ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

North Karnataka Floods: ಕಲಬುರಗಿ ಸೇರಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ

Kalaburagi News: ಕಲಬುರಗಿ ವಿಮಾನ ನಿಲ್ದಾಣದಲ್ಲೇ ಪ್ರಾಥಮಿಕ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಅಧಿಕಾರಿಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರವಾಹ ಹಾನಿ ವಿವರಗಳನ್ನು ಪಡೆದರು.

ಪ್ರವಾಹ ಹಾನಿ; ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ

-

Prabhakara R Prabhakara R Sep 30, 2025 2:34 PM

ಕಲಬುರಗಿ: ಭೀಮಾ ತೀರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಂಟಾದ ಹಾನಿಯನ್ನು (North Karnataka Floods) ಪರಿಶೀಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಕಲಬುರಗಿ ವಿಮಾನ ನಿಲ್ದಾಣಲ್ಲೇ ಪ್ರಾಥಮಿಕ ಸಭೆ ನಡೆಸಿದ ಸಿಎಂ ಅವರು, ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಅಧಿಕಾರಿಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರವಾಹ ಹಾನಿ ವಿವರಗಳನ್ನು ನೀಡಿದರು.

ಸಭೆಯ ನಂತರ ಸಿದ್ದರಾಮಯ್ಯ ಅವರು ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮೊದಲ ಸುತ್ತಿನ ವೈಮಾನಿಕ ಸಮೀಕ್ಷೆಗೆ ತೆರಳಿದರು. ನಂತರ ಮಧ್ಯಾಹ್ನ 2:30 ರ ಸುಮಾರಿಗೆ ಬೀದರ್ ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ಎರಡನೇ ಸುತ್ತಿನ ವೈಮಾನಿಕ ಸಮೀಕ್ಷೆ ನಡೆಸಿ, ಹಾನಿಯ ಗಂಭೀರತೆ ಮತ್ತು ಪರಿಹಾರದ ಅಗತ್ಯಗಳನ್ನು ನೇರವಾಗಿ ಪರಿಶೀಲಿಸಿದರು.



ಬೆಳೆ ಹಾನಿ ಹೆಚ್ಚಳ: ತುರ್ತು ಪರಿಹಾರದ ಬಗ್ಗೆ ಸಿಎಂ ತೀರ್ಮಾನ ಎಂದ ಕೃಷಿ ಸಚಿವ

ಕಲಬುರಗಿ: ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಮಳೆಯಿಂದ ಬೆಳೆ ಹಾನಿ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ತುರ್ತು ಪರಿಹಾರ ನೀಡುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ, ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶುಭ ಸುದ್ದಿ ನೀಡಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.

ಮಂಗಳವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರಕೃತಿ ನಮ್ಮ ನಿಯಂತ್ರಣದಲ್ಲಿ ಇಲ್ಲ. ಪ್ರಕೃತಿ ವಿಕೋಪದಿಂದ ಉಂಟಾಗುತ್ತಿರುವ ನಷ್ಟದ ಕುರಿತು ನಾವು ತಕ್ಷಣ ಚರ್ಚಿಸಬೇಕು. ಈಗಾಗಲೇ 1–2 ಲಕ್ಷ ಹಕ್ಟೇರ್ ಬೆಳೆ ಹಾನಿಯಾಗಿದೆ. ಆದರೆ ಜಮೀನಿನಲ್ಲಿ ನೀರು ಇರುವುದರಿಂದ ಸಮೀಕ್ಷೆಗೆ ತೊಂದರೆ ಎದುರಾಗಿದೆ. ತ್ವರಿತವಾಗಿ ಸಮೀಕ್ಷೆ ಮಾಡಿ, ರೈತರಿಗೆ ಪರಿಹಾರ ನೀಡಲಾಗುವುದು. ಈ ಭಾಗದಲ್ಲಿ 9 ಲಕ್ಷ ಹಕ್ಟೇರ್ ಭೂಮಿ ಮೇಲೆ ಬೆಳೆ ಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ತುರ್ತು ಪರಿಹಾರವು ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕೇಂದ್ರದ ನೀತಿಯ ಪರಿಣಾಮದಿಂದ ಕೆಲವು ತಡತೆಗಳು ಎದುರಾಗಿದ್ದರೂ ಶೀಘ್ರದಲ್ಲಿಯೇ ಪರಿಹಾರದ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.



ಬಿಜೆಪಿ ಅವರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಬಿ.ವೈ. ವಿಜಯೇಂದ್ರ ಅವರ ಪೂಜ್ಯ ಅಪ್ಪಾಜಿ ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಗೆ ಬಂದು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡದೇ ವಿಮಾನ ನಿಲ್ದಾಣದಿಂದ ವಾಪಸ್ ಹೋದದ್ದು ನೆನಪಿಲ್ಲವೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.

ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ಕಷ್ಟ ನೋಡುವುದು ನಾಯಕನ ಧರ್ಮ. ಅದನ್ನು ನಿರ್ಲಕ್ಷಿಸುವುದು ಅತೀವ ಬೇಸರಕಾರಿ. ಹಿಂದೆ ಯಡಿಯೂರಪ್ಪ ಅವರು ಕಲಬುರಗಿಗೆ ಬಂದಾಗ ಸಮೀಕ್ಷೇನೂ ಮಾಡಿಲ್ಲ. ಅಧಿಕಾರಿಗಳ ಜತೆಗೆ ಸಭೆಯು ನಡೆಸದೆ ವಾಪಾಸ್ಸಾಗಿದ್ದರು. ಬಿಜೆಪಿ ಅವರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ. ನಮ್ಮ ಎಲ್ಲ ಶಾಸಕರು ಕೇಂದ್ರ ಸ್ಥಾನದಲ್ಲೇ ಇದ್ದು, ಎಲ್ಲವನ್ನೂ ಗಮನಿಸುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | caste census: ಬೆಂಗಳೂರಿನಲ್ಲಿ ಜಾತಿವಾರು ಸಮೀಕ್ಷೆ ಅ.3ರಿಂದ ಆರಂಭ

ನಿಮ್ಮ ಪೂಜ್ಯ ಅಪ್ಪಾಜಿ ಪರಿಹಾರಕ್ಕೆ ನೋಟ್‌ ಪ್ರಿಂಟ್‌ ಮಷೀನ್ ಇಲ್ಲ ಎಂದಿದ್ದರು. ಬಿಜೆಪಿ ನಾಯಕರಿಂದ ರೈತರ ಬಗ್ಗೆ ಪಾಠ ಕೇಳುವ ದರ್ದು ನಮಗಿಲ್ಲ. ರಾಜ್ಯದಷ್ಟೇ, ಅತೀವೃಷ್ಟಿಯ ಬಗ್ಗೆ ಕೇಂದ್ರ ಸರಕಾರದ ಜವಾಬ್ದಾರಿ ಇದೆ. ಎನ್.ಡಿ.ಆರ್.ಎಫ್ ನಿಯಮದಡಿ ಪರಿಹಾರ ನೀಡಲಿ, ಕೇಂದ್ರ ಸರಕಾರ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದೆ. ನಾವು ಪ್ರತಿವರ್ಷ 4.5 ಲಕ್ಷ ಕೋಟಿ ರೂ. ತೆರಿಗೆ ಕೊಡುತ್ತೇವೆ, 11 ವರ್ಷ ಕಳೆದರೂ ರಾಜ್ಯಕ್ಕೆ ಏನು ಬಂದಿದೆ ಎಂದು ಪ್ರಶ್ನಿಸಿದ್ದಾರೆ.