ಮಹಿಳಾ ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ತಂಡ ಪ್ರಕಟ!
ಸೆಪ್ಟಂಬರ್ 30 ರಿಂದ ನವೆಂಬರ್ 2ರವರೆಗೆ ನಡೆಯುವ 2025ರ ಮಹಿಳಾ ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಶ್ರೀಲಂಕಾ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಚಮರಿ ಅಟಪಟ್ಟುಗೆ ನಾಯಕತ್ವವನ್ನು ನೀಡಲಾಗಿದೆ. ತಂಡದ ಅತ್ಯಂತ ಹೆಚ್ಚಿನ ಅನುಭವವನ್ನು ಹೊಂದಿರುವ ಚಮರಿ ಅಟಪಟ್ಟು 3877 ರನ್ ಹಾಗೂ 45 ವಿಕೆಟ್‌ಗಳನ್ನು ಕಿತ್ತಿದ್ದಾರೆ.