಿ ಫೈನಲ್‌ ಪ್ರವೇಶಿಸುತ್ತಿತ್ತು.

ಡಬ್ಲ್ಯುಪಿಎಲ್‌ನಲ್ಲಿ ದಾಖಲೆ ಬರೆದ ನ್ಯಾಟ್-ಸ್ಕಿವರ್ ಬ್ರಂಟ್

Profile Abhilash BC Mar 12, 2025 11:03 AM

ಮುಂಬಯಿ: ಆರ್‌ಸಿಬಿ(RCBW vs MIW ) ವಿರುದ್ಧ ಮಂಗಳವಾರ ನಡೆದಿದ್ದ ಡಬ್ಲ್ಯುಪಿಎಲ್‌ನ(WPL 2025) ಕೊನೆಯ ಲೀಗ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ 11 ರನ್‌ ಅಂತರದ ಸೋಲು ಕಂಡರೂ ಕೂಡ ಈ ಪಂದ್ಯದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಅರ್ಧಶತಕ ಸಿಡಿಸಿದ ಇಂಗ್ಲೆಂಡ್‌ ಆಟಗಾರ್ತಿ ನ್ಯಾಟ್-ಸ್ಕಿವರ್ ಬ್ರಂಟ್(Nat Sciver-Brunt) ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್‌ ಬಾರಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಅವರು 35 ಎಸೆತಗಳಿಂದ 69 ರನ್‌ ಚಚ್ಚಿದ್ದರು.

ನ್ಯಾಟ್-ಸ್ಕಿವರ್ ಬ್ರಂಟ್ ಅವರಿಗೂ ಮುನ್ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್‌ ಕಲೆ ಹಾಕಿದ ದಾಖಲೆ ಆರ್‌ಸಿಬಿಯ ಎಲ್ಲಿಸ್‌ ಪೆರ್ರಿ ಹೆಸರಿನಲ್ಲಿತ್ತು. ಪೆರ್ರಿ ಇದೇ ಆವೃತ್ತಿಯಲ್ಲಿ 372 ರನ್‌ ಕಲೆ ಹಾಕಿದ್ದರು. ಆದರೆ ಈ ದಾಖಲೆ ಕೆಲವೇ ಗಂಟೆಗಳಲ್ಲಿ ಸ್ಕಿವರ್ ಬ್ರಂಟ್ ಮುರಿದರು. ಸದ್ಯ ಸ್ಕಿವರ್ ಬ್ರಂಟ್ 416* ರನ್‌ ಬಾರಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಎಲ್ಲಿಸ್‌ ಪೆರ್ರಿ 347 ರನ್‌ ಬಾರಿಸಿ ಅಗ್ರಸ್ಥಾನ ಪಡೆದಿದ್ದರು. 2023ರ ಚೊಚ್ಚಲ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕಿ ಮೆಗ್‌ ಲ್ಯಾನಿಂಗ್‌(345) ಅಗ್ರಸ್ಥಾನ ಗಳಿಸಿದ್ದರು.

ಇದನ್ನೂ ಓದಿ WPL 2025: ಮುಂಬೈ ವಿರುದ್ಧ ಗೆದ್ದು ಟೂರ್ನಿಯ ಅಭಿಯಾನ ಮುಗಿಸಿದ ಆರ್‌ಸಿಬಿ!

ಆರ್‌ಸಿಬಿ ವಿರುದ್ಧ ಸೋತ ಮುಂಬೈ ನಾಳೆ(ಮಾ.13) ಗುಜರಾತ್‌ ಜೈಂಟ್ಸ್‌ ವಿರುದ್ಧ ಎಲಿಮಿನೇಟರ್‌ ಪಂದ್ಯವನ್ನಾಡಲಿದೆ. ಗೆದ್ದರೆ ಮಾ.15 ರಂದು ನಡೆಯು ಫೈನಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಆರ್‌ಸಿಬಿ ವಿರುದ್ಧ ಮುಂಬೈ ನಿನ್ನೆಯ(ಮಂಗಳವಾರ) ಪಂದ್ಯದಲ್ಲಿ ಗೆಲ್ಲುತ್ತಿದ್ದರೆ ನೇರವಾಗಿ ಫೈನಲ್‌ ಪ್ರವೇಶಿಸುತ್ತಿತ್ತು.



ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರ ಅರ್ಧಶತಕದ ಬಲದಿಂದ 3 ವಿಕೆಟ್‌ಗೆ 199 ರನ್‌ ಬಾರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈನ್ಯಾಟ್‌ ಸೀವರ್‌ ಬ್ರಂಟ್‌ (69 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಹೋರಾಟದ ಹೊರತಾಗಿಯೂ 20 ಓವರ್‌ಗಳಿಗೆ 9 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಲಷ್ಟೇ ಶಕ್ತವಾಯಿತು.