ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಮಾತನಾಡುವ ವೇಳೆ ಸಿಎಂ ಸಿದ್ದರಾಮಯ್ಯ ಅವರು, ತಾವು ಜೆಡಿಎಸ್‌ನಲ್ಲಿದ್ದ ವೇಳೆ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ನನ್ನನ್ನು ಉಚ್ಚಾಟನೆ ಮಾಡಿದರು ಎಂದು ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಸುನೀಲ್ ಕುಮಾರ್, ನಿಮ್ಮ ರಾಷ್ಟ್ರೀಯ ಅಧ್ಯಕ್ಷರ ಮಾತನ್ನೇ ನೀವು ಕೇಳಿಲ್ಲ, ಈಗಲೂ ನೀವು ಕಾಂಗ್ರೆಸ್ ಹೈಕಮಾಂಡ್ ಮಾತು ಕೇಳಬಾರದು, ಈ ರಾಜ್ಯದ ನಂಬರ್ ಒನ್ ನೀವು, ಥೂ ಅಂತ ಬಿಸಾಕಬೇಕು ಎಂದು ವ್ಯಂಗ್ಯವಾಡಿದರು. ಈ ವೇಳೆ ತಿರುಗೇಟು ನೀಡಿದ ಸಿಎಂ ಅವರು, ನಿನಗೆ ದಮ್ ಇದ್ದರೆ ಮೋದಿ ಅವರಿಗೆ ಥೂ ಅಂತ ಹೇಳು ನೋಡೋಣ, ದಮ್ ಇದ್ದರೆ ಮೋದಿ ಅವರ ಮಾತು ಕೇಳಲ್ಲ ಎಂದು ಹೇಳು ನೋಡೋಣ ಎಂದು ಸವಾಲು ಹಾಕಿದರು.