ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Karnataka Floods: ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಿಸಿ: ಎಚ್.ಡಿ. ಕುಮಾರಸ್ವಾಮಿ ಆಗ್ರಹ

ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಿಸಿ: ಎಚ್‌ಡಿಕೆ ಆಗ್ರಹ

HD Kumaraswamy: ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇವತ್ತು ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಸರ್ಕಾರದ ವಿರುದ್ಧ ಟೀಕೆಗಳು ಶುರುವಾದ ಮೇಲೆ ಮುಖ್ಯಮಂತ್ರಿಗಳು ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ಏರಿಯಲ್‌ ಸರ್ವೇ ಮಾಡಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ 3 ತಿಂಗಳಿಂದ ಈ ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Blackmail Case: ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ 8 ಲಕ್ಷ ವಸೂಲಿ; ಇಬ್ಬರ ವಿರುದ್ಧ ಎಫ್‌ಐಆರ್‌

ಮಹಿಳೆಯ ಖಾಸಗಿ ವಿಡಿಯೋ ಇಟ್ಕೊಂಡು ಬ್ಲ್ಯಾಕ್‌ಮೇಲ್‌; ಕೇಸ್‌ ದಾಖಲು

Bengaluru News: ಮಹಿಳೆ ಬಳಿ ಕಷ್ಟ ಎಂದು ಹೇಳಿಕೊಂಡು ಆರೋಪಿಯೊಬ್ಬ 4 ಲಕ್ಷ ರೂ. ಹಣ ಪಡೆದಿದ್ದ. ಆದರೆ, ಮಹಿಳೆ ಹಣ ವಾಪಸ್ ಕೇಳಿದಾಗ ಆಕೆಯ ಖಾಸಗಿ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ನಂತರ ಹೆಚ್ಚುವರಿ 4 ಲಕ್ಷಕ್ಕೂ ಅಧಿಕ ಪಡೆದಿದ್ದಾನೆ. ಹೀಗಾಗಿ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Star Fashion 2025: ಭರತ್ ಸಾಗರ್ ಡಿಸೈನರ್‌ವೇರ್‌ನಲ್ಲಿ ಕಿಚ್ಚ ಸುದೀಪ್ ಅತ್ಯಾಕರ್ಷಕ ಲುಕ್

ಭರತ್ ಸಾಗರ್ ಡಿಸೈನರ್‌ವೇರ್‌ನಲ್ಲಿ ಕಿಚ್ಚ ಸುದೀಪ್ ಅತ್ಯಾಕರ್ಷಕ ಲುಕ್

Star Fashion 2025: ಕನ್ನಡ ಬಿಗ್‌ ಬಾಸ್ ರಿಯಾಲಿಟಿ ಶೋ ನ ಆರಂಭದ ಎಪಿಸೋಡ್‌ನಲ್ಲಿ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್ ವಿಶೇಷ ಔಟ್‌ಫಿಟ್‌ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಏನಿದು ಸ್ಪೆಷಲ್ ಔಟ್‌ಫಿಟ್ಸ್? ಇದರ ವಿಶೇಷತೆಯೇನು? ಈ ಕುರಿತಂತೆ ಖುದ್ದು ಡಿಸೈನರ್ ವಿಶ್ವವಾಣಿ ಟಿವಿ ಸ್ಪೆಷಲ್‌ಗೆ ವಿವರಿಸಿದ್ದಾರೆ.

‌ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ; ಇಬ್ಬರು ಅರೆಸ್ಟ್, ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್‌!

ವೇಶ್ಯಾವಾಟಿಕೆ ದಂಧೆ; ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್‌!

ಮೈಸೂರಿನ ಒಡನಾಡಿ ಸಂಸ್ಥೆಯ ಪರಶು ಮತ್ತು ಸ್ಟಾನ್ಲಿ ನೀಡಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರನ್ನು ಬಂಧಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದ ಬೆಂಗಳೂರಿನ ಶೋಭಾ ಮತ್ತು ತುಳಸಿಕುಮಾರ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

Movie Ticket Price: ಟಿಕೆಟ್ ದರ ಗರಿಷ್ಠ 200 ರೂ. ಮಿತಿ; ಸರ್ಕಾರದ ಪರ ಅಂತಿಮ ತೀರ್ಪು ಬಂದರೆ ಪ್ರೇಕ್ಷಕರಿಗೆ ಹೆಚ್ಚುವರಿ ಹಣ ವಾಪಸ್‌

ಸಿನಿಮಾ ಟಿಕೆಟ್ ಏಕರೂಪ ದರ; ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​ಗೆ ನೋಟಿಸ್

High Court : ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟ ಮಾಡಿ ಸಂಗ್ರಹಿಸುವ ಹಣದ ಲೆಕ್ಕವನ್ನು ನಿರ್ವಹಿಸಬೇಕು. ಒಂದೊಮ್ಮೆ ನಿಯಮವನ್ನು ಪೀಠ ಎತ್ತಿಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಆದೇಶಿಸಿದೆ.

Kalaburagi News: ಕಲಬುರಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ. ವಿಜಯೇಂದ್ರ ಭೇಟಿ

ಕಲಬುರಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ.ವಿ ಭೇಟಿ

BY Vijayendra: ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಹೊನಗುಂಟದಲ್ಲಿ ಅತಿವೃಷ್ಟಿಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭೇಟಿ ನೀಡಿದರು.

Govinda Karajola: ಜಾತಿಗಣತಿ ವಿಷಯದಲ್ಲಿ ಗೊಂದಲ ಮೂಡಿಸುತ್ತಿದೆ ರಾಜ್ಯ ಸರ್ಕಾರ, ಕಾಂಗ್ರೆಸ್ ಹೈಕಮಾಂಡ್- ಗೋವಿಂದ ಕಾರಜೋಳ

ಜಾತಿಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ- ಗೋವಿಂದ ಕಾರಜೋಳ

Govinda Karajola: ಜಾತಿ ಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ಗೊಂದಲ ಮೂಡಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Hassan blast: ಹಾಸನದಲ್ಲಿ ನಿಗೂಢ ಸ್ಫೋಟ, ದಂಪತಿ ತೀವ್ರ ಗಾಯ, ಮಕ್ಕಳು ಪಾರು

ಹಾಸನದಲ್ಲಿ ನಿಗೂಢ ಸ್ಫೋಟ, ದಂಪತಿ ತೀವ್ರ ಗಾಯ, ಮಕ್ಕಳು ಪಾರು

Blast: ಸ್ಫೋಟದ ತೀವ್ರತೆಗೆ ಇಡೀ ಮನೆಯೇ ಧ್ವಂಸವಾಗಿದೆ. ಮನೆಯ ಹೊರಗಡೆ ಈ ಸ್ಫೋಟ ಆಗಿದ್ದು, ಮನೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಕಾಂಪೌಂಡ್‌ ಕುಸಿದುಬಿದ್ದಿದೆ. ಸ್ಫೋಟದ ತೀವ್ರತೆ ನೋಡಿದರೆ ಇದು ಜಿಲೆಟಿನ್‌ ಅಥವಾ ಡಿಟೋನೇಟರ್‌ ಇರಬಹುದೇ ಎಂಬ ಅನುಮಾನ ಮೂಡಿದೆ. ಇಬ್ಬರು ಗಾಯಗೊಂಡಿದ್ದಾರೆ.

North Karnataka Floods: ಕಲಬುರಗಿ ಸೇರಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ

ಪ್ರವಾಹ ಹಾನಿ; ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ

Kalaburagi News: ಕಲಬುರಗಿ ವಿಮಾನ ನಿಲ್ದಾಣದಲ್ಲೇ ಪ್ರಾಥಮಿಕ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಅಧಿಕಾರಿಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರವಾಹ ಹಾನಿ ವಿವರಗಳನ್ನು ಪಡೆದರು.

Mahesh Shetty Timarodi: ಸದ್ಯಕ್ಕಿಲ್ಲ ಗಡಿಪಾರು; ಮಹೇಶ್‌ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್‌

ಸದ್ಯಕ್ಕಿಲ್ಲ ಗಡಿಪಾರು; ಮಹೇಶ್‌ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್‌

ದಕ್ಷಿಣ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ತಮ್ಮನ್ನು ಗಡೀಪಾರು ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಮಹೇಶ್‌ ಶೆಟ್ಟಿ ತಿಮರೋಡಿಗೆ ಸದ್ಯಕ್ಕೆ ರಿಲೀಫ್‌ ಸಿಕ್ಕಿದೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಜೈಲು ಸವಲತ್ತುಗಳಿಗೆ ಕೋರಿದ ದರ್ಶನ್‌ ಅರ್ಜಿ ಅ.9ಕ್ಕೆ ಮುಂದೂಡಿಕೆ

ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ದರ್ಶನ್ ಸಲ್ಲಿಸಿದ್ದಾರೆ. ಕೋರ್ಟಿಗೆ ಜೈಲು ಅಧೀಕ್ಷಕ ಸುರೇಶ್ ಖುದ್ದು ಹಾಜರಾಗಿ ಸಂಪೂರ್ಣ ವರದಿ ಸಲ್ಲಿಸಿದರು. ಕ್ವಾರಂಟೈನ್ ಸೆಲ್‌ನಿಂದ ಬ್ಯಾರಕ್‌ಗೆ ಸ್ಥಳಾಂತರಿಸಲು ನಟ ದರ್ಶನ್ ಕೋರಿದ್ದಾರೆ. ವಾಕ್ ಮಾಡಲು ಕಡಿಮೆ ಸಮಯ ಜಾಗ ನೀಡಿದ್ದಾರೆ. ಜೈಲಾಧಿಕಾರಿಗಳು ಕೋರ್ಟ್ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ.

Bank Holidays: ಗ್ರಾಹಕರೇ ಗಮನಿಸಿ; ಅಕ್ಟೋಬರ್‌ನಲ್ಲಿ ಈ ದಿನಗಳು  ಬ್ಯಾಂಕ್‌ ಓಪನ್‌ ಇರುವುದಿಲ್ಲ

ಅಕ್ಟೋಬರ್‌ನಲ್ಲಿ ಈ ದಿನಗಳು ಬ್ಯಾಂಕ್‌ ಓಪನ್‌ ಇರುವುದಿಲ್ಲ

ಅಕ್ಟೋಬರ್‌ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರಲಿದೆ. ಬ್ಯಾಂಕ್‌ನಲ್ಲಿ (Bank Holidays) ವಹಿವಾಟು ನಡೆಸುವವರು ರಜೆಗಳ ಕುರಿತು ತಿಳಿದುಕೊಳ್ಳಬೇಕು. ದಸರಾದಿಂದ ದೀಪಾವಳಿಯವರೆಗೆ, ಬ್ಯಾಂಕುಗಳು ಬಹು ದಿನಗಳು ಬ್ಯಾಂಕ್‌ಗೆ ರಜೆ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಕ್ಟೋಬರ್ ತಿಂಗಳ ಅಧಿಕೃತ ರಜಾ ಕ್ಯಾಲೆಂಡರ್ ಅನ್ನು ಪ್ರಕಟಿಸಿದೆ.

Gold Rate Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 30th Sep 2025: 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 130ರೂ. ಏರಿಕೆಯಾಗಿ 10,845 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 92ರೂ. ಏರಿಕೆಯಾಗಿ 11,831 ರೂ. ಪಾವತಿಸಬೇಕು.

Bus Ticket Price: ದಸರಾ ದುಬಾರಿ: ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಹೆಚ್ಚಳ, ಖಾಸಗಿ ಬಸ್ಸುಗಳಲ್ಲೂ ಏರಿಕೆ

ದಸರಾ ದುಬಾರಿ: ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಹೆಚ್ಚಳ, ಖಾಸಗಿಯೂ ಏರಿಕೆ

ಕೆಎಸ್ಆರ್ಟಿಸಿ ನಿಗಮವು ದಸರಾ ಸಂದರ್ಭದಲ್ಲಿ ಬೇರೆ ಡಿಪೋಗಳಿಂದ ಹೆಚ್ಚುವರಿ ಬಸ್ಸುಗಳನ್ನು ಪಡೆದು ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಬೆಂಗಳೂರು ಟು ಮೈಸೂರು ಹೋಗುವಾಗ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಮೈಸೂರಿನಿಂದ ವಾಪಸ್ಸು ಬರುವಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಈ ನಷ್ಟವನ್ನು ಸರಿದೂಗಿಸಲು ಈ ದರ ಏರಿಕೆ ಮಾಡಲಾಗಿದೆ.

CM Siddaramaiah: ಅಕ್ರಮ ಕಟ್ಟಡಗಳಿಗೆ ವಿದ್ಯುತ್‌, ನೀರು ಸಕ್ರಮ: ಸಚಿವ ಸಂಪುಟ ತೀರ್ಮಾನ

ಅಕ್ರಮ ಕಟ್ಟಡಗಳಿಗೆ ವಿದ್ಯುತ್‌, ನೀರು ಸಕ್ರಮ: ಸಚಿವ ಸಂಪುಟ ತೀರ್ಮಾನ

Bengaluru: ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ನಿರ್ಮಾಣಗೊಂಡಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಸರ್ಕಾರದ ನಿರ್ಧಾರದಿಂದ ಜನರಿಗೆ ಅನುಕೂಲವಾಗಬೇಕು ಎಂದು ಸಿಎಂ ತಿಳಿಸಿದ್ದಾರೆ.

Prajwal Revanna case: ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಪ್ರಜ್ವಲ್‌ ರೇವಣ್ಣ

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರಜ್ವಲ್‌ ರೇವಣ್ಣ ಮೇಲ್ಮನವಿ

High court: ಫಾರ್ಮ್ ಹೌಸ್‌ನಲ್ಲಿ 47 ವರ್ಷದ ಮಹಿಳೆಯನ್ನು ಪ್ರಜ್ವಲ್ ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸ್ಪೆಷಲ್ ಕೋರ್ಟ್ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು, ಪ್ರಜ್ವಲ್ ಅವರನ್ನು ದೋಷಿಯೆಂದು ಘೋಷಿಸಿ, ಜೀವಿತಾವಧಿ ಜೈಲು ಮತ್ತು ₹11.50 ಲಕ್ಷ ದಂಡ ವಿಧಿಸಿದ್ದರು.

caste census: ಬೆಂಗಳೂರಿನಲ್ಲಿ ಜಾತಿವಾರು ಸಮೀಕ್ಷೆ ಅ.3ರಿಂದ ಆರಂಭ

ಬೆಂಗಳೂರಿನಲ್ಲಿ ಜಾತಿವಾರು ಸಮೀಕ್ಷೆ ಅ.3ರಿಂದ ಆರಂಭ

Bengaluru: ಬೆಂಗಳೂರು ನಗರದ 30 ಕೇಂದ್ರಗಳಲ್ಲಿ ಸೋಮವಾರ ಗಣತಿದಾರರಿಗೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. "ಸಮೀಕ್ಷಾ ತಂಡದ ತರಬೇತಿ ಕಾರ್ಯಕ್ರಮವು ಅಕ್ಟೋಬರ್ 3ರ ಮೊದಲು ಪೂರ್ಣಗೊಳ್ಳಲಿದೆ, ತಂಡಗಳು ವಾರ್ಡ್ ಮತ್ತು ವಿಭಾಗ ಮಟ್ಟದಲ್ಲಿ ಹರಡಿ ಸಮೀಕ್ಷೆಯನ್ನು ನಡೆಸುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Bengaluru traffic: ವರ್ಕ್‌ ಫ್ರಂ ಹೋಮ್‌ ಅಂತ್ಯ, ನಾಳೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ದುಪ್ಪಟ್ಟು

ವರ್ಕ್‌ ಫ್ರಂ ಹೋಮ್‌ ಅಂತ್ಯ, ನಾಳೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ ಡಬಲ್

Bengaluru: ಕಳೆದ ವರ್ಷದ ಅಂಕಿ-ಅಂಶದ ಆಧಾರದಲ್ಲಿ ಪ್ರತಿನಿತ್ಯ ಸುಮಾರು 82 ಸಾವಿರ ವಾಹನಗಳು ಔಟರ್​ ರಿಂಗ್​ ರೋಡ್ ಮೂಲಕ ಸಂಚರಿಸಿದ್ದವು. ಈ ವರ್ಷದಲ್ಲಿ ಅವುಗಳ ಸಂಖ್ಯೆ ಸುಮಾರು 1 ಲಕ್ಷದ 20 ಸಾವಿರಕ್ಕೆ ಹೆಚ್ಚಿತ್ತು. ಈಗ ವರ್ಕ್​ ಫ್ರಮ್​ ಹೋಮ್​ ಕ್ಯಾನ್ಸಲ್​ ಆಗುತ್ತಿರುವ ಕಾರಣ ಅಕ್ಟೋಬರ್ 1ರಿಂದ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Bengaluru: ಅ.2ರಂದು ಬೆಂಗಳೂರಿನಲ್ಲಿ ಪ್ರಾಣಿವಧೆ,  ಮಾಂಸ ಮಾರಾಟ ನಿಷೇಧ

ಅ.2ರಂದು ಬೆಂಗಳೂರಿನಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ

“ಗಾಂಧಿ ಜಯಂತಿ” ಪ್ರಯುಕ್ತ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater bengaluru) ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರು(ಆರೋಗ್ಯ & ಶಿಕ್ಷಣ) ರವರು ತಿಳಿಸಿದ್ದಾರೆ.

SL Bhyrappa Will Exclusive: ಕುಟುಂಬ ವ್ಯಾಮೋಹ ಮೀರಿದ ಭೈರಪ್ಪ-ಅಂತಿಮ ಉಯಿಲು ಬಹಿರಂಗ ‌

ಭೈರಪ್ಪನವರ ಅಂತಿಮ ಉಯಿಲು ಬಹಿರಂಗ ‌

ತಮ್ಮ ಚರ ಮತ್ತು ಸ್ಥಿರ ಆಸ್ತಿ 2025ರ ಜನವರಿ 30ರ ತಿದ್ದುಪಡಿ ಉಯಿಲಿನಲ್ಲಿ ತಮ್ಮ ಸಮಸ್ತ ಆಸ್ತಿಯೂ ಎಸ್.ಎಲ್.ಭೈರಪ್ಪ ಪ್ರತಿಷ್ಠಾನದ ಕಾರ್ಯಚಟುವಟಿಕೆಗೆ ಬಳಕೆಯಾಗಬೇಕು ಎಂದು ಬರೆದಿರುವ ಭೈರಪ್ಪ ಅವರು, ಅರುಣ ಅವರಿಗೆ 50 ಲಕ್ಷ ರು. ಕೊಡುಗೆ(ಗಿಫ್ಟ್) ನೀಡಿದ್ದಾರೆ. ಈ ೫೦ ಲಕ್ಷ ರು. ಹೊರತುಪಡಿಸಿ, ಇನ್ಯಾವುದೇ ಆಸ್ತಿ, ನಗದನ್ನು ವೈಯಕ್ತಿಕ ಕಾರ್ಯಕ್ಕೆ ಅರುಣ ಅವರು ಬಳಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

Karnataka Weather: ಹವಾಮಾನ ವರದಿ; ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಹವಾಮಾನ ವರದಿ; ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29°C ಮತ್ತು 20°C ಆಗುವ ಸಾಧ್ಯತೆ ಇದೆ.

Government job age limit: ರಾಜ್ಯ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್; ನೇರ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ

ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ

Job News: ಹಲವಾರು ಜನಪ್ರತಿನಿದಿಗಳು ಮತ್ತು ಸಂಘ ಸಂಸ್ಥೆಗಳು ಮನವಿ ಸಲ್ಲಿಸಿ, ರಾಜ್ಯ ಸಿವಿಲ್ ಸೇವೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡುವಂತೆ ಕೋರಿದ್ದವು. ಈ ಮನವಿಗಳನ್ನು ಸರ್ಕಾರವು ಪರಿಶೀಲಿಸಿ ಒಂದು ಬಾರಿಗೆ ಮಾತ್ರ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲು ತೀರ್ಮಾನಿಸಿದೆ.

Death Penalty: ಬಾಲಕಿ ಮೇಲೆ ಅತ್ಯಾಚಾರ; ಕೊಲೆ ಆರೋಪಿಗೆ ಮರಣ ದಂಡನೆ

ಅತ್ಯಾಚಾರ, ಕೊಲೆ ಆರೋಪಿಗೆ ಮರಣ ದಂಡನೆ

ಬೆಳಗಾವಿಯ ರಾಯ್‌ಬಾಗ್ ತಾಲೂಕಿನ ಭರತೇಶ್ ರಾವ್ ಸಾಬ್ ಮಿರ್ಜಿ ಎಂಬಾತ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದು, ಆತನಿಗೆ ಪೋಸ್ಕೊ ಕಾಯ್ದೆಯಡಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಘಟನೆ 2019ರ ಅಕ್ಟೋಬರ್‌ನಲ್ಲಿ ನಡೆದಿತ್ತು.

ಅಲ್ಪಸಂಖ್ಯಾತ ಇಲಾಖೆ ಮದರಸಾಗೆ 5 ಲಕ್ಷ ರೂ ಅನುದಾನ ನೀಡಿರುವ ಕುರಿತು ಕಾನೂನಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ: ಹೈಕೋರ್ಟ್ ಆದೇಶ

ಕಾನೂನಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಿ

ಪ್ರಕರಣದಲ್ಲಿ ಅರ್ಜಿದಾರರ ಆರೋಪಗಳ ಸತ್ಯಾಸತ್ಯತೆ ಕುರಿತು ನ್ಯಾಯಾಲಯ ಯಾವುದೇ ಅಭಿಪ್ರಾಯ ನೀಡುವುದಿಲ್ಲ. 5 ಲಕ್ಷ ರೂ ವಾಪಸು ಪಡೆಯುವ ವಿಷಯ ಸೇರಿದಂತೆ ಎಲ್ಲಾ ಅಂಶಗಳನ್ನು ಕಾನೂನಿನ ಪ್ರಕಾರ ಪರಿಶೀಲಿಸಬೇಕು, ಅನಗತ್ಯವಾಗಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ

Loading...