ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೀಡಿಯೋಸ್

Fact Check: ಬಾಕಿ ತೆರಿಗೆ ಪಾವತಿಸುವಂತೆ ನಿಮಗೂ ಮೆಸೇಜ್ ಬಂದಿದೆಯಾ? 6,000 ರುಪಾಯಿ ನೋಟಿಸ್‌ ಕುರಿತು ಕೇಂದ್ರದಿಂದ ಎಚ್ಚರಿಕೆ

6,000 ರುಪಾಯಿ ತೆರಿಗೆ ನೋಟಿಸ್ ನಕಲಿ: PIB Fact Check ಸ್ಪಷ್ಟನೆ

PIB Fact Check: ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ 6,000 ರುಪಾಯಿ ತೆರಿಗೆ ಬಾಕಿ ಪಾವತಿಸುವಂತೆ ಹರಿದಾಡುತ್ತಿರುವ ನೋಟಿಸ್ ನಕಲಿ ಎಂದು PIB Fact Check ಸ್ಪಷ್ಟಪಡಿಸಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಹಾಗೂ ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ಇದು ವಯಸ್ಸಾಗದಂತೆ ತಡೆಯುವ ಮ್ಯಾಜಿಕ್‌ ತೈಲ; ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆ? Video

ಚರ್ಮ ಸುಕ್ಕು ಹೋಗಲಾಡಿಸುವುದು ಹೇಗೆ ? ಇಲ್ಲಿದೆ ಟಿಪ್ಸ್

ಇತ್ತೀಚಿನ ದಿನಗಳಲ್ಲಿ ಚರ್ಮದ ತೊಂದರೆಗಳು ಸಾಕಷ್ಟು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಹಲವಾರು ಇದ್ದರೂ ಪರಿಹಾರವೂ ಇದೆ. ನಾಲ್ಪಮರಡಿ ತೈಲ ಸಾಕಷ್ಟು ಜನಪ್ರಿಯತೆಗಳಿಸುತ್ತಿದೆ. ಇದನ್ನು ಮನೆಯಲ್ಲೇ ಕೆಲವೇ ಕೆಲವು ವಸ್ತುಗಳನ್ನು ಬಳಸಿ ಅತ್ಯಂತ ಸುಲಭವಾಗಿ ತಯಾರಿಸಿಕೊಳ್ಳಬಹುದು. ಅದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ.

Vishwavani Health: ಬಿಳಿ ಕೂದಲನ್ನು ಕಪ್ಪು ಮಾಡುತ್ತೆ ಈ ಒಂದು ಮ್ಯಾಜಿಕ್‌ ಸೊಪ್ಪು; ಕಾಡಲ್ಲಿ ಮಾತ್ರವಲ್ಲ ನಾಡಲ್ಲೂ ಸಿಗುತ್ತೆ! ವಿಡಿಯೊ ನೋಡಿ Video

ಕೂದಲಿನ ಆರೈಕೆಗೆ ಹೊನ್ನಿನ ಗುಣವುಳ್ಳ ಸೊಪ್ಪು ಯಾವುದು ಗೊತ್ತೇ?

ಕೂದಲು ಉದುರುವುದು, ಬಾಲ ನೆರೆ ಸೇರಿದಂತೆ ಕೂದಲಿನ ನಾನಾ ರೀತಿಯ ತೊಂದರೆ ಇದ್ದವರು ಈ ಒಂದು ಸೊಪ್ಪನ್ನು ಬಳಸಿ ನಿವಾರಣೆ ಮಾಡಿಕೊಳ್ಳಬಹುದು. ಆ ಸೊಪ್ಪು ಯಾವುದು, ಅದರಿಂದ ಕಾಡಿಗೆ, ಹೇರ್ ಆಯಿಲ್, ಹೇರ್ ಪ್ಯಾಕ್ ತಯಾರಿಸುವುದು ಹೇಗೆ ಎನ್ನುವ ಕುರಿತು ಆಯುರ್ವೇದ ಸೌಂದರ್ಯ ತಜ್ಞರಾದ ದೀಪಾ ನಾಗೇಶ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

Vishwavani Health: ಮಳೆಗಾಲದಲ್ಲಿ ಮಧುಮೇಹಿಗಳು ವಹಿಸಲೇಬೇಕಾದ ಎಚ್ಚರಿಕೆ ಏನು? ಇಲ್ಲಿದೆ ತಜ್ಞರ ಸಲಹೆ Video

ಮಳೆಗಾಲದಲ್ಲಿ ಮಧುಮೇಹಿಗಳಿಗೆ ಕಾಡುವ ಆರೋಗ್ಯ ಸಮಸ್ಯೆಗಳು

ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಸ್ವಲ್ಪ ನಿರ್ಲಕ್ಷವು ಅಪಾಯಕಾರಿಯಾಗಬಹುದು ಎನ್ನುತ್ತಾರೆ ಮಧುಮೇಹ ತಜ್ಞ ಡಾ. ಸುಮನ್. ಮಳೆಗಾಲದಲ್ಲಿ ಮಧುಮೇಹಿಗಳು ಯಾವ ರೀತಿಯ ಆಹಾರ ಸೇವಿಸಬೇಕು? ದಿನಚರಿ ಪಾಲಿಸಬೇಕು ಎಂಬುದರ ಕುರಿತು ಅವರು ನೀಡಿರುವ ಮಾಹಿತಿ ಇಲ್ಲಿದೆ.

Vishwavani Money: ಉದ್ಯೋಗ ಬದಲಾಯಿಸಿದಾಗ ಪಿಎಫ್ ಹಣ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ Video

ಪಿಎಫ್ ಹಣ ವರ್ಗಾವಣೆ ಹೇಗೆ?

ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಉದ್ಯೋಗ ಬದಲಿಸಿದಾಗ ಪಿಎಫ್ ಹಣ ವರ್ಗಾವಣೆ ಮಾಡಿಕೊಳ್ಳುವುದು ಈಗ ಮತ್ತಷ್ಟು ಸುಲಭವಾಗಿದೆ. ಇಪಿಎಫ್ ತನ್ನ ಸದಸ್ಯರ ಪೋರ್ಟಲ್ ಅನ್ನು ನವೀಕರಿಸಿದ್ದು, ಇದರಿಂದ ಪಿಎಫ್ ಖಾತೆ ಹಣವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸಲು ಎರಡು ಸುಲಭ ಮಾರ್ಗಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ಮತ್ತಷ್ಟು ಇಳಿಕೆಯಾಗಲಿದೆಯೇ ಚಿನ್ನದ ದರ? Video

ಚಿನ್ನದ ದರ ಇಳಿಕೆ ಕಾರಣವೇನು ?

ವರ್ಷದ ಆರಂಭದಲ್ಲಿ ಏರುತ್ತಲೇ ಸಾಗಿದ ಚಿನ್ನದ ದರ ಜೂನ್ ತಿಂಗಳ ಆರಂಭದಿಂದಲೇ ಕುಸಿತವನ್ನು ದಾಖಲಿಸಿದೆ. ಇದಕ್ಕೆ ಕಾರಣವೇನು, ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಕುಸಿತವಾಗುವುದೇ?, ಮಾರುಕಟ್ಟೆಯ ಯಾವೆಲ್ಲಾ ಅಂಶಗಳು ಚಿನ್ನದ ದರದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಕುರಿತು ಮಾರುಕಟ್ಟೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ತಾಯಿ, ಮಗುವಿನ ಆರೋಗ್ಯಕ್ಕಾಗಿ ಗರ್ಭಿಣಿಯರು ಏನು ತಿನ್ನಬೇಕು? Video

ಗರ್ಭಿಣಿಯರು ಏನು ತಿನ್ನಬೇಕು?

ತಾಯ್ತನ ಎನ್ನುವುದು ಎಷ್ಟು ಸುಂದರವೋ ಅಷ್ಟೇ ಸವಾಲುಗಳನ್ನು ಕೂಡ ತಂದೊಡ್ಡುತ್ತದೆ. ಈ ಸಂದರ್ಭದಲ್ಲಿ ನಾವು ಮಾಡುವ ಸಣ್ಣ ಪುಟ್ಟ ನಿರ್ಲಕ್ಷ್ಯಗಳು ಕೂಡ ಕೆಲವೊಮ್ಮೆ ಗಂಭೀರ ವಿಷಯಕ್ಕೆ ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಸೇವಿಸುವ ಆಹಾರದ ವಿಚಾರದಲ್ಲಿ ನಾವು ನಿರ್ಲಕ್ಷ್ಯ ಮಾಡಲೇಬಾರದು. ಸಂಪೂರ್ಣ ಪೋಷಕಾಂಶಗಳು ಉಳ್ಳ ಆಹಾರ ಈ ಸಂದರ್ಭದಲ್ಲಿ ತಾಯಿ ಮತ್ತು ಮಗುವಿಗೆ ಅವಶ್ಯಕ ಎನ್ನುತ್ತಾರೆ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್.

50 ಲಕ್ಷ ಗೃಹ ಸಾಲದಲ್ಲಿ 29.75 ಲಕ್ಷ ಉಳಿಸುವುದು ಹೇಗೆ? ತಜ್ಞರು ಏನು ಹೇಳುತ್ತಾರೆ? Video

ಗೃಹ ಸಾಲದ ಹೊರೆ ಕಡಿಮೆ ಮಾಡುವುದು ಹೇಗೆ?

ದೀರ್ಘಕಾಲ ಗೃಹ ಸಾಲದ ಇಎಂಐ ಕಟ್ಟುವುದು ಸುಲಭ ಎನಿಸಿದರೂ ಇದು ಭಾರಿ ನಷ್ಟವನ್ನು ಕೂಡ ಉಂಟು ಮಾಡುತ್ತದೆ. ಎಷ್ಟೋ ಬಾರಿ ಸಾಲದ ಮೊತ್ತಕ್ಕಿಂತ ಬಡ್ಡಿ ಮೊತ್ತವೇ ಹೆಚ್ಚಾಗಿ ಬಿಡುತ್ತದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಗೃಹ ಸಾಲವನ್ನು ಮುಕ್ತಾಯಗೊಳಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಅದು ಹೇಗೆ, ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

HD Deve Gowda: ಬೆಂಗಳೂರಿನ ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಮಸಾಲೆ ದೋಸೆ ಸವಿದ ಎಚ್.ಡಿ. ದೇವೇಗೌಡ್ರು Video

ಉಡುಪಿ ಶ್ರೀ ಕೃಷ್ಣ ಭವನದಲ್ಲಿ ಮಸಾಲೆ ದೋಸೆ ಸವಿದ ಎಚ್.ಡಿ. ದೇವೇಗೌಡ್ರು

ಬೆಂಗಳೂರು ನಗರದ ಶಾರದಾ ಪೀಠದ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು, ಬಳೇಪೇಟೆಯ ಉಡುಪಿ ಶ್ರೀ ಕೃಷ್ಣ ಭವನ ಹೋಟೆಲ್‌ನಲ್ಲಿ ಉಪಾಹಾರ ಸೇವಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಧುಮೇಹಿಗಳಲ್ಲಿ  ಮೊದಲು ಕಣ್ಣಿನ ತೊಂದರೆ ಬರುವುದು ಯಾಕೆ? ತಜ್ಞರು ಹೇಳುವುದೇನು? Video

ಶುಗರ್ ಇದ್ದವರಿಗೆ ಮೊದಲು ಕಣ್ಣು ಕುರುಡಾಗುವುದೇಕೆ?

ಮಧುಮೇಹ ಎನ್ನುವುದು ಸೈಲೆಂಟ್ ಕಿಲ್ಲರ್. ಇದು ದೇಹದಲ್ಲಿರುವುದು ಗೊತ್ತಾಗುವುದೇ ಯಾವುದಾದರೂ ಅಂಗಾಂಗ ವೈಫಲ್ಯವಾದಾಗ. ನಮ್ಮ ದೇಹವು ಇದಕ್ಕೆ ಸಾಕಷ್ಟು ಮೊದಲೇ ಮುನ್ಸೂಚನೆಯನ್ನು ನೀಡುತ್ತದೆ. ಆದರೆ ನಾವು ಇದನ್ನು ನಿರ್ಲಕ್ಷಿಸುತ್ತೇವೆ. ಹೀಗಾಗಿ ಮಧುಮೇಹವಿದ್ದರೂ ಅನೇಕರಿಗೆ ತಿಳಿಯುವಾಗ ತಡವಾಗುತ್ತದೆ. ಹೀಗಾಗಿ ಮಧುಮೇಹಿಗಳು ನಿರಂತರ ಆರೋಗ್ಯ ತಪಾಸಣೆ ನಡೆಸಬೇಕು, ಅವು ಯಾವುದು, ಯಾಕಾಗಿ ಎನ್ನುವ ಮಧುಮೇಹ ತಜ್ಞರಾದ ಡಾ. ಸುಮನ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಮದುವೆಗೆ ಸ್ಪೆಷಲ್ ಆಗಿ ಕಾಣಬೇಕಾ? ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ದೀಪಾ ನಾಗೇಶ್ ಸಲಹೆ ಇಲ್ಲಿದೆ Video

ಮದುವೆಗೆ ಸ್ಪೆಷಲ್ ಆಗಿ ಕಾಣಬೇಕಾ? ಇಲ್ಲಿದೆ ಟಿಪ್ಸ್

Bridal makeup: ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ದೀಪ ನಾಗೇಶ್ ಅವರು ವಧುವಿನ ಮೇಕಪ್ ತ್ವಚೆ ಮತ್ತು ತಲೆಗೂದಲಿನ ಆರೈಕೆಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದ್ದಾರೆ. 3ಡಿ ಮೇಕಪ್ ಉತ್ತಮವೇ? ಎಚ್‌ಡಿ ಮೇಕಪ್ ಉತ್ತಮವೇ? ಎಂಬ ಬಗ್ಗೆಯೂ ಅವರು ತಿಳಿಸಿದ್ದಾರೆ.

ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಯಾವ ರೋಗಕ್ಕೆ ಅಹ್ವಾನ? ಈ ಬಗ್ಗೆ ತಜ್ಞರು ಹೇಳೋದೇನು? Video

ಸಿ-ಸೆಕ್ಷನ್ ಹೆರಿಗೆಯಿಂದ ಬರುವ ಅಪಾಯಗಳೇನು?

ಯಾವುದೇ ಕಾರಣಕ್ಕೂ ಸಿ-ಸೆಕ್ಷನ್ ಹೆರಿಗೆಯನ್ನು ಆಯ್ಕೆ ಅಥವಾ ಶಾರ್ಟ್ ಕಟ್ ಆಗಿ ಮಾಡಿಕೊಳ್ಳಬೇಡಿ. ಇದರಿಂದ ಮುಂದೆ ಸಾಕಷ್ಟು ತೊಂದರೆಗಳು ಎದರಾಗಬಹುದು ಎನ್ನುತ್ತಾರೆ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಸಿ-ಸೆಕ್ಷನ್ ಹೆರಿಗೆ ಆಯ್ಕೆಯಿಂದ ಮುಂದೆ ಬರಬಹುದಾದ ತೊಂದರೆಗಳ ಬಗ್ಗೆ ವಿವರಿಸಿರುವುದು ಹೀಗೆ..

ಬೆಲ್ಲ, ಸಕ್ಕರೆ ಸೇವಿಸದೇ ಇದ್ದರೂ ಮಧುಮೇಹ ಕಂಟ್ರೋಲ್‌ಗೆ ಸಿಗ್ತಿಲ್ವ? ಏನಂತಾರೆ ತಜ್ಞರು? Video

ಆಹಾರದ ಬಗ್ಗೆ ಮಧುಮೇಹಿಗಳಿಗೆ ಇರಲಿ ಎಚ್ಚರಿಕೆ

ಬೆಲ್ಲ, ಸಕ್ಕರೆ ಸೇವನೆ ನಿಲ್ಲಿಸಿದ್ದರೂ ಮಧುಮೇಹ ನಿಯಂತ್ರಣಕ್ಕೆ ಬರುತ್ತಿಲ್ಲ ಇದಕ್ಕೆ ಕಾರಣವೇನು?, ಆಹಾರ ಸೇವನೆಯಲ್ಲಿ ಮಧುಮೇಹಿಗಳು ಮಾಡುವ ತಪ್ಪೇನು? ಮಧುಮೇಹಿಗಳು ಆಹಾರ ಸೇವಿಸುವಾಗ ವಹಿಸಬೇಕಾದ ಎಚ್ಚರಿಕೆ ಕ್ರಮಗಳು ಯಾವುದು ? ಈ ಕುರಿತು ಆಹಾರ ತಜ್ಞರಾದ ಡಾ. ಅನಿತಾ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಸಂಪುಟದಲ್ಲಿ ಹೆಚ್ಚುತ್ತಿರುವ ಅಸಮಾಧಾನದ ನಡುವೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ Video

ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿಕೆಶಿ ಭೇಟಿ

Shivakumar Visits Annamma Devi Temple: ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಅಧಿಕಾರ ಸ್ವೀಕರಿಸಿದ್ದು, ಸಚಿವರಿಗೆ ಖಾತೆಯನ್ನೂ ಹಂಚಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಸಂಪುಟದಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಜಲ ಸಂಪನ್ಯೂಲ ಖಾತೆ ನಿರಾಕರಿಸಿ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಕೆ.ಎಚ್‌. ಮುನಿಯಪ್ಪ ಕೂಡ ಅತೃಪ್ತಿ ಪ್ರಕಟಿಸಿದ್ದಾರೆ. ಈ ಮಧ್ಯೆ ಡಿಕೆಶಿ ಬೆಂಗಳೂರಿನ ಪ್ರಸಿದ್ಧ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೇಗ ಮಾತಾಡ್ತಾರೆ? ಏನಂತಾರೆ ತಜ್ಞರು? Video

ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆಯೇ?

ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳು ಬೇಗ ಮಾತನಾಡುತ್ತಾರೆ ಎನ್ನುವ ನಂಬಿಕೆ ಜನರಲ್ಲಿದೆ. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ವ್ಯತ್ಯಾಸಗಳು ಇವೆಯೇ ? ಅವುಗಳ ಬೆಳವಣಿಗೆಯ ವಿವಿಧ ಹಂತಗಳು ಯಾವುದು, ಯಾವ ಸಮಸ್ಯೆಗಳು ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವ ಕುರಿತು ತಜ್ಞರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಾವೇರಿಯಲ್ಲಿ ಉಚಿತ ಸೋಯಾಬಿನ್‌ ಡೆಮೋ ಬಿತ್ತನೆ ಬೀಜ ವಿತರಣೆಗೆ ರೈತರ ಆಗ್ರಹ Video

ಹಾವೇರಿಯಲ್ಲಿ ಉಚಿತ ಸೋಯಾಬಿನ್‌ ಡೆಮೋ ಬೀಜ ವಿತರಣೆಗೆ ಆಗ್ರಹ

Haveri News: ಕೇಂದ್ರ ಸರ್ಕಾರ ನೀಡುವ ಉಚಿತ ಸೋಯಾಬಿನ್‌ ಡೆಮೋ ಬಿತ್ತನೆ ಬೀಜವನ್ನು ರೈತರು ಉತ್ಪಾದನೆ ಮಾಡಿಕೊಳ್ಳಲಿ. ಇದರಿಂದ ಬೀಜದ ಕೊರತೆ ನೀಗಿಸಲು ಸಾಧ್ಯ ಎಂಬ ಮಹತ್ತರ ಯೋಜನೆ ಘೋಷಿಸಲಾಗಿದೆ. ಆದರೆ ಹಾವೇರಿ ಜಿಲ್ಲಾಡಳಿತ ಸರಿಯಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಕೆಲ ರೈತರಿಗೆ ನಾಮಕಾವವಸ್ಥೆ ಬೀಜ ವಿತರಣೆ ಮಾಡಿ, ಬಳಿಕ ಬೀಜ ಖಾಲಿಯಾಗಿದೆ ಎಂದು ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂದು ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧುಮೇಹಿಗಳಿಗೆ ಕಾಡುವ ಚರ್ಮದ ತೊಂದರೆಗಳಿಗೆ ಇದೆ ಪರಿಹಾರ Video

ಮಧುಮೇಹಿಗಳಲ್ಲಿ ಒಣ ಚರ್ಮಕ್ಕೆ ಕಾರಣವೇನು?

ಮಧುಮೇಹಿಗಳಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಕಂಡು ಬರುತ್ತವೆ. ಇದನ್ನು ನಿವಾರಿಸುವುದು, ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ. ಇದಕ್ಕಾಗಿ ಸ್ವಲ್ಪ ಹೆಚ್ಚು ಕಾಳಜಿ ವಹಿಸಬೇಕು ಎನ್ನುತ್ತಾರೆ ಮಧುಮೇಹ ತಜ್ಞರಾದ ಡಾ. ಸುಮನ್. ವಿಶ್ವವಾಣಿ ಹೆಲ್ತ್ ಯೂಟ್ಯೂಬ್ ಚಾನೆಲ್ ನಲ್ಲಿ ಮಧುಮೇಹಿಗಳಲ್ಲಿ ಕಾಡುವ ಚರ್ಮದ ತೊಂದರೆ ಮತ್ತು ಅದಕ್ಕೆ ಪರಿಹಾರ ಈ ಕುರಿತು ನೀಡಿರುವ ಮಾಹಿತಿ ಇಲ್ಲಿದೆ.

ಮಿಥುನ ರಾಶಿಯವರಿಗೆ ಒಂದು ವರ್ಷ ಸುವರ್ಣ ಸಮಯ, ಮುಟ್ಟಿದ್ದೆಲ್ಲಾ ಆಗಲಿದೆ ಚಿನ್ನ Video

ಮಿಥುನ ರಾಶಿಯವರಿಗೆ ಸುವರ್ಣ ಸಮಯ

Guru Graha Effect: ಗುರುವಿನ ಬದಲಾವಣೆಯೂ ಜ್ಯೋತಿಷ್ಯ ಶಾಸ್ತ್ರದ ಅತೀ ಪ್ರಮುಖ ಸಂದರ್ಭ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಣಾಮ ಮಿಥುನ ರಾಶ್ಯಾಧಿಪತಿ ಬುಧನ ಮೇಲೆ ಪ್ರಭಾವ ಬೀರಲಿದ್ದು ಜೀವನದಲ್ಲಿಪ್ರಗತಿಯನ್ನು ತರಲಿದೆ. ಆರ್ಥಿಕವಾಗಿ ಅಭಿವೃದ್ಧಿ ಇದ್ದರೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವಂತಿಲ್ಲ. ಗುರುವಿನ ಬದಲಾವಣೆ ಮಿಥುನ ರಾಶಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಖ್ಯಾತ ಜ್ಯೋತಿಷ್ಯರಾದ ಶ್ರೀ ದೇವದತ್ತ ಶರ್ಮ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

ಇಂಧನ ಉಳಿತಾಯಕ್ಕೆ ಮೋದಿ ಕರೆಗೆ ಬಿ. ವೈ. ವಿಜಯೇಂದ್ರ ಬೆಂಬಲ: ಮೆಟ್ರೋದಲ್ಲಿ ಪ್ರಯಾಣಿಸಿದ ಬಿಜೆಪಿ ರಾಜ್ಯಾಧ್ಯಕ್ಷ Video

ಇಂಧನ ಉಳಿತಾಯಕ್ಕೆ ಮೋದಿ ಕರೆಗೆ ಬಿ. ವೈ. ವಿಜಯೇಂದ್ರ ಬೆಂಬಲ

Vijayendra Travels by Metro: ವಿಜಯೇಂದ್ರ ಅವರು ತಮ್ಮ ಅಧಿಕೃತ ಕಾರು ಮತ್ತು ಬೆಂಗಾವಲು ವಾಹನಗಳನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ರೈಲನ್ನು ಬಳಸಿದ್ದಾರೆ. ಮೆಜೆಸ್ಟಿಕ್‌ನಿಂದ ಕೆಂಗೇರಿವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಅವರು, ಸಾಮಾನ್ಯರಂತೆ ಕ್ಯೂನಲ್ಲಿ ನಿಂತು ಪ್ರಯಾಣಿಸಿದ್ದಾರೆ.

ಕಪ್ಪು, ದಟ್ಟವಾದ ಕೂದಲಿಗೆ ಏನು ಮಾಡಬೇಕು? Video

ಕೂದಲಿನ ಆರೈಕೆ ಹೇಗೆ ?

ಕಪ್ಪು, ದಟ್ಟವಾದ ಕೂದಲು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳುವುದೇ ಸಮಸ್ಯೆ. ಹೆಚ್ಚಾಗಿ ಕೂದಲಿನ ನಾನಾ ರೀತಿಯ ಸಮಸ್ಯೆಗಳಿಗೆ ಸರಿಯಾಗಿ ಎಣ್ಣೆ ಹಚ್ಚದಿರುವುದೇ ಮುಖ್ಯ ಕಾರಣ. ಕೂದಲಿನ ಯಾವ ಸಮಸ್ಯೆಗೆ ಯಾವ ಎಣ್ಣೆ ಹಚ್ಚಬೇಕು ಎನ್ನುವ ಕುರಿತು ವಿಶ್ವವಾಣಿ ಹೆಲ್ತ್ ನಲ್ಲಿ ಆಯುರ್ವೇದಿಕ್ ಬ್ಯೂಟಿ ಥೆರಪಿಸ್ಟ್ ದೀಪಾ ನಾಗೇಶ್ ಅವರು ನೀಡಿರುವ ಮಾಹಿತಿ ಇಲ್ಲಿದೆ.

BSY Abhimanotsava: ಬಗರ್‌ ಹುಕುಂ ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್‌ವೈ: ಜೋಶಿ Video

ಹೋರಾಟದ ಮೂಲಕ ಬಡವರಿಗೆ ನ್ಯಾಯ ಕೊಡಿಸಿದ ರಾಜಾಹುಲಿ ಬಿಎಸ್‌ವೈ

ಬಂಗಾಳದಲ್ಲಿ ನಮ್ಮ ವಿಚಾರಧಾರೆಗೆ ಪ್ರಚಂಡ ಗೆಲುವು ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಈ ಮೊದಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು, ಮತ್ತೊಮ್ಮೆ ಬಿಎಸ್‌ವೈ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಅವರು ಮಾತನಾಡಿದ್ದಾರೆ.

BSY Abhimanotsava: ಬಿಎಸ್‌ವೈ ರಾಜ್ಯ ಕಂಡ ಏಕಮೇವ ಮಾಸ್‌ ಲೀಡರ್‌: ಬೊಮ್ಮಾಯಿ Video

ಬಿಎಸ್‌ವೈ ರಾಜ್ಯ ಕಂಡ ಏಕಮೇವ ಮಾಸ್‌ ಲೀಡರ್‌: ಬೊಮ್ಮಾಯಿ

ವಿರೋಧ ಪಕ್ಷದಲ್ಲಿದ್ದಾಗ ಯಾವುದಕ್ಕಾಗಿ ಹೋರಾಟ ಮಾಡಿದ್ದರೋ ಆ ಬೇಡಿಕೆಗಳನ್ನು ಅಧಿಕಾರಕ್ಕೆ ಬಂದಮೇಲೆ ಈಡೇರಿಸಲು ಬಿ.ಎಸ್‌.ಯಡಿಯೂರಪ್ಪ ಅವರು ಶ್ರಮಿಸಿದ್ದರು. ವಿಜಯಪುರ, ಶಿಗ್ಗಾಂವಿ, ದಾವಣಗೆರೆಯ ರಾಜನಹಳ್ಳಿಯಲ್ಲಿ ಕೆರೆ ತುಂಬಿಸುವ ಯೋಜನೆ ಸೇರಿ ಹಲವು ಯೋಜನೆಗಳನ್ನು ಕೈಗೊಂಡಿದ್ದರು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

BSY Abhimanotsava: ಚಿತ್ರದುರ್ಗದಲ್ಲಿ ಬಿಎಸ್‌ವೈ ಪುರಪ್ರವೇಶ; ಬೃಹತ್‌ ಮೆರವಣಿಗೆ ಮೂಲಕ ಅದ್ಧೂರಿ ಸ್ವಾಗತ Video

ಬಿಎಸ್‌ವೈ ಅದ್ಧೂರಿ ಪುರಪ್ರವೇಶ; ಮೆರವಣಿಗೆ ಮೂಲಕ ಸ್ವಾಗತ

BS Yediyurappa Abhimanotsava: ಬಿಜೆಪಿ ಹಿರಿಯ ನಾಯಕ, ರೈತನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು 50 ವರ್ಷ ಯಶಸ್ವಿ ರಾಜಕೀಯ ಜೀವನ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಲು ʼಬಿಎಸ್‌ವೈ ಅಭಿಮಾನೋತ್ಸವʼ ಕಾರ್ಯಕ್ರಮವನ್ನು ಚಿತ್ರದುರ್ಗದ ಮಾದಾರ ಚೆನ್ನಯ್ಯ ಮೈದಾನದಲ್ಲಿ ನಾಳೆ ಹಮ್ಮಿಕೊಳ್ಳಲಾಗಿದೆ.

ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಕುರ್ಚಿ ಇರುತ್ತದೋ ಇಲ್ಲವೋ ಗೊತ್ತಿಲ್ಲ: ಬೊಮ್ಮಾಯಿ Video

ಮೇ 4ರ ನಂತರ ಸಿದ್ದರಾಮಯ್ಯ ಕುರ್ಚಿ ಇರುತ್ತದೊ ಇಲ್ಲವೊ ಗೊತ್ತಿಲ್ಲ: ಬೊಮ್ಮಾಯಿ

Basavaraj Bommai: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನನಗೂ ಸಿಎಂ ಆಗುವ ಆಸೆ ಇದೆ. ಹಲವರಿಗೂ ಆಸೆ ಇದೆ ಎಂದು ಹೇಳಿದ್ದಾರೆ. ಆದರೆ ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೋ, ಇಲ್ಲವೋ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Loading...