ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಜ್ಯಾದ್ಯಂತ ಭುಗಿಲೆದ್ದ ಆಟೋ ಗ್ಯಾಸ್‌ ಸಮಸ್ಯೆ; ಬೆಂಗಳೂರಿನಲ್ಲಿ ಕಿಲೋ ಮೀಟರ್‌ಗಟ್ಟಲೆ ರಿಕ್ಷಾ ಸಾಲು

LPG Crisis: ಪಶ್ಚಿಮ ಏಷ್ಯಾ ಸಂಘರ್ಷ ಏನಾಗಲಿದೆ ಎನ್ನುವ ಗೊಂದಲ ಒಂದೆಡೆಯಾದರೆ, ರಾಜ್ಯಾದ್ಯಂತ ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಮೀರಿದ ಸಮಸ್ಯೆ ಇದೀಗ ಆಟೋ ಗ್ಯಾಸ್‌ನಲ್ಲಿ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಗ್ಯಾಸ್ ಸಿಗದೆ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕುವಂತಾಗಿದೆ. ರಾಜ್ಯದ ಹಲವು ಭಾಗದಲ್ಲಿ ಆಟೋ ಚಾಲಕರು ಗ್ಯಾಸ್ ತುಂಬಿಸಿಕೊಳ್ಳಲು ಇಡೀ ರಾತ್ರಿ ಸ್ಟೇಷನ್‌ಗಳ ಮುಂದೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೆಂಗಳೂರಿನ ಹಲವು ಎಲ್‌ಪಿಜಿ ಬಂಕರ್‌ಗಳು ಇಂಧನ ಸಿಗದೇ ಬಂದಾಗಿವೆ.

ಬೆಂಗಳೂರು, ಏ. 3: ಬೆಂಗಳೂರಿನ ಸಜ್ಜನ್‌ರಾವ್ ವೃತ್ತ, ಲಾಲ್‌ಭಾಗ್‌ ರಸ್ತೆ, ಬೌರಿಂಗ್ ಇನ್ಸಿಟ್ಯೂಟ್, ಪದ್ಮನಾಭ ನಗರ ಸೇರಿಹಲವೆಡೆ ಇರುವ ಸಿಎನ್‌ಜಿ ಗ್ಯಾಸ್ ಸ್ಟೇಷನ್‌ಗಳ ಮುಂದೆ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ಆಟೋ ಚಾಲಕರು ಎಲ್‌ಪಿಜಿಗಾಗಿ ಪರದಾಡುವ ದೃಶ್ಯ ಸಾಮಾನ್ಯ ಎಂಬಂತಾಗಿದೆ. ಬೆಂಗಳೂರಿನ ಹೊಸಹಳ್ಳಿ, ಮೂಡಲಪಾಳ್ಯ, ಮತ್ತೀಕೆರೆ ಹಾಗೂ ರಾಜಾಜಿ ನಗರದ ರಸ್ತೆಗಳಲ್ಲಿ ಆಟೋಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಲ್ಲುತ್ತಿವೆ. ಬೆಳ್ಳಂಬೆಳಗ್ಗೆ ಬಂಕ್‌ಗಳ ಬಳಿ ಬಂದ ಕೆಲವರು ಗ್ಯಾಸ್ ಸಿಗದೇ ಖಾಲಿ ಕೈಯಲ್ಲಿ ಹಿಂತಿರುಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಟೋ ಚಾಲಕರು, ʼʼಕೊರೋನಾ ಸಮಯದಲ್ಲಿಯೂ ಈ ಪ್ರಮಾಣದಲ್ಲಿ ಸಮಸ್ಯೆಯಾಗಿರಲಿಲ್ಲ. ಇಡೀ ದಿನ ಬಂಕ್ ಮುಂದೆ ಕಳೆದರೆ ಸಂಜೆ ಮನೆಗೆ ಹೋಗುವಾಗ ಏನು ಕೊಂಡೊಯ್ಯಬೇಕು? ದುಡಿಮೆ ಇಲ್ಲದಿದ್ದರೆ ಸಂಸಾರ ನಿಭಾಯಿಸುವುದು ಹೇಗೆ?ʼʼ ಎಂದು ಪ್ರಶ್ನಿಸಿದ್ದಾರೆ. ಇನ್ನು ಅನೇಕ ಬಂಕ್‌ಗಳಲ್ಲಿ ಕೇವಲ 500 ರುಪಾಯಿಯ ಗ್ಯಾಸ್ ನೀಡಲಾಗುತ್ತದೆ ಎನ್ನುವ ಮಾತೂ ಕೇಳಿ ಬಂದಿದೆ. ಗ್ಯಾಸ್‌ ಸಮಸ್ಯೆ ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಇದೇ ಸಮಸ್ಯೆ ಕಂಡುಬರುತ್ತಿದೆ.

Ramesh Ballamoole

View all posts by this author