ಬೆಂಗಳೂರು, ಏ. 4: ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸ್ವಯಂ ಗಣತಿ ಹಾಗೂ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಪಟ್ಟಿ ಮಾಡುವುದು ಮತ್ತು ಮನೆ ಗಣತಿ ನಡೆಯಲಿದೆ. ಆ ಮೂಲಕ ಗಣತಿದಾರರು ಮನೆ ಮನೆಗೆ ಭೇಟಿ ನೀಡುವ ಮುನ್ನವೇ ಸ್ವಯಂ ನೋಂದಣಿಗೆ 15 ದಿನಗಳ ಅವಕಾಶ ನೀಡಲಾಗಿದೆ. ಮನೆಯಲ್ಲಿಯೇ ಕುಳಿತು 10 ನಿಮಿಷದೊಳಗೆ ಆನ್‌ಲೈನ್‌ನಲ್ಲಿ ನೀವೇ ಮಾಹಿತಿ ನೀಡಬಹುದು. ಈ ವೇಳೆ ಯಾವುದೇ ದಾಖಲೆ ನೀಡಬೇಕಾಗಿಲ್ಲ. ಸಂಪೂರ್ಣ ಮಾಹಿತಿ ಈ ವಿಡಿಯೊದಲ್ಲಿದೆ.